ETV Bharat / bharat

ಐದು ದಿನಗಳ ಜಂಟಿ ಅಧಿವೇಶನಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ

author img

By

Published : Nov 17, 2020, 4:18 PM IST

ಬಿಹಾರದಲ್ಲಿ ಎನ್​ಡಿಎ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇಂದು ಮೊದಲ ಸಚಿವ ಸಂಪುಟ ಸಭೆ ಜರುಗಿತು. ಈ ವೇಳೆ ಐದು ದಿನಗಳ ಕಾಲ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಅನುಮತಿ ನೀಡಲಾಗಿದೆ.

File Photo
ಸಂಗ್ರಹ ಚಿತ್ರ

ಪಾಟ್ನಾ (ಬಿಹಾರ): ರಾಜ್ಯದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ನವೆಂಬರ್ 23 ರಿಂದ ಐದು ದಿನಗಳ ಕಾಲ ವಿಧಾನಮಂಡಳದ ಜಂಟಿ ಅಧಿವೇಶನಕ್ಕೆ ಅನುಮತಿ ನೀಡಿದೆ.

ಇಂದು ನಡೆದ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದ್ದು, ನವೆಂಬರ್ 23 ರಿಂದ ನವೆಂಬರ್ 27 ರವರೆಗೆ ವಿಧಾನಸಭೆಯ 17ನೇ ವಿಧಾನಸಭೆ ಕಲಾಪ ಹಾಗೂ 196ನೇ ಅಧಿವೇಶನವನ್ನು ಕರೆಯುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ.

ಈಟಿವಿ ಭಾರತ್​ ಪ್ರತಿನಿಧಿಯಿಂದ ವಿಶ್ಲೇಷಣೆ

ಉಭಯ ಸದನಗಳ ಜಂಟಿ ಸಭೆಯ ಸಂದರ್ಭದಲ್ಲಿ ರಾಜ್ಯಪಾಲರ ಭಾಷಣದ ಕರಡನ್ನು ಅನುಮೋದಿಸಲು ಸಚಿವ ಸಂಪುಟ ಮುಖ್ಯಮಂತ್ರಿಗೆ ಅಧಿಕಾರ ನೀಡಿದ್ದು, ಹೊಸದಾಗಿ ರಚನೆಯಾದ 17ನೇ ವಿಧಾನಸಭೆಯ ಸದಸ್ಯರು ಈ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಅಧಿವೇಶನದಲ್ಲಿಯೇ ವಿಧಾನಸಭೆಯ ಸ್ಪೀಕರ್ ಕೂಡ ಆಯ್ಕೆಯಾಗಲಿದ್ದಾರೆ.

ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವು ಇತರ ಹದಿನಾಲ್ಕು ಮಂತ್ರಿಗಳನ್ನು ಹೊಂದಿದ್ದು, ಬಿಜೆಪಿಯ ತರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಇಬ್ಬರು ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.