ETV Bharat / bharat

ರಾಶಿ ಭವಿಷ್ಯ... ಈ ವಾರ ಹೇಗಿದೆ ನೋಡಿ ನಿಮ್ಮ ಯೋಗಾಯೋಗ

author img

By

Published : Dec 9, 2019, 4:01 AM IST

ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ಅಂತಾ ನೋಡಿ ಈಟಿವಿ ಭಾರತ್​​ನಲ್ಲಿ.

this week astrology
ಈ ವಾರದ ರಾಶಿ ಭವಿಷ್ಯ

ಮೇಷ :

ಈ ವಾರ, ಉದ್ಯಮಿಗಳು ಅವರ ವ್ಯವಹಾರದ ಪ್ರಯೋಜನಕ್ಕೆ ಸಂಬಂಧಿಸಿ ಹೊಸ ಜನರೊಂದಿಗೆ ಸಂಪರ್ಕ ಹೊಂದಲಿದ್ದಾರೆ ಮತ್ತು ಭೇಟಿ ಮಾಡಲಿದ್ದಾರೆ. ನೀವು ನಿಮ್ಮ ಹಳೆಯ ಸ್ನೇಹಿತರು ಅಥವಾ ಪ್ರೀತಿಪಾತ್ರರನ್ನು ಭೇಟಿಯಾಗಬಹುದು, ಇದು ನಿಮಗೆ ಹೆಚ್ಚಿನ ಸಂತೋಷವನ್ನು ತರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರುವಂತೆ ಸಲಹೆ ನೀಡಲಾಗುತ್ತದೆ;ನೀವು ಅತಿಯಾದ ಕಾರ್ಯದೊತ್ತಡ ತೆಗೆದುಕೊಳ್ಳವುದನ್ನು ತಪ್ಪಿಸಬೇಕು. ಅಧಿಕ ಕಾರ್ಯದೊತ್ತಡದಿಂದಾಗಿ ಬೆನ್ನು ನೋವು ಅಥವಾ ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಬಹುದು. ಯಾವುದೇ ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಅವರೊಂದಿಗೆ ಮಾತನಾಡುವಾಗ ನಿಮ್ಮ ಮಾತಿನ ಮೇಲೆ ನಿಯಂತ್ರಣವಿರುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಈ ವಾರದ ಮಧ್ಯಭಾಗದಲ್ಲಿ, ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆಯಿದೆ. ನೀವು ನಿಮ್ಮ ಸ್ನೇಹಿತರಿಂದ ಉಡುಗೊರೆಗಳನ್ನು ಪಡೆಯುವಿರಿ. ನಿಮ್ಮ ಸಂಬಂಧಿಕರು ಮತ್ತು ಕುಟುಂಬ ಸದಸ್ಯರೊಂದಿಗಿನ ನಿಮ್ಮ ಆತ್ಮೀಯತೆಯು ಹೆಚ್ಚಾಗಲಿದೆ. ನಿಮ್ಮ ವ್ಯವಹಾರವನ್ನು ವೃದ್ಧಿಸುವ ಬಗ್ಗೆ ಅಥವಾ ದೀರ್ಘಾವಧಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಗೊಂದಲಕ್ಕೆ ಒಳಗಾಗಬಹುದು. ವಿದ್ಯಾರ್ಥಿಗಳು ಅವರ ಓದಿನಲ್ಲಿ ಏಕಾಗ್ರತೆಯನ್ನು ಹೊಂದುತ್ತಾರೆ ಆದರೆ ಕೆಟ್ಟ ಪ್ರಭಾವ ಬೀರುವ ಸ್ನೇಹಿತರ ಬಗ್ಗೆ ಎಚ್ಚರದಿಂದಿರಬೇಕು.

ವೃಷಭ :

ನೀವು ಈ ವಾರದ ಪ್ರಾರಂಭದಲ್ಲಿ ಸ್ವಲ್ಪ ಉದ್ವೇಗಕ್ಕೆ ಒಳಗಾಗುವಿರಿ. ಈ ವಾರವು ಪ್ರಯಾಣ ಮಾಡಲು ನಿಮಗೆ ಅನುಕೂಲಕರವಾಗಿರುವುದಿಲ್ಲ ನಿಮಗೆ ಹೊಟ್ಟೆ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕು. ನಿಮ್ಮ ಹೊಸ ಸಂಬಂಧವು ನಿಮ್ಮ ಚಿಂತೆಗೆ ಮುಖ್ಯ ಕಾರಣವಾಗಿರುತ್ತದೆ ಆದ್ದರಿಂದ ನೀವು ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದನ್ನು ತಪ್ಪಿಸಬೇಕು. ಅವಿವಾಹಿತರು ಈ ವಾರದ ಅವಧಿಯಲ್ಲಿ ಸೂಕ್ತ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಮತ್ತು ಭೇಟಿಯಾಗಲು ಶಕ್ತರಾಗುತ್ತಾರೆ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸುವ ಮೂಲಕ ಮುಖ್ಯ ವಿಚಾರಗಳನ್ನು ಪರಿಹರಿಸಲು ಶಕ್ತರಾಗುವಿರಿ. ನೀವು ನಿಮ್ಮ ಮನೆ ಅಲಂಕಾರಕ್ಕಾಗಿ ಖರ್ಚು ಮಾಡುವಿರಿ. ನೀವು ಉದ್ಯಮ ಪ್ರವಾಸಕ್ಕೆ ತೆರಳಬಹುದು. ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಲು, ನಿಯಮಿತ ವ್ಯಾಯಮ ಮಾಡುವುದು ಮತ್ತು ಆರೋಗ್ಯಕರ ಆಹಾರಕ್ರಮ ಹೊಂದುವಂತೆ ನಿಮಗೆ ಶಿಫಾರಸು ಮಾಡಲಾಗುತ್ತದೆ. ಜನರೊಂದಿಗಿನ ನಿಮ್ಮ ವರ್ತನೆಯು ವಿನಯ ಹಾಗೂ ಮೃದು ಆಗಿರುತ್ತದೆ. ನೀವು ನಿಮ್ಮ ದೈನಂದಿನ ಜೀವನದಿಂದ ಏನಾದರೂ ಹೊಸದನ್ನು ಪ್ರಾರಂಭಿಸಲು ಪ್ರೇರಣಗೊಳ್ಳುವಿರಿ. ವಿದ್ಯಾರ್ಥಿಗಳಿಗೆ ಈ ವಾರ ನಿರಾಳತೆ ಸಿಗಲಿದೆ.

ಮಿಥುನ :

ನೀವು ನಿಮ್ಮ ಹಿರಿಯರೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ. ಆದರೂ ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಾಧಾರಣವಾಗಿರುತ್ತದೆ. ನಿಮ್ಮ ಪ್ರೀತಿ ಜೀವನವು ಕೂಡಾ ನೀರಸವಾಗಿರುತ್ತದೆ. ನೀವು ನಿಮ್ಮ ಸಂಗಾತಿಯ ಭಾವನೆಗಳ ಬಗ್ಗೆ ಗಮನ ನೀಡಬೇಕು ಇಲ್ಲವಾದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ. ನೀವು ನಿಮ್ಮ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಣುವಿರಿ. ನಿಮ್ಮ ಆದಾಯವು ಹೆಚ್ಚಾಗಬಹುದು ಮತ್ತು ನಿಮ್ಮ ಸಂಪತ್ತಿನಲ್ಲಿ ಹೆಚ್ಚಳ ಉಂಟಾಗುವುದನ್ನು ನೀವು ಕಾಣುವಿರಿ. ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಲಿದೆ. ಸಂಕ್ಷಿಪ್ತವಾಗಿ, ಈ ವಾರವು ನಿಮಗೆ ಸಂಪೂರ್ಣ ಸಕಾರಾತ್ಮಕತೆಯಾಗಲಿದೆ. ಈ ವಾರದ ಮಧ್ಯಭಾಗದಲ್ಲಿ ನೀವು ಸ್ವಲ್ಪ ಗೊಂದಲಕ್ಕೆ ಒಳಗಾಗುವಿರಿ, ಆದರೆ ನೀವು ಶಾಂತ ಹಾಗೂ ಸ್ಥಿರವಾಗಿರಬೇಕು. ಈ ವಾರದ ಕೊನೆಯ ಎರಡು ದಿನಗಳಲ್ಲಿ, ನಿಮ್ಮ ಖರ್ಚು ಹೆಚ್ಚಾಗಲಿದೆ ಮತ್ತು ನೀವು ನಿಮ್ಮ ಕುಟುಂಬಕ್ಕೆ ವೆಚ್ಚಮಾಡಲು ಹಿಂಜರಿಯುವುದಿಲ್ಲ. ಹಣದ ಬಲದಲ್ಲಿ ಪರವಶಗೊಳ್ಳಬೇಡಿ, ಇಲ್ಲವಾದಲ್ಲಿ ಅದು ನಿಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಕರ್ಕಾಟಕ :

ನೀವು ಹೆಚ್ಚಿನ ಉತ್ಸಾಹದೊಂದಿಗೆ ವಾರವನ್ನು ಪ್ರಾರಂಭಿಸುವಿರಿ ಮತ್ತು ನಿಮ್ಮ ವೃತ್ತಿಯು ನಿಮ್ಮ ಮುಖ್ಯ ಆದ್ಯತೆಯಾಗಿರುತ್ತದೆ. ನಿಮ್ಮ ಕುಟುಂಬ ಜೀವನವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ನಿರೀಕ್ಷಿತ ಯಶಸ್ಸು ಪಡೆಯುವಿರಿ. ಆದರೂ ಕಠಿಣ ಶ್ರಮಕ್ಕೆ ಯಾವುದೇ ತಡೆ ಇರುವುದಿಲ್ಲ ಎಂಬುದನ್ನು ಅವರು ನೆನಪಲ್ಲಿಡಬೇಕು. ಉದ್ಯೋಗಿಗಳು ಮತ್ತು ಉದ್ಯಮಿಗಳು ಅವರು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುತ್ತಾರೆ. ಈ ಅಧಿಯಲ್ಲಿ ನೀವು ದೀರ್ಘಾವಧಿ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬಹುದು. ನೀವು ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಇರಬಹುದು.ನೀವು ನಿಮ್ಮ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ನೀವು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ನಿಮ್ಮ ಅಹಂ ಅನ್ನು ನಿಯಂತ್ರಿಸುವಂತೆ ಸಲಹೆ ನೀಡಲಾಗುತ್ತದೆ. ಕೊನೆಯ ಎರಡು ದಿನಗಳಲ್ಲಿ, ಕಾಲಿಕ ಬದಲಾವಣೆಯಿಂದ, ನಿಮಗೆ ಜ್ವರ ಅಥವಾ ಅಜೀರ್ಣ ಸಮಸ್ಯೆ ಉಂಟಾಗಬಹುದು. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸುತ್ತಾಟಕ್ಕೆ ತೆರಳಬಹುದು. ನೀವು ನಿಮ್ಮ ಕುಟುಂಬದ ಸಂತೋಷಕ್ಕಾಗಿ ಗ್ಯಾಜೆಟ್ ಅಥವಾ ವಾಹನ ಖರೀದಿಸಬಹುದು.

ಸಿಂಹ :

ಈ ವಾರದ ಪ್ರಾರಂಭದಲ್ಲಿ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ಮತ್ತು ನಿಮ್ಮ ಬಾಲ್ಯದ ದಿನಗಳ ನೆನಪಿನಲ್ಲಿ ಕಳೆದುಹೋಗುವಿರಿ. ನಿಮ್ಮ ಆದಾಯದೊಂದಿಗೆ ಸಮಾಜ, ಕಚೇರಿ, ವ್ಯವಹಾರ ವಲಯ ಮತ್ತು ಮನೆಯಲ್ಲಿ ನಿಮ್ಮ ಗೌರವವು ಹೆಚ್ಚಾಗಲಿದೆ. ನೀವು ನಿಮ್ಮ ಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸುವಿರಿ. ನಿಮ್ಮ ಒಡಹುಟ್ಟಿದವರು ನಿಮಗೆ ಪ್ರಯೋಜನಕಾರಿಯಾಗಲಿದ್ದಾರೆ. ನೀವು ನಿಮ್ಮ ಸ್ನೇಹಿತರೊಂದಿಗೆ ಸುತ್ತಾಟಕ್ಕೆ ತೆರಳುವಿರಿ ಮತ್ತು ಮನರಂಜನೆ ಮಾಡುವಿರಿ. ನೀವು ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಮತ್ತು ಹೂಡಿಕೆಗಳಲ್ಲಿಯೂ ತೊಡಗಿಕೊಳ್ಳಬಹುದು. ನಿಮ್ಮ ಹಿರಿಯರು ನಿಮಗೆ ಸಹಕಾರ ನೀಡಲಿದ್ದಾರೆ ಮತ್ತು ಈ ವಾರದ ಕೊನೆಯ ದಿನಗಳಲ್ಲಿನಿಮಗೆ ಪ್ರಯೋಜನಕಾರಿಯೂ ಆಗಲಿದ್ದಾರೆ. ನೀವು ಹೆಚ್ಚು ಉತ್ಸಾಹದಿಂದ ಇರುವಿರಿ. ನೀವು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ನಿಮ್ಮ ನವೀನ ಆಲೋಚನೆಗಳು ಮತ್ತು ಕಠಿಣ ಶ್ರಮದಿಂದ ನಿಮ್ಮ ಮೇಲಾಧಿಕಾರಿಗಳನ್ನು ಖುಷಿಪಡಿಸುವ ಸಾಧ್ಯತೆಯು ಅಧಿಕವಾಗಿದೆ. ಹೆಚ್ಚು ಜಾಣತನದಿಂದ ಇರುವಂತೆ ಸಲಹೆ ನೀಡಲಾಗುತ್ತದೆ ಇದರಿಂದ ನಿಮ್ಮ ಒಳ್ಳೆಯ ಸ್ವಭಾವದ ಪ್ರಯೋಜನವನ್ನು ಯಾರೂ ಪಡೆಯುವುದಿಲ್ಲ. ಈ ವಾರ ನಿಮ್ಮ ಕ್ರೀಯಾಶೀಲತೆಯು ಅತ್ಯುನ್ನತವಾಗಿರುತ್ತದೆ.

ಕನ್ಯಾ :

ನಿಮ್ಮ ಸುತ್ತಲಿರುವ ಜನರಿಗೆ ನೋವು ಉಂಟುಮಾಡುವುದನ್ನು ತಪ್ಪಿಸಲು ನೀವು ಎಚ್ಚರಿಕೆಯಿಂದ ಇರುವಂತೆ ಮತ್ತು ನಿಮ್ಮ ಅಹಂ ಅನ್ನು ನಿಯಂತ್ರಿಸುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಈ ಅವಧಿಯಲ್ಲಿ ನೀವು ಸ್ವಲ್ಪ ಗೊಂದಲಕ್ಕೆ ಒಳಗಾಗುವಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಉಂಟಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಉತ್ತಮವಾಗಿರುವುದಿಲ್ಲ, ನಿಮಗೆ ನಿಮ್ಮ ಹೃದಯದಲ್ಲಿ ನೋವು ಕಾಣಿಸಿಕೊಳ್ಳಬಹುದು. ಈ ವಾರದ ಮಧ್ಯಭಾಗದದಿಂದ ನಿಮ್ಮ ರೈಲು ಪಥದಲ್ಲಿ ಸಾಗುತ್ತದೆ ಮತ್ತು ನೀವು ಉತ್ಸಾಹ ಹೊಂದುವಿರಿ. ನೀವು ನಿಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಪಿಕ್ನಿಕ್ ತೆರಳಲು ಯೋಜನೆ ರೂಪಿಸಬಹುದು. ಈ ವಾರದ ಕೊನೆಯ ದಿನಗಳಲ್ಲಿ ಏನಾದರೂ ಹೊಸದನ್ನು ಪ್ರಾರಂಭಿಸಲು ನೀವು ಹಲವು ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೊನೆಯ ಎರಡು ದಿನಗಳಲ್ಲಿ ನೀವು ನಿಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹೊಂದುವಿರಿ. ವಿದ್ಯಾರ್ಥಿಗಳು ಈ ವಾರದ ಮಧ್ಯಭಾಗದಿಂದ ಧನಾತ್ಮಕ ಭಾವನೆಯನ್ನು ಹೊಂದಲಿದ್ದಾರೆ. ನಿಮ್ಮ ಕಚೇರಿ ಮತ್ತು ಮನೆಯ ಸುತ್ತಲಿನ ವಾತಾವರಣವನ್ನು ಸುಧಾರಿಸಲು ನಿಮಗೆ ಖರ್ಚಾಗಬಹುದು ಮತ್ತು ನೀವು ಆತ್ಮವಿಶ್ವಾಸ ಹೊಂದುವಿರಿ.

ತುಲಾ :

ನಿಮ್ಮ ಆರಾಮದಾಯಕತೆಯನ್ನು ಹೆಚ್ಚಿಸುವ ವಸ್ತುಗಳನ್ನು ನೀವು ಖರೀದಿಸಬಹುದು. ಉದ್ಯೋಗಿಗಳು ಬಡ್ತಿ ಹೊಂದಬಹುದು. ಕೆಲವು ಕನಸುಗಳನ್ನು ಸಾಧಿಸುವ ನಿಮ್ಮ ಅಪೇಕ್ಷೆಯು ಈಡೇರಲಿದೆ. ಈ ವಾರದ ಮಧ್ಯಭಾಗದಲ್ಲಿ ನಿಮಗೆ ಆಯಾಸವಾಗಬಹುದು, ಆದರೆ ಈ ಹಂತವನ್ನು ನೀವು ವಿಶ್ರಾಂತಿ ಎಂದು ಪರಿಗಣಿಸಬೇಕು ಮತ್ತು ಬಿಟ್ಟುಬಿಡಬಾರದು. ನೀವು ನಿಮ್ಮ ಕೋಪವನ್ನು ನಿಯಂತ್ರಿಸಬೇಕು ಅಥವಾ ನೀವು ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಸಂಘರ್ಷಕ್ಕೆ ಒಳಗಾಗಬಹುದು. ವಿದೇಶಕ್ಕೆ ತೆರಳುವ ನಿಮ್ಮ ಯೋಜನೆಯು ಈ ವಾರ ಕಾರ್ಯಗತಗೊಳ್ಳಬಹುದು. ನೀವು ಕೃಷಿ. ಆಟೋಮೊಬೈಲ್ ಅಥವಾ ಸ್ಥಿರಾಸ್ತಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಲ್ಲಿ, ಈ ವಾರವು ನಿಮಗೆ ಅದ್ಭುತವಾಗಿರಲಿದೆ. ನೀವು ನಿಮ್ಮ ಪ್ರೀತಿ ಜೀವನ ಅಥವಾ ವೈವಾಹಿಕ ಜೀವನವನ್ನು ಆನಂದಿಸಬಹುದು , ಆದರೂ 10 ಮತ್ತು 12ರಂದು ನೀವು ಎಚ್ಚರದಿಂದ ಇರಬೇಕು. ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೊಂದುತ್ತಾರೆ, ಆದರೆ ವಾರದ ಮಧ್ಯಭಾಗವು ಅವರಿಗೆ ಸ್ವಲ್ಪ ಗೊಂದಲವನ್ನು ತರುತ್ತದೆ. ನಿಮ್ಮ ಆರೋಗ್ಯವು ನಿಮಗೆ ಸಹಕಾರ ನೀಡಲಿದೆ.

ವೃಶ್ಚಿಕ :

ನಿಮ್ಮ ವೃತ್ತಿ ಜೀವನವು ಉತ್ತಮವಾಗಿ ಪ್ರಾರಂಭಗೊಳ್ಳಬಹುದು ಆದರೆ ನಿಮ್ಮ ಕಹಿ ಮಾತುಗಳಿಂದಾಗಿ, ನಿಮಗೆ ಹಿನ್ನಡೆ ಉಂಟಾಗಬಹುದು. ನೀವು ಅದನ್ನು ದಾಟಿ ಹೋಗುವಿರಿ ಮತ್ತು ಉತ್ತಮ ಹಾದಿಯನ್ನು ಹೊಂದುತ್ತೀರಿ ಎಂಬುದನ್ನು ನೀವು ನೆನಪಲ್ಲಿಡಬೇಕು. ನಿಮ್ಮ ಮನಸ್ಸು ಅತ್ಯಂತ ಉತ್ಸಾಹದಿಂದ ಇರುತ್ತದೆ. ಈ ವಾರದ ಪ್ರಥಮಾರ್ಧದಲ್ಲಿ ನೀವು ನಿಮ್ಮ ಇಷ್ಟದ ವಿಷಯಗಳಲ್ಲಿ ಹೆಚ್ಚು ಆಳಕ್ಕೆ ಹೋಗಬಹುದು. ನಿಮ್ಮ ಮಕ್ಕಳು ನಿಮ್ಮಿಂದ ಹೊಸ ವಸ್ತುಗಳನ್ನು ಕೇಳಬಹುದು, ಮತ್ತು ನೀವು ಅವುಗಳಲ್ಲಿ ಕೆಲವನ್ನು ಪೂರೈಸುವಿರಿ. ನಿಮ್ಮ ಕುಟುಂಬ ಜೀವನ ಮತ್ತು ಪ್ರೀತಿ ಜೀವನವು ಪಥದಲ್ಲಿ ಇರುತ್ತದೆ ಮತ್ತು ನೀವು ಎರಡನ್ನೂ ಆನಂದಿಸುವರಿ. ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ನೀವು ನಿಮ್ಮ ಸಂವಹನದಲ್ಲಿ ಸ್ಪಷ್ಟವಾಗಿರುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಈ ಅವಧಿಯಲ್ಲಿನ ನಿಮ್ಮ ಗಡಿಬಿಡಿಯು ನಿಮಗೆ ಭವಿಷ್ಯದ್ಲಿ ಅದ್ಭುತ ಫಲಿತಾಂಶವನ್ನು ತರಲಿದೆ. ಈ ವಾರದ ಕೊನೆಯ ದಿನಗಳಲ್ಲಿ, ನೀವು ಹೆಚ್ಚು ಧಾರ್ಮಿಕರಾಗುವಿರಿ. ಈ ವಾರವು ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಧನು :

ಈ ವಾರವು ಭೂಮಿ, ವಾಹನ ಅಥವಾ ಮನೆಯ ಅಂತಿಮ ದಾಖಲೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುಕೂಲಕರ ಸಮಯವಾಗಿರುತ್ತದೆ. ನೀವು ಋಣಾತ್ಮಕ ಭಾವನೆಗಳನ್ನು ಹೊಂದುವಿರಿ ಮತ್ತು ಖಿನ್ನತೆಗೆ ಒಳಗಾಗುವಿರಿ, ಆದರೆ ಈ ಅವಧಿಯಲ್ಲಿ ನೀವು ಒಳ್ಳೆಯ ವಿಷಯಗಳ ಬಗ್ಗೆ ಗಮನ ಹರಿಸಬೇಕು ಮತ್ತು ನಿಮ್ಮ ಮನಸ್ಸನ್ನು ಬದಲಾಯಿಸುವಂತೆ ಮತ್ತು ಶಾಂತಿಯಿಂದ ಇರಿಸುವಂತೆ ದೇವರಲ್ಲಿ ಪ್ರಾರ್ಥಿಸಬೇಕು. ನಿಮ್ಮ ಸಂಬಂಧವು ಬಣ್ಣಗಳಿಂದ ಕೂಡಿರುತ್ತದೆ. ನಿಮ್ಮ ಪ್ರೀತಿ ಜೀವನವು ನಿಮಗೆ ಹೆಚ್ಚು ಸಂತೋಷದಿಂದಿರುವಂತೆ ಮಾಡುತ್ತದೆ. ನೀವು ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ನೀವು ನಿಮ್ಮ ಸ್ನೇಹಿತರೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ. ನೀವು ಕ್ರಿಯಾಶೀಲರಾಗಬಹುದು. ಧಾರ್ಮಿಕ ವಿಷಯಗಳಲ್ಲಿನ ನಿಮ್ಮ ಆಸಕ್ತಿಯು ಹೆಚ್ಚಾಗಲಿದೆ. ಸಂಘರ್ಷಗಳನ್ನು ತಪ್ಪಿಸಲು ನಿಮ್ಮ ವೈವಾಹಿಕ ಜೀವನದಲ್ಲಿ ಜವಾಬ್ಧಾರಿಯಿಂದ ಇರುವಂತೆ ನಿಮಗೆ ಸಲಹೆ ನೀಡಲಾಗುತ್ತದೆ. ನೀವು ಪಾಲುದಾರಿಕೆ ವ್ಯವಹಾರ ಹೊಂದಿದ್ದಲ್ಲಿ, ನೀವು ಹೆಚ್ಚು ತಾಳ್ಮೆಯಿಂದ ಇರಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಈ ವಾರದ ಪ್ರಾರಂಭವು ಅನುಕೂಲಕರವಾಗಿರುತ್ತದೆ.ಆದರೆ ವಾರದ ಕೊನೆಯ ದಿನಗಳಲ್ಲಿ ಹೆಚ್ಚು ಗಮನ ಹರಿಸಬೇಕು. ಕಾನೂನು ವಿಚಾರಗಳಲ್ಲಿ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದೇ ಇರಬಹುದು.

ಮಕರ :

ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಮೌಲ್ಯಯುತ ಸಮಯ ಕಳೆಯಬಹುದು. ನಿಮ್ಮ ಹಿರಿಯರು ನಿಮಗೆ ಸಹಕಾರ ನೀಡಬಹುದು ಮತ್ತು ನೀವು ಸಂತೋಷದಿಂದ ಇರುವಿರಿ. ನಿಮ್ಮ ಕುಟುಂಬ ಸದಸ್ಯರ ಮುಖದಲ್ಲಿ ನಗುವನ್ನು ತರಿಸುವಲ್ಲಿ ನಿಮಗೆ ಯಾವುದೇ ಕೊರತೆ ಇರುವುದಿಲ್ಲ. ನೀವು ನಿಮ್ಮಿಂದ ದೂರ ವಾಸಿಸುತ್ತಿರುವ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಂದ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಒಡಹುಟ್ಟಿದವರು ಮತ್ತು ನೆರೆಹೊರೆಯವರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ನೀವು ಉತ್ಸಾಹ ಹೊಂದುವಿರಿ. ನಿಮ್ಮ ಪ್ರೀತಿಪಾತ್ರರೊಂದಿಗಿನ ಆತ್ಮೀಯತೆಯು ನಿಮಗೆ ಖುಷಿಯ ಭಾವನೆಯನ್ನು ತರುತ್ತದೆ. ಆದರೂ ಪ್ರೀತಿಗಿಂತ ಹೆಚ್ಚಿನ ಆಕರ್ಷಣೆಯು ಉಂಟಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಅತಿಯಾಗಿ ಆಲೋಚಿಸದಂತೆ ನಿಮಗೆ ಸಲಹೆ ನೀಡಲಾಗುತ್ತದೆ. ನೀವು ಅದ್ಭುತ ಅವಕಾಶಗಳನ್ನು ಪಡೆಯುವಿರಿ ಮತ್ತು ಪರಿಣಾಮವಾಗಿ ನಿಮ್ಮ ಆದಾಯವು ಹೆಚ್ಚಾಗಲಿದೆ. ಏನಾದರೂ ಹೊಸದನ್ನು ಪ್ರಾರಂಭಿಸಲು ಈ ವಾರವು ನಿಮಗೆ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳು ಹೊಸದನ್ನು ಕಲಿಯಲು ಹೆಚ್ಚು ಉತ್ಸಾಹ ಹೊಂದುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರದಂತೆ ಸಲಹೆ ನೀಡಲಾಗುತ್ತದೆ.

ಕುಂಭ :

ನ್ಯಾಯಾಲಯ ವಿಚಾರಗಳು ಈ ವಾರ ಪರಿಹಾರಗೊಳ್ಳಬಹುದು. ನೀವು ನಿಮ್ಮ ವೃತ್ತಿ ಜೀವನದಲ್ಲಿ ಒತ್ತಡಕ್ಕೆ ಒಳಗಾಗುವಿರಿ ಮತ್ತು ಅದರಿಂದ ಪ್ರಯೋಜನವನ್ನೂ ಪಡೆಯುತ್ತೀರಿ. ನಿಮ್ಮ ವೃತ್ತಿ ಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿಮ್ಮ ಸಂವಹನದಲ್ಲಿ ಸ್ಪಷ್ಟತೆ ಇರಿಸಿಕೊಳ್ಳಿ. ನೀವು ನಿಮ್ಮ ಮನೆಗೆ ವಸ್ತುಗಳನ್ನು ಖರೀದಿಸಲು ಖರ್ಚು ಮಾಡಬಹುದು. ನಿಮ್ಮ ಆತ್ಮವಿಶ್ವಾಸ ಮತ್ತು ನಿರ್ಧಾರ ಕೈಗೊಳ್ಳುವಿಕೆ ಸಾಮರ್ಥ್ಯವು ಹೆಚ್ಚಾಗಲಿದೆ. ನಿಮ್ಮ ಹಿರಿಯರು ನಿಮಗೆ ಪ್ರಯೋಜನಕಾರಿಯಾಗಲಿದ್ದಾರೆ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗಲಿದೆ. ನೀವು ವಾರದ ಪ್ರಾರಂಭದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಅದ್ಭುತ ಸಮಯ ಕಳೆಯುವಿರಿ. ನಿಮ್ಮ ಕೌಟುಂಬಿಕ ಜೀವನವು ಕೂಡಾ ಉತ್ಸಾಹದಿಂದ ಕೂಡಿರುತ್ತದೆ. ಈ ವಾರ ನೀವು ಹೂಡಿಕೆಯಲ್ಲಿ ತೊಡಗಬಹುದು. ವಾರದ ಕೊನೆಯ ಹಂತದಲ್ಲಿ, ನಿಮ್ಮ ಭಾವನೆಗಳು ನಿಮಗೆ ಸಮಸ್ಯೆಗಳನ್ನು ಉಂಟು ಮಾಡಬಹುದು ಅಥವಾ ನಿಮಗೆ ಕಿರಿಕಿರಿ ತರಬಹುದು. ವಿದ್ಯಾರ್ಥಿಗಳು ವಿಶೇಷವಾಗಿ ಈ ವಾರದ 13 ಮತ್ತು 14ರಂದು ಅವರ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಹೆಚ್ಚು ಶ್ರಮಪಡಬೇಕಾಗುತ್ತದೆ.

ಮೀನ :

ಈ ವಾರದ ಅವಧಿಯಲ್ಲಿ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಅದ್ಭುತ ಸಮಯವನ್ನು ಕಳೆಯುವಿರಿ. ನೀವು ನಿಮ್ಮ ಹಿರಿಯರೊಂದಿಗೆ ಮುಖ್ಯ ಚರ್ಚೆಯಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಆತ್ಮವಿಶ್ವಾಸ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವು ಉತ್ತುಂಗದಲ್ಲಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗಲಿದೆ. ಕಾರ್ಯದೊತ್ತಡದಿಂದಾಗಿ, ನಿಮಗೆ ಸಂಧುನೋವು, ಬೆನ್ನುಹುರಿ ಸಮಸ್ಯೆ ಮತ್ತು ಆಸಿಡಿಟಿ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಅನಿಯಮಿತ ಆಹಾರ ಕ್ರಮಗಳಿಂದಾಗಿ ನಿಮಗೆ ಅಜೀರ್ಣ ಸಮಸ್ಯೆಗಳು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಈ ವಾರ ಸಾಧಾರಣವಾಗಿರುತ್ತದೆ. ನೀವು ಎಲ್ಲಾ ಬೌದ್ಧಿಕ ಚರ್ಚೆಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದುವಿರಿ. ನೀವು ನಿಮ್ಮ ಒರಟು ಸ್ವಭಾವವನ್ನು ಬದಿಗಿರಿಸಬೇಕು. ನೀವು ಹಣಕಾಸು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ನಿಮ್ಮ ಒಡಹುಟ್ಟಿದವರು ನಿಮಗೆ ಸಹಕಾರ ನೀಡುತ್ತಾರೆ ಮತ್ತು ಪ್ರೀತಿ ತೋರುತ್ತಾರೆ. ನೀವು ಸಮಾಜ ಕಲ್ಯಾಣ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ನೀವು ಉತ್ಸಾಹ ಹಾಗೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಪಿಕ್ನಿಕ್ ತೆರಳುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಪಾತ್ರರ ಭೇಟಿಯು ನಿಮಗೆ ಮುಂದಿನ ದಿನಗಳಲ್ಲಿ ಉತ್ಸಾಹವನ್ನು ತರುತ್ತದೆ.

Intro:Body:

giri


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.