ETV Bharat / bharat

ತೆಲಂಗಾಣದಲ್ಲಿ ಸಿಎಎ, ಎನ್​​ಪಿಆರ್​​ ಮತ್ತು ಎನ್​ಆರ್​ಸಿ ವಿರುದ್ಧ ನಿರ್ಣಯ ಅಂಗೀಕಾರ

author img

By

Published : Mar 16, 2020, 11:31 PM IST

ತೆಲಂಗಾಣದ ವಿಧಾನಸಭೆಯಲ್ಲಿ ಇಂದು ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ ನಿರ್ಣಯವನ್ನು ಕೈಗೊಳ್ಳಲಾಯಿತು. ಅಲ್ಲದೇ ಈ ಕುರಿತು ಮಾತನಾಡಿದ ಸಿಎಂ ಚಂದ್ರಶೇಖರ್​​​ ರಾವ್ ಅವರು, ನಾವು ಯಾವುದೇ ತಿಳಿವಳಿಕೆಯಿಲ್ಲದೇ ಇದನ್ನು ಕುರುಡಾಗಿ ವಿರೋಧಿಸುತ್ತಿಲ್ಲ. ಈ ಸಿಎಎ, ಎನ್‌ಪಿಆರ್ ಅಥವಾ ಎನ್‌ಆರ್‌ಸಿಯನ್ನು ಸ್ಪಷ್ಟ ತಿಳಿವಳಿಕೆಯೊಂದಿಗೆ ನಾವು ವಿರೋಧಿಸುತ್ತಿದ್ದೇವೆ ಎಂದರು.

resolution against CAA, NPR and NRC
ಸಿಎಂ ಚಂದ್ರಶೇಖರ್​​​ ರಾವ್

ಹೈದರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ತೆಲಂಗಾಣ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಯಿತು.

ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಉದ್ದೇಶಿತ ಅನುಷ್ಠಾನದ ಬಗ್ಗೆ ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಇದು "ಹೆಚ್ಚಿನ ಸಂಖ್ಯೆಯ ಜನರನ್ನು ಹೊರಗಿಡಲು ಕಾರಣವಾಗಬಹುದು". ಹೀಗಾಗಿ ಸಿಎಎ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಸೂದೆ ಹೇಳುತ್ತದೆ.

ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಮೂಲಕ ಭಾರತೀಯ ಪೌರತ್ವದ ಅಂತರ್ಗತ ಮತ್ತು ಧಾರ್ಮಿಕೇತರ ಸ್ವಭಾವಕ್ಕೆ ಧಕ್ಕೆೆ ಆಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಸಮಾನತೆ, ತಾರತಮ್ಯ ರಹಿತ, ಜಾತ್ಯತೀತತೆಯ ತತ್ತ್ವ ಗಳನ್ನು ಉಲ್ಲಂಘಿಸುವುದರ ಜೊತೆಗೆ, ದುರ್ಬಲ ಗುಂಪುಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇದಲ್ಲದೇ, ಸಿಎಎ, ಎನ್​​ಪಿಆರ್ ಮತ್ತು ಎನ್ಆರ್​ಸಿಯ ಕಾನೂನುಬದ್ಧತೆ ಮತ್ತು ಸಾಂವಿಧಾನಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳಿವೆ ಎಂದು ಮಸೂದೆ ಹೇಳುತ್ತದೆ.

ಸಿಎಎ ಕಾಯ್ದೆ ಎನ್‌ಪಿಆರ್‌ಗೆ ಮುನ್ನುಡಿಯಾಗಿದೆ ಎಂದು ಸಮಾಜದ ವಿವಿಧ ವರ್ಗಗಳಲ್ಲಿ ತೀವ್ರ ಆತಂಕ ಮೂಡಿದೆ. ಇದು ರಾಷ್ಟ್ರವ್ಯಾಪಿ ಎನ್‌ಆರ್‌ಸಿಗೆ ಕಾರಣವಾಗುತ್ತದೆ ಎಂದು ಅದು ಹೇಳಿದೆ. ಸಿಎಎ ವಿರುದ್ಧ ಭಾರತದಾದ್ಯಂತ ಪ್ರತಿಭಟನೆಗಳು ನಡೆದಿವೆ ಮತ್ತು ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಅನುಷ್ಠಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

2020 ರ ಏಪ್ರಿಲ್ 1 ರಿಂದ 2020 ರ ಸೆಪ್ಟೆಂಬರ್ 30 ರವರೆಗೆ ರೂಪಿಸಲಿರುವ ಎನ್‌ಪಿಆರ್‌ನಲ್ಲಿ, ಪೌರತ್ವದ ಬಗ್ಗೆ ಮತ್ತು ಅವರ ಹೆತ್ತವರ ಸಾಕ್ಷ್ಯಚಿತ್ರ ಪುರಾವೆಗಳನ್ನು ತೋರಿಸಬೇಕಾದ ಅಗತ್ಯವಿರುತ್ತದೆ ಎಂಬ ಆತಂಕ ಜನರಲ್ಲಿ ಇದೆ ಎಂದು ಅದು ಹೇಳಿದೆ. ಸಿಎಎ ಜಾರಿಯು ಪೌರತ್ವಕ್ಕಾಗಿ ಧಾರ್ಮಿಕ ಪರೀಕ್ಷೆ ಪರಿಚಯಿಸುವ ಮೂಲಕ ಭಾರತದ ಸಂಸ್ಥಾಪಕರ ಸ್ಮರಣೆ ಅವಮಾನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾವ್, "ನಾವು ಯಾವುದೇ ತಿಳಿವಳಿಕೆಯಿಲ್ಲದೇ ಇದನ್ನು ಕುರುಡಾಗಿ ವಿರೋಧಿಸುತ್ತಿಲ್ಲ. ಈ ಸಿಎಎ, ಎನ್‌ಪಿಆರ್ ಅಥವಾ ಎನ್‌ಆರ್‌ಸಿಯನ್ನು ಸ್ಪಷ್ಟ ತಿಳಿವಳಿಕೆಯೊಂದಿಗೆ ನಾವು ವಿರೋಧಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಕೇಂದ್ರವು ರಾಷ್ಟ್ರೀಯ ಗುರುತಿನ ಚೀಟಿ ನೀಡಲು ಬಯಸಿದರೆ, ಅವರು ಈ ವಿಚಾರವನ್ನು ಬೆಂಬಲಿಸುವುದಾಗಿ ಹೇಳಿದರು, ಆದರೆ ಅದನ್ನು ಎಲ್ಲರಿಗೂ ಮನವರಿಕೆ ಮಾಡುವ ಮೂಲಕ ಹೊಸ ಸ್ವರೂಪದಲ್ಲಿ ಮಾಡಬೇಕು.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಮುಖಂಡ ಎಂ.ಭಟ್ಟಿ ವಿಕ್ರಮಾರ್ಕಾ ಅವರು ಈ ನಿರ್ಣಯವನ್ನು ಬೆಂಬಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.