ETV Bharat / bharat

ತೀರ್ಪು ಆಘಾತಕಾರಿ: ಇದು ಬಿಜೆಪಿ-ಆರ್​​ಎಸ್​ಎಸ್​​​ ನಾಯಕರ ರಾಜಕೀಯ ಪಿತೂರಿ ಎಂದ ಕಾಂಗ್ರೆಸ್​!

author img

By

Published : Sep 30, 2020, 7:23 PM IST

ಬಾಬ್ರಿ ಮಸೀದಿ ಧ್ವಂಸ ಬಿಜೆಪಿ ಹಾಗೂ ಆರ್​​​ಎಸ್​​ಎಸ್​ ನಾಯಕರ ಆಳವಾದ ರಾಜಕೀಯ ಪಿತೂರಿಯಾಗಿತ್ತು ಎಂದು ಕಾಂಗ್ರೆಸ್​ ಗಂಭೀರ ಆರೋಪ ಮಾಡಿದೆ.

Randeep Singh Surjewala
Randeep Singh Surjewala

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲಖನೌ ವಿಶೇಷ ಸಿಬಿಐ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಇದೇ ವಿಚಾರವಾಗಿ ವಿವಿಧ ಮುಖಂಡರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ತೀರ್ಪಿಗೆ ಸಂಬಂಧಿಸಿದಂತೆ ಮಾತನಾಡಿರುವ ಕಾಂಗ್ರೆಸ್​​​ ಇದು ಸುಪ್ರೀಂಕೋರ್ಟ್​​ ನೀಡಿರುವ ತೀರ್ಪಿನ ವಿರುದ್ಧವಾಗಿದ್ದು, ಆಘಾತಕಾರಿಯಾಗಿದೆ ಎಂದಿದೆ.

ಕಾಂಗ್ರೆಸ್​ ಮುಖ್ಯ ವಕ್ತಾರ ರಣದೀಪ್​​ ಸಿಂಗ್​ ಸುರ್ಜೇವಾಲ್​ ಮಾತನಾಡಿದ್ದು, ಬಾಬ್ರಿ ಮಸೀದಿ ಧ್ವಂಸ ಬಿಜೆಪಿ ಹಾಗೂ ಆರ್​​​ಎಸ್​​ಎಸ್​ ನಾಯಕರ ಆಳವಾದ ರಾಜಕೀಯ ಪಿತೂರಿಯಾಗಿತ್ತು ಎಂದಿದ್ದಾರೆ.

ಬಾಬ್ರಿ ತೀರ್ಪು: ಕಾಂಗ್ರೆಸ್​ ಪ್ರತಿಕ್ರಿಯೆ

ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನ ಖುಲಾಸೆಗೊಳಿಸಿರುವ ವಿಶೇಷ ನ್ಯಾಯಾಲಯದ ತೀರ್ಪು ಸಾಂವಿಧಾನ ಬಾಹಿರವಾಗಿದೆ ಎಂದಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್​​ 9ರಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಆ ವೇಳೆ ಬಾಬ್ರಿ ಮಸೀದಿ ಧ್ವಂಸ ಮಾಡಿರುವುದು ಸ್ಪಷ್ಟ ಕಾನೂನು ಬಾಹಿರ ಮತ್ತು ಕಾನೂನು ಉಲ್ಲಂಘನೆ ಎಂದು ಅಭಿಪ್ರಾಯ ಪಟ್ಟಿತ್ತು.

  • (2/2) this may be the recurring phenomenon, India is heading towards modiciary instead of Judiciary.

    — Adhir Chowdhury (@adhirrcinc) September 30, 2020 " class="align-text-top noRightClick twitterSection" data=" ">

ಅಧಿಕಾರ ಕಸಿದುಕೊಳ್ಳಲು ದೇಶದ ಕೋಮು ಸೌಹಾರ್ದತೆ ಮತ್ತು ಭ್ರಾತೃತ್ವವನ್ನ ನಾಶಮಾಡಲು ಬಿಜೆಪಿ-ಆರ್​​ಎಸ್​​​ಎಸ್​​​ ರಾಜಕೀಯ ಪಿತೂರಿಗೆ ದೇಶ ಸಾಕ್ಷಿಯಾಗಿದೆ ಎಂದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್​.ಕೆ. ಅಡ್ವಾಣಿ, ಮುರುಳಿ ಮನೋಹರ್​ ಜೋಶಿ, ಉಮಾ ಭಾರತಿ, ಕಲ್ಯಾಣ್​ ಸಿಂಗ್​ ಮತ್ತು ವಿನಯ್​ ಕಟಿಯಾರ್​ ಸೇರಿ 32 ಆರೋಪಿಗಳಿಗೆ ಸುಮಾರು 28 ವರ್ಷಗಳ ನಂತರ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

  • The Babri verdict is shocking, it goes contrary to principles of natural justice & even the SC’s observation

    — Ahmed Patel (@ahmedpatel) September 30, 2020 " class="align-text-top noRightClick twitterSection" data=" ">

ಬಾಬ್ರಿ ಮಸೀದಿ ಧ್ವಂಸ ಮಾಡಲು ಯಾವುದೇ ಪೂರ್ವ ಯೋಜನೆ ಇರಲಿಲ್ಲ. ಅಂತಹ ಪುರಾವೆಗಳು ಸಿಕ್ಕಿಲ್ಲ ಎಂದು ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್​ ಯಾದವ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.