ETV Bharat / bharat

ಹಿರಿಯ ಜೆಎಂಎಂ ಮುಖಂಡ ಶಂಕರ್ ರವಾನಿ, ಪತ್ನಿ ಕೊಲೆ

author img

By

Published : Oct 11, 2020, 4:45 PM IST

ಧನ್​ಬಾದ್ ನಗರದ ಭೋವಾರೇರಿಯಾದಲ್ಲಿ ಜೆಎಂಎಂ ಹಿರಿಯ ಮುಖಂಡ ಶಂಕರ್ ರವಾನಿ ಮತ್ತು ಅವರ ಪತ್ನಿಯ ಶವ ಪತ್ತೆಯಾಗಿದ್ದು, ಹಳೆಯ ದ್ವೇಷದ ಹಿನ್ನೆಲೆ ಕೊಲೆ ನಡೆದಿರಬಹುದೆಂದು ಅನುಮಾನ ವ್ಯಕ್ತವಾಗಿದೆ.

ಧನ್​ಬಾದ್: ಜೆಎಂಎಂ ಹಿರಿಯ ಮುಖಂಡ ಶಂಕರ್ ರವಾನಿ ಮತ್ತು ಅವರ ಪತ್ನಿಯನ್ನು ಜಾರ್ಖಂಡ್‌ನ ನಿವಾಸದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಾನಿ ಮತ್ತು ಅವರ ಪತ್ನಿ ಬಾಲಿಕಾ ದೇವಿ ಅವರನ್ನು ಧನ್​ಬಾದ್ ನಗರದ ಭೋವಾರೇರಿಯಾದಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದಿರುವ ಶಂಖೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕುಮಾರ್ ತಿಳಿಸಿದ್ದಾರೆ.

ಬೆಡ್​ ರೂಮ್​ನಲ್ಲಿ ಮೃತದೇಹಗಳು ಪತ್ತೆಯಾಗಿದ್ದು, 9 ಎಂಎಂ ಪಿಸ್ತೂಲ್ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಗಾರನನ್ನು ಬಂಧಿಸಲು ಶೋಧ ಕಾರ್ಯ ಪ್ರಾರಂಭಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.