ETV Bharat / bharat

ಭಾರತದ ಅಪೂರ್ವ ಪುತ್ರ, ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಿಗೆ ನಮನ: ಡಾ. ಮನಮೋಹನ್ ಸಿಂಗ್‌

author img

By

Published : Jun 28, 2020, 7:00 AM IST

Updated : Jun 28, 2020, 7:34 AM IST

ಹಲವರಿಗೆ ಅಚ್ಚರಿಯಾಗುವಂತೆ ನಾನು ಹಣಕಾಸು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ನಡೆದೆ. ನಿಮ್ಮ ಸಂಪೂರ್ಣ ಬೆಂಬಲವಿದ್ದರೆ ಮಾತ್ರ ನಾನು ಹಣಕಾಸು ಸಚಿವ ಹುದ್ದೆಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಮೊದಲೇ ನಾನು ನರಸಿಂಹ ರಾವ್‌ಗೆ ಹೇಳಿದ್ದೆ.

ಮಮೋ-ಪಿವಿಎನ್‌
Narasimha Rao and Manmohan Singh

ಹೈದರಾಬಾದ್ : ನನ್ನ ಮತ್ತು ಪಿ ವಿ ನರಸಿಂಹರಾವ್‌ ಮಧ್ಯೆ ಒಡನಾಟ ಆರಂಭವಾಗಿದ್ದ 1988ರಲ್ಲಿ, ಅವರು‌ ವಿದೇಶಾಂಗ ಸಚಿವಾಲಯದಲ್ಲಿದ್ದಾಗ ಮತ್ತು ನಾನು ಸೌತ್ ಕಮಿಷನ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ. ಆ ಸಮಯದಲ್ಲಿ ಅವರು ಜಿನೀವಾಗೆ ಬಂದಾಗ ನಾವು ಪರಸ್ಪರ ಭೇಟಿಯಾದೆವು. 1991ರಲ್ಲಿ ಸರ್ಕಾರ ರಚನೆಯಾದಾಗ ಪಿ ವಿ ನರಸಿಂಹರಾವ್‌ ನನ್ನನ್ನು ಕರೆದು, “ಬನ್ನಿ, ನೀವು ನನ್ನ ಹಣಕಾಸು ಸಚಿವರಾಗಬೇಕು” ಎಂದಿದ್ದರು.

ಹಲವರಿಗೆ ಅಚ್ಚರಿಯಾಗುವಂತೆ ನಾನು ಹಣಕಾಸು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ನಡೆದೆ. ನಿಮ್ಮ ಸಂಪೂರ್ಣ ಬೆಂಬಲವಿದ್ದರೆ ಮಾತ್ರ ನಾನು ಹಣಕಾಸು ಸಚಿವ ಹುದ್ದೆ ಒಪ್ಪಿಕೊಳ್ಳುತ್ತೇನೆ ಎಂದು ಮೊದಲೇ ನಾನು ನರಸಿಂಹ ರಾವ್‌ಗೆ ಹೇಳಿದ್ದೆ. ಅವರು ತಮಾಷೆಯಿಂದಲೇ ನಿಮ್ಮ ಹುದ್ದೆಯಲ್ಲಿ ನೀವು ಮುಕ್ತವಾಗಿದ್ದೀರಿ. ಪಾಲಿಸಿಗಳು ಯಶಸ್ವಿಯಾದರೆ ನಾವೆಲ್ಲರೂ ಕ್ರೆಡಿಟ್ ತೆಗೆದುಕೊಳ್ಳುತ್ತೇವೆ. ವಿಫಲವಾದ್ರೆ, ನೀವು ಮನೆಗೆ ಹೋಗಬೇಕಾಗುತ್ತದೆ” ಎಂದಿದ್ದರು. ಪ್ರಮಾಣ ವಚನ ಸಮಾರಂಭದ ನಂತರ, ವಿಪಕ್ಷಗಳ ಸಭೆಯನ್ನು ಪ್ರಧಾನಿ ರಾವ್‌ ಕರೆದಿದ್ದರು. ನಾನು ವಿಪಕ್ಷಗಳಿಗೆ ವಿವರಣೆ ನೀಡಿದೆ. ವಿಪಕ್ಷಗಳಿಗೆ ತುಂಬಾ ಮೆಚ್ಚುಗೆಯಾಯಿತು ಎಂಬ ಪ್ರತಿಕ್ರಿಯೆ ಬಂತು. ಆರ್ಥಿಕ ಸುಧಾರಣೆ ವಿಚಾರದಲ್ಲಿ ರಾವ್‌ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.

ಆರ್ಥಿಕ ಸುಧಾರಣೆಗಳು ತಕ್ಷಣ ನಡೆಯುವುದಿಲ್ಲ. ಆ ಕಾಲದ ದೂರದೃಷ್ಟಿ ಹೊಂದಿರುವ ನಾಯಕತ್ವ ಇಲ್ಲದಿದ್ದರೆ ಐತಿಹಾಸಿಕವಾದ ಬದಲಾವಣೆ ನಡೆಯಲು ಸಾಧ್ಯವೇ ಇಲ್ಲ. ನಮ್ಮ ಆರ್ಥಿಕ ನೀತಿಗಳನ್ನು ಬದಲಾವಣೆ ಮಾಡಲು ಪ್ರಾಮುಖ್ಯತೆ ನೀಡಿದ, ಸಾಮಾಜಿಕ ನ್ಯಾಯದ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿದ ಮೊದಲ ರಾಜಕೀಯ ನಾಯಕತ್ವ ಎಂದರೆ ಅದು ಶ್ರೀಮತಿ ಇಂದಿರಾ ಗಾಂಧಿಯವರದಾಗಿತ್ತು. ಅವರ ಆರಂಭಿಕ ಕ್ರಮಗಳನ್ನು ರಾಜೀವ್‌ ಗಾಂಧಿ ಮುಂದುವರಿಸಿದರು. ಹೊಸ ಮಾಹಿತಿ ಯುಗ ಆಗಮಿಸುತ್ತಿರುವುದನ್ನು ಅವರು ಸರಿಯಾಗಿ ಗ್ರಹಿಸಿದ್ದರು. ರಾಜೀವ್‌ ಗಾಂಧಿ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರವು 1980ರ ದ್ವಿತೀಯಾರ್ಧದಲ್ಲಿ ಆ ದಿಕ್ಕಿಗೆ ಅರ್ಥಿಕ ಸುಧಾರಣೆಗಳನ್ನು ನಡೆಸಲು ಆರಂಭಿಸಿತು.

ಆರ್ಥಿಕ ಸುಧಾರಣೆಗಳನ್ನು ಮಾಡಲು ನರಸಿಂಹ್ ರಾವ್ ಕೈಗೊಂಡ ಮುಕ್ತ ಕ್ರಮಗಳನ್ನು ನಾವು ಮೆಚ್ಚಬೇಕಿದೆ. 1991ರಲ್ಲಿ ಕಾಂಗ್ರೆಸ್‌ ನರಸಿಂಹ ರಾವ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದಾಗ, ನಾನು ಹಣಕಾಸು ಸಚಿವನಾದಾಗ ಆರ್ಥಿಕ ಸುಧಾರಣೆಗಳನ್ನು ಆರಂಭಿಸಲಾಯಿತು. ಪ್ರಧಾನಿ ನರಸಿಂಹ್ ರಾವ್‌ ನೇತೃತ್ವದಲ್ಲಿ ನಾವು ನಮ್ಮ ಹಣಕಾಸು ನೀತಿಗಳು ಮತ್ತು ನಮ್ಮ ವಿದೇಶಾಂಗ ನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೆವು. ಸುಧಾರಣೆಗಳಲ್ಲಿ ನಾವು ತೆಗೆದುಕೊಂಡ ಪ್ರಮುಖ ಕ್ರಮಗಳೆಂದರೆ ಭಾರತೀಯತೆ ವಿಶಿಷ್ಟ ರೂಪವನ್ನು ಆರಂಭಿಸಿದ್ದಾಗಿತ್ತು. ಈಗಾಗಲೇ ಇರುವ ಸಿದ್ಧ ಸೂತ್ರಕ್ಕೆ ನಾವು ಮೊರೆ ಹೋಗಲಿಲ್ಲ.

ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಮಿಶೆಲ್‌ ಕಾಮ್ಡೆಸ್ಸಸ್‌ ಮತ್ತು ಪ್ರಧಾನಿ ನರಸಿಂಹ ರಾವ್‌ ಮಧ್ಯೆ ನಡೆದ ಭೇಟಿಯನ್ನು ನಾನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಭಾರತೀಯ ಕಾಳಜಿಗಳನ್ನು ಒಳಗೊಂಡಂತೆ ಸುಧಾರಣೆಗಳನ್ನು ಮಾಡಲಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವ, ಭಾರತೀಯರ ಹಿತಾಸಕ್ತಿಗಳನ್ನು ನಾವು ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು. ನಮ್ಮ ರಚನಾತ್ಮಕ ಹೊಂದಾಣಿಕೆ ವ್ಯವಸ್ಥೆಯಿಂದಾಗಿ ಯಾವುದೇ ಒಬ್ಬ ಸಾರ್ವಜನಿಕ ವಲಯದ ಉದ್ಯೋಗಿಯೂ ಕೆಲಸ ಕಳೆದುಕೊಳ್ಳುವಂತಾಗಬಾರದು ಎಂದು ಐಎಂಎಫ್‌ಗೆ ನಾವು ಹೇಳಿದೆವು. ನಮ್ಮ ಆದ್ಯತೆಗಳಿಗೆ ಅನುಗುಣವಾಗಿ ನಾವು ಸುಧಾರಣೆಗಳನ್ನು ಮಾಡಿದ್ದೇವೆ ಎಂಬ ನಂಬಿಕೆ ನನಗಿದೆ.

ಭಾರತೀಯ ವಿದೇಶಾಂಗ ನೀತಿಯಲ್ಲಿ ನರಸಿಂಹ ರಾವ್‌ ವಾಸ್ತವಾಂಶಗಳನ್ನು ಸೇರಿಸಿದರು. ನೆರೆ ದೇಶಗಳೊಂದಿಗೆ ಭಾರತದ ಸಂಬಂಧ ಸುಧಾರಣೆಗೆ ಪ್ರಯತ್ನಿಸಿದರು. 1993ರಲ್ಲಿ ಚೀನಾ ಜೊತೆಗಿನ ಸಂಬಂಧ ಸುಧಾರಣೆಗೆ ಚೀನಾಗೆ ಪ್ರವಾಸವನ್ನೂ ಕೈಗೊಂಡರು. ಸಾರ್ಕ್‌ ದೇಶಗಳೊಂದಿಗೆ ಭಾರತವು ದಕ್ಷಿಣ ಏಷ್ಯಾದ ಆದ್ಯತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆವು. ಅವರು ಭಾರತದ “ಲುಕ್ ಈಸ್ಟ್ ಪಾಲಿಸಿ” ಆರಂಭಿಸಿದರು. ಹಲವು ಪೂರ್ವ ಮತ್ತು ಆಗ್ನೇಯ ಏಷ್ಯಾ ದೇಶಗಳೊಂದಿಗೆ ಭಾರತದ ಸಂಬಂಧ ಸುಧಾರಣೆ ಮಾಡುವುದು ಇದರ ಉದ್ದೇಶವಾಗಿತ್ತು.

ನರಸಿಂಹ ರಾವ್ ನಾಯಕತ್ವದಲ್ಲಿ ಮಹತ್ವಾಕಾಂಕ್ಷಿ ಬ್ಯಾಲಿಸ್ಟಿಕ್ ಮಿಸೈಲ್ ಟೆಕ್ನಾಲಜಿ ಪ್ರೋಗ್ರಾಮ್‌ನ ಸರ್ಕಾರ ಆರಂಭಿಸಿತು. ಇದರ ಅಡಿ 1992ರಲ್ಲಿ ಆಗ್ಮೆಂಟೆಡ್‌ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್‌ ವೆಹಿಕಲ್ (ಪಿಎಸ್ಎಲ್‌ವಿ)ಪರೀಕ್ಷಿಸಿತು. ಇದು ಭಾರತದ ಬಾಹ್ಯಾಕಾಶ ಭದ್ರತೆ ಯೋಜನೆಗೆ ನೆರವಾಯಿತು. 1994ರಲ್ಲಿ ಮೊದಲ ಬಾರಿಗೆ ಪೃಥ್ವಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಇದನ್ನು ನಂತರದಲ್ಲಿ ಇಂಟರ್‌ಮೀಡಿಯೆಟ್‌ ರೇಂಜ್‌ನ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನಾಗಿ ಅಭಿವೃದ್ಧಿಪಡಿಸಲಾಯಿತು.

ಹಲವು ರೀತಿಯಲ್ಲಿ ಸ್ನೇಹಿತ, ತತ್ವಶಾಸ್ತ್ರಜ್ಞ ಮತ್ತು ಮಾರ್ಗದರ್ಶಿಯಾಗಿರುವ ಭಾರತದ ಅಪೂರ್ವ ಪುತ್ರ ನರಸಿಂಹ ರಾವ್‌ ಅವರಿಗೆ ಗೌರವ ನಮನ ಸಲ್ಲಿಸಲು ನನಗೆ ಹೆಮ್ಮೆಯಾಗುತ್ತದೆ. ಅವರನ್ನು ನಾನು ಸಮೀಪದಿಂದ ಬಲ್ಲೆನಾದ್ದರಿಂದ, ಅವರು ರಾಜಕೀಯದಲ್ಲಿ ನಿಜವಾದ ಸನ್ಯಾಸಿಯಾಗಿದ್ದರು. ನಮ್ಮ ಸಂಪ್ರದಾಯ ಮತ್ತು ಸಿದ್ಧಾಂತಗಳಲ್ಲಿ ಮುಳುಗಿದ ಆಧುನಿಕ ವ್ಯಕ್ತಿಯಾಗಿದ್ದರು. ಅವರು ಅಪರೂಪದ ಪ್ರತಿಭಾವಂತ ಮತ್ತು ಮುತ್ಸದ್ದಿ. ನಮ್ಮ ಅರ್ಥಿಕತೆಗೆ ಮಾತ್ರವಲ್ಲ, ವಿದೇಶ ನೀತಿಗೂ ಅವರು ಹೊಸ ದಿಕ್ಕನ್ನು ನೀಡಿದರು. ಹಲವು ಭಾಷೆಗಳಲ್ಲಿ ಅವರಿಗೆ ಹಿಡಿತವಿತ್ತು. ಅವರು ದೇಶದ ಯಾವುದೇ ಭಾಗಕ್ಕೂ ಹೊಂದುತ್ತಿದ್ದರು, ಕರೀಮ್‌ನಗರ, ಪುಣೆ, ಬನಾರಸ್ ಮತ್ತು ದೆಹಲಿಯಲ್ಲಿ ಅಲ್ಲಿಯವರಂತೆಯೇ ಅವರು ಇರುತ್ತಿದ್ದರು.

ಡಾ. ಮನಮೋಹನ ಸಿಂಗ್,‌ ಮಾಜಿ ಪ್ರಧಾನಿ

Last Updated : Jun 28, 2020, 7:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.