ETV Bharat / bharat

2014ರಿಂದ ವಿಶ್ವದಲ್ಲಿ ಭಾರತವನ್ನ ನೋಡುವ ದೃಷ್ಠಿಕೋನ ಬದಲು: ಪ್ರಧಾನಿ ಮೋದಿ

author img

By

Published : Sep 28, 2019, 10:06 PM IST

ಅಮೆರಿಕ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಸ್ವದೇಶಕ್ಕೆ ವಾಪಸ್​ ಆಗಿದ್ದು, ನವದೆಹಲಿಯ ಪಾಲಂ ಏರ್​ಬೇಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.​

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಪಾಲಂ ಏರ್​ಬೇಸ್​​ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಎಂದು ಜೈಕಾರ ಹಾಕಿದರು.

ಪ್ರಧಾನಿ ನರೇಂದ್ರ ಮೋದಿ

ಈ ವೇಳೆ, ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಮೋ, ಸಹಸ್ರ ಸಂಖ್ಯೆಯಲ್ಲಿ ನನ್ನನ್ನು ಭರಮಾಡಿಕೊಳ್ಳಲು ಆಗಮಿಸಿದ್ದಕ್ಕಾಗಿ ನಿಮಗೆ ಧನ್ಯವಾದ. 2014ರಲ್ಲೂ ನಾನು ಅಮೆರಿಕಾಗೆ ತೆರಳಿದ್ದೆ. ಈಗಲೂ ನಾನು ಯುಎನ್​ಗೆ ಹೋಗಿ ಬಂದಿರುವೆ. ಆದರೆ, ಈ ಐದು ವರ್ಷದಲ್ಲಿ ವಿಶ್ವ ಭಾರತವನ್ನ ನೋಡುವ ದೃಷ್ಠಿಕೋನ ಬಹಳಷ್ಟು ಬದಲಾಗಿದ್ದು, ಭಾರತಕ್ಕೆ ನೀಡುವ ಗೌರವ ಹೆಚ್ಚಾಗಿದೆ. ಹೀಗಾಗಿ ನಾನು ದೇಶದ 130 ಕೋಟಿ ಭಾರತೀಯರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

2016ರ ಸೆಪ್ಟೆಂಬರ್​ 28ರ ರಾತ್ರಿ, ಅಂದರೆ ಇವತ್ತು ನಮ್ಮ ದೇಶದ ವೀರ ಸೈನಿಕರು ಸರ್ಜಿಕಲ್​ ಸ್ಟ್ರೈಕ್​ ನಡೆಸಿ, ಇಡೀ ವಿಶ್ವವೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಿದೆ. ಯೋಧರ ಧೈರ್ಯಕ್ಕೆ ನಾನು ನಿಜಕ್ಕೂ ಸೆಲ್ಯೂಟ್​ ಮಾಡುವೆ ಎಂದರು. ನಮ್ಮ ಯೋಧರು ಹಾಕಿಕೊಂಡಿದ್ದ ಪ್ಲಾನ್​ ಸಕ್ಸಸ್ ಆಗಿ, ಅವರು ತಮ್ಮ ಕೆಲಸವನ್ನು ಮುಗಿಸಿ ನನಗೆ ಫೋನ್​ ಮಾಡುವ ತನಕ ಆ ರಾತ್ರಿ ನಾನು ನಿದ್ದೆ ಮಾಡಿರಲಿಲ್ಲ ಎಂದು ಮೋದಿ ಇದೇ ವೇಳೆ ಹೇಳಿದರು.

ಇದೇ ವೇಳೆ, ನವರಾತ್ರಿಗೆ ದೇಶದ ಜನರಿಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದಲ್ಲಿ ನನ್ನನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಅನಿವಾಸಿ ಭಾರತೀಯರಿಗೆ ಧನ್ಯವಾದ ಸಲ್ಲಿಸುವೆ ಎಂದರು.

Intro:Body:

2014ರಿಂದ ವಿಶ್ವದಲ್ಲಿ ಭಾರತವನ್ನ ನೋಡುವ ದೃಷ್ಠಿಕೋನ ಬದಲು: ಪ್ರಧಾನಿ ಮೋದಿ

ನವದೆಹಲಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಪಾಲಂ ಏರ್​ಬೇಸ್​​ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಮೋದಿ ಎಂದು ಜೈಕಾರ ಹಾಕಿದರು. 



ಈ ವೇಳೆ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಮೋ, ಸಹಸ್ರ ಸಂಖ್ಯೆಯಲ್ಲಿ ನನ್ನನ್ನು ಭರಮಾಡಿಕೊಳ್ಳಲು ಆಗಮಿಸಿದ್ದಕ್ಕಾಗಿ ನಿಮಗೆ ಧನ್ಯವಾದ. 2014ರಲ್ಲೂ ನಾನು ಅಮೆರಿಕಾಗೆ ತೆರಳಿದ್ದೆ. ಈಗಲೂ ನಾನು ಯುಎನ್​ಗೆ ಹೋಗಿ ಬಂದಿರುವೆ. ಆದರೆ ಈ ಐದು ವರ್ಷದಲ್ಲಿ ವಿಶ್ವ ಭಾರತವನ್ನ ನೋಡುವ ದೃಷ್ಠಿಕೋನ ಬಹಳಷ್ಟು ಬದಲಾಗಿದ್ದು, ಭಾರತಕ್ಕೆ ನೀಡುವ ಗೌರವ ಹೆಚ್ಚಾಗಿದೆ. ಹೀಗಾಗಿ ನಾನು ದೇಶದ 130 ಕೋಟಿ ಭಾರತೀಯರಿಗೆ ಧನ್ಯವಾದ  ಅರ್ಪಿಸುತ್ತೇನೆ ಎಂದರು. 



2016ರ ಸೆಪ್ಟೆಂಬರ್​ 28ರ ರಾತ್ರಿ, ಅಂದರೆ ಇವತ್ತು ನಮ್ಮ ದೇಶದ ವೀರ ಸೈನಿಕರು ಸರ್ಜಿಕಲ್​ ಸ್ಟ್ರೈಕ್​ ನಡೆಸಿ, ಇಡೀ ವಿಶ್ವವೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಿದೆ. ಯೋಧರ ಧೈರ್ಯಕ್ಕೆ ನಾನು ನಿಜಕ್ಕೂ ಸೆಲ್ಯೂಟ್​ ಮಾಡುವೆ ಎಂದರು. 



ಇದೇ ವೇಳೆ ನವರಾತ್ರಿಗೆ ದೇಶದ ಜನರಿಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದಲ್ಲಿ ನನ್ನನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಅನಿವಾಸಿ ಭಾರತೀಯರಿಗೆ ಧನ್ಯವಾದ ಸಲ್ಲಿಸುವೆ ಎಂದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.