ETV Bharat / bharat

ದೇಸಿ ಆಹಾರ, ನಿಯಮಿತ ವ್ಯಾಯಾಮ: ಕೋವಿಡ್​ ಗೆದ್ದ ಕಥೆ ಹೇಳಿದ ವೆಂಕಯ್ಯ ನಾಯ್ಡು!

author img

By

Published : Oct 13, 2020, 8:41 PM IST

ಮಹಾಮಾರಿ ಕೊರೊನಾ ವೈರಸ್​ಗೊಳಗಾಗಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ತಾವು ಡೆಡ್ಲಿ ವೈರಸ್​ ಗೆದ್ದ ಮಾಹಿತಿ ಹಂಚಿಕೊಂಡಿದ್ದಾರೆ.

Naidu
Naidu

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​​ ಸೋಂಕಿಗೊಳಗಾಗಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದೀಗ ಚೇತರಿಸಿಕೊಂಡಿದ್ದು, ಡೆಡ್ಲಿ ವೈರಸ್​ ವಿರುದ್ಧ ಯಾವ ರೀತಿಯಾಗಿ ಗೆಲುವು ಸಾಧಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಿಯಮಿತ ವ್ಯಾಯಾಮ, ಪ್ರೋಟೀನ್​ ಭರಿತ ಆಹಾರ ಸೇವನೆ, ಜಂಕ್​ ಫುಡ್​ ತಪ್ಪಿಸುವುದು ಮತ್ತು ಕೋವಿಡ್​ ತಡೆಗಟ್ಟುವ ಪ್ರೋಟೋಕಾಲ್​ ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಹೋರಾಡಬಹುದು ಎಂದು ಅವರು ತಿಳಿಸಿದ್ದು, ದೇಶದ ಪ್ರತಿಯೊಬ್ಬರು ಇದರ ಪಾಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಫೇಸ್​ಬುಕ್​​ನಲ್ಲಿ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಗಾದ ಅನುಭವ ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್​​ 19ರಂದು ಕೋವಿಡ್​ ಪರೀಕ್ಷೆಗೊಳಗಾಗಿದ್ದ 71 ವರ್ಷದ ವೆಂಕಯ್ಯ ನಾಯ್ಡು ಅವರು, ನಿನ್ನೆಯವರೆಗೆ ಕ್ವಾರಂಟೈನ್​ಗೊಳಗಾಗಿದ್ದರು. ಈ ಸಮಯದಲ್ಲಿ ವಿವಿಧ ವಿಷಯಗಳ ಬಗ್ಗೆ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಲೇಖನ ಓದುವ ಮೂಲಕ ಉತ್ತಮ ಸಮಯ ಕಳೆಯಲು ಸಾಧ್ಯವಾಯಿತು ಎಂದಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದ ವೀರರ ತ್ಯಾಗ, ಶೌರ್ಯದ ಬಗ್ಗೆ ನಾನು ಪ್ರತಿ ವಾರ ಎರಡು ಫೇಸ್​ಬುಕ್​ ಪೋಸ್ಟ್​ ಬರೆಯುತ್ತಿದ್ದೇನೆ ಎಂದಿದ್ದಾರೆ.

ಸೆಪ್ಟೆಂಬರ್ 19ರಂದು ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರನ್ನು ಹೋಂ ಕ್ವಾರಂಟೈನ್ ನಲ್ಲಿರಿಸಿ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಇದೀಗ ಅವರ ವರದಿ ನೆಗೆಟಿವ್​ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.