ETV Bharat / bharat

ಬಿಜೆಪಿ ಲವ್ ಜಿಹಾದ್ ಎಂಬ ಅಸಂಬಂಧ ಕಾಯ್ದೆ ಜಾರಿಗೆ ತರುತ್ತಿದೆ: ಓವೈಸಿ ಸಿಡಿಮಿಡಿ

author img

By

Published : Dec 29, 2020, 10:33 PM IST

ಸಂವಿಧಾನದಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ಪ್ರತ್ಯೇಕ ವ್ಯಾಖ್ಯಾನವಿಲ್ಲ. ವಯಸ್ಕರರು ತಮಗೆ ಬೇಕಾದವರನ್ನು ಮದುವೆಯಾಗುವ ಹಕ್ಕು ಸಂವಿಧಾನ ನೀಡಿದೆ. ಭಾರತೀಯ ಸಂವಿಧಾನದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಕಾನೂನುಗಳನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಜಾರಿಗೆ ತರುವ ಮೂಲಕ ಸಂವಿಧಾನವನ್ನೇ ಅಪಹಾಸ್ಯ ಮಾಡುತ್ತಿದೆ ಎಂದಿದ್ದಾರೆ.

Asaduddin Owaisi
ಅಸಾದುದ್ದೀನ್ ಓವೈಸಿ

ಹೈದರಾಬಾದ್: ಸಂವಿಧಾನದ ಮೂಲ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಬಿಜೆಪಿ ಸರ್ಕಾರ ಲವ್ ಜಿಹಾದ್ ಎಂಬ ಅಸಂಬಂಧ ಕಾಯ್ದೆಯನ್ನು ಜಾರಿಗೆ ತರುತ್ತಿವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರೈತರ ರಟ್ಟೆ ಮುರಿಯುವ ಕಸರತ್ತಿಗೆ ಮುಂದಾಗಿದೆ. ಹೊಸ ಕಾನೂನುಗಳನ್ನು ಜಾರಿಗೆ ತರಲೇಬೇಕು ಅಂತ ನಿರ್ಧಾರ ಮಾಡಿದ್ದರೆ ಕನಿಷ್ಠ ಬೆಂಬಲ ಬೆಲೆ ಕುರಿತು ಚಿಂತನೆ ಮಾಡಲಿ ಎಂದು ಸಲಹೆ ನೀಡಿದರು.

ಸಂವಿಧಾನದಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ಪ್ರತ್ಯೇಕ ವ್ಯಾಖ್ಯಾನವಿಲ್ಲ. ವಯಸ್ಕರರು ತಮಗೆ ಬೇಕಾದವರನ್ನು ಮದುವೆಯಾಗುವ ಹಕ್ಕು ಸಂವಿಧಾನ ನೀಡಿದೆ. ಭಾರತೀಯ ಸಂವಿಧಾನದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಕಾನೂನುಗಳನ್ನು ಬಿಜೆಪಿ ಉದ್ದೇಶಪೂರ್ವಕವಾಗಿಯೇ ಜಾರಿಗೆ ತರುವ ಮೂಲಕ ಸಂವಿಧಾನವನ್ನೇ ಅಪಹಾಸ್ಯ ಮಾಡುತ್ತಿದೆ ಎಂದರು.

ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಸರ್ಕಾರಗಳು ಈಗಾಗಲೇ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿದ್ದು ಕರ್ನಾಟಕವೂ ಸಹ ಈಗ ಇದೇ ಹಾದಿಯಲ್ಲಿದೆ. ಬಿಜೆಪಿ ನೇತೃತ್ವದ ಕೆಲವು ರಾಜ್ಯಗಳು ಸಂವಿಧಾನದ ವಿರುದ್ಧವಾಗಿ ಕಾನೂನುಗಳನ್ನು ಹೊರತರುವ ಮೂಲಕ ಮುಸ್ಲಿಂ ಸಮುದಾಯದವರಲ್ಲಿ ದ್ವೇಷವನ್ನು ಸೃಷ್ಟಿಸುತ್ತಿವೆ ಎಂದರು.

ಕೇವಲ ರಾಜಕೀಯ ಲಾಭಕ್ಕಾಗಿ ಲವ್ ಜಿಹಾದ್ ಬಗ್ಗೆ ಕಾನೂನು ತರುತ್ತಿರುವ ನೀವು ರೈತರಿಗೆ ಅಗತ್ಯವಾಗಿರುವ ಕಾನೂನುಗಳನ್ನು ಏಕೆ ತರಬಾರದು ಎಂದು ದೆಹಲಿ ರೈತರ ಹೋರಾಟವನ್ನು ಉಲ್ಲೇಖಿಸಿ ಸವಾಲು ಹಾಕಿದರು.

ಭಾರತೀಯ ಪ್ರಜೆಗಳ ವೈಯಕ್ತಿಕ ಜೀವನದಲ್ಲಿ ಯಾವುದೇ ಸರ್ಕಾರಕ್ಕೆ ತನ್ನ ಬಲಪ್ರದರ್ಶನ ತೋರುವ ಅಧಿಕಾರವಿಲ್ಲ. ಸುಪ್ರೀಂಕೋರ್ಟ್ ಕೂಡ ಇದೇ ರೀತಿಯ ತೀರ್ಪು ನೀಡಿದೆ. ಮುಂಬರುವ ಚುನಾವಣೆಯಲ್ಲಿ ಈ ಕಾಯ್ದೆಗಳ ವಿರುದ್ಧ ನಮ್ಮ ಪಕ್ಷ ಹೋರಾಡಲಿದೆ ಎಂದರು.

ಇದನ್ನೂ ಓದಿ: ಲವ್​ ಜಿಹಾದ್​ಗೆ ಕಾನೂನಿಗೆ ಜೆಡಿಯು ವಿರೋಧ: ಬಿಹಾರ ಎನ್​ಡಿಎನಲ್ಲಿ ಮೂಡಿತಾ ಬಿರುಕು.?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.