ETV Bharat / bharat

ಮುಂಬೈನಲ್ಲಿ ದ್ರವ ಸಾರಜನಕ ಅನಿಲ ಸ್ಪೋಟ: ಭಾಗಶಃ ಕುಸಿದ ಕಟ್ಟಡ

author img

By

Published : Sep 18, 2020, 1:05 PM IST

ಮುಂಬೈನ ವೊರ್ಲಿಯ ಹಳೆ ಪಾಸ್‌ಪೋರ್ಟ್ ಕಚೇರಿ ಬಳಿ ದ್ರವ ಸಾರಜನಕ ಅನಿಲ ಸ್ಫೋಟಗೊಂಡ ಪರಿಣಾಮ ಕಟ್ಟಡವು ಭಾಗಶಃ ಕುಸಿದಿದೆ.

ಮುಂಬೈನಲ್ಲಿ ದ್ರವ ಸಾರಜನಕ ಅನಿಲ ಸ್ಪೋಟ
ಮುಂಬೈನಲ್ಲಿ ದ್ರವ ಸಾರಜನಕ ಅನಿಲ ಸ್ಪೋಟ

ಮುಂಬೈ: ದ್ರವ ಸಾರಜನಕ ಅನಿಲ ಸ್ಫೋಟಗೊಂಡ ಪರಿಣಾಮ ಕಟ್ಟಡವು ಭಾಗಶಃ ಕುಸಿದಿದೆ. ಅಷ್ಟೇ ಅಲ್ಲದೆ, ಘಟನೆಯಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮುಂಬೈನ ವೊರ್ಲಿಯ ಹಳೆ ಪಾಸ್‌ಪೋರ್ಟ್ ಕಚೇರಿ ಬಳಿ ನಡೆದಿದೆ ಎಂದು ಪುರಸಭೆಯ ತುರ್ತುಸ್ಥಿತಿ ನಿರ್ವಹಣಾ ವಿಭಾಗ ತಿಳಿಸಿದೆ.

ವೊರ್ಲಿಯ ವೀರ್ ಸಾವರ್ಕರ್​ ರಸ್ತೆಯಲ್ಲಿರುವ ಹಳೆಯ ಪಾಸ್‌ಪೋರ್ಟ್ ಕಚೇರಿ ಬಳಿ ಹಳೆಯ ಕಟ್ಟಡವಿದ್ದು, ಅದರಲ್ಲಿ ಪ್ರಯೋಗಾಲಯವೂ ಇದೆ. ಈ ಪ್ರಯೋಗಾಲಯದಲ್ಲಿ ಬೆಳಗ್ಗೆ 9: 10ರ ಸುಮಾರಿಗೆ ದ್ರವ ಸಾರಜನಕ ಅನಿಲದ ಟ್ಯಾಂಕ್ ಸ್ಫೋಟಗೊಂಡಿದೆ. ಇದರಿಂದ ಕಟ್ಟಡದ ಒಂದು ಭಾಗ ಕುಸಿದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಮುಂಬೈ ಪೊಲೀಸರು, ಮುಂಬೈ ಅಗ್ನಿಶಾಮಕ ದಳ ಮತ್ತು ಎನ್‌ಎಂಸಿ ನೌಕರರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮುಂಬೈನಲ್ಲಿ ದ್ರವ ಸಾರಜನಕ ಅನಿಲ ಸ್ಫೋಟ, ಕಟ್ಟಡ ಕುಸಿತ

ಘಟನೆಯಲ್ಲಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ, ಆಕೆ ನಿರಾಕರಿಸಿದ್ದಾಳೆ ಎಂದು ಪುರಸಭೆಯ ತುರ್ತುಸ್ಥಿತಿ ನಿರ್ವಹಣಾ ವಿಭಾಗ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.