ETV Bharat / bharat

ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾಗೆ ಭಾರತದಲ್ಲಿ ಉಳಿಯುವ ಹಕ್ಕಿಲ್ಲ: ಪ್ರಹ್ಲಾದ್​​ ಜೋಶಿ

author img

By

Published : Oct 27, 2020, 8:47 PM IST

Updated : Oct 27, 2020, 8:53 PM IST

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ, ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಅವರಿಗೆ ಭಾರತದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ. ಅವರಲ್ಲಿ ಒಬ್ಬರು ಚೀನಾದ ಸಹಾಯದಿಂದ ನಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ನಾವು ಆರ್ಟಿಕಲ್ 370 ಅನ್ನು ಪುನಃಸ್ಥಾಪಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀವು ಯಾವ ಸಂದೇಶ ನೀಡಲಿದ್ದೀರಿ ಎಂದು ಪ್ರಶ್ನಿಸಿದರು.

Mufti
ಮೆಹಬೂಬಾ ಮುಫ್ತಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ಇದ್ದ ರಾಜ್ಯ ಧ್ವಜವನ್ನು ಮರಳಿ ಅಧಿಕೃತಗೊಳಿಸುವವರೆಗೂ ತಾವು ರಾಷ್ಟ್ರಧ್ವಜ ಹಾರಿಸುವುದಿಲ್ಲ ಎಂದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿಕೆ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಅವರಿಗೆ ಭಾರತದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ. ಅವರಲ್ಲಿ ಒಬ್ಬರು ಚೀನಾದ ಸಹಾಯದಿಂದ ನಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ನಾವು ಆರ್ಟಿಕಲ್ 370 ಅನ್ನು ಪುನಃಸ್ಥಾಪಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀವು ಯಾವ ಸಂದೇಶ ನೀಡಲಿದ್ದೀರಿ ಎಂದು ಪ್ರಶ್ನಿಸಿದರು.

ನಿನ್ನೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕರಾದ ಟಿ.ಎಸ್. ಬಜ್ವಾ, ವೇದ ಮಹಾಜನ್ ಮತ್ತು ಹುಸೇನ್ ಎ ವಾಫಾ ಅವರು ಪಕ್ಷದ ಕೆಲವರು, ಮೆಹಬೂಬಾ ಮುಫ್ತಿ ಅವರ ಇತ್ತೀಚಿನ ನಡೆಯಿಂದಾಗಿ ಪಕ್ಷ ಮುಜುಗರ ಅನುಭವಿಸುತ್ತಿದೆ ಎಂದು ರಾಜೀನಾಮೆ ಸಲ್ಲಿಸುವ ಪತ್ರ ರವಾನಿಸಿದ್ದರು.

Last Updated : Oct 27, 2020, 8:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.