ETV Bharat / bharat

ಪ್ರಧಾನಿ ಮೋದಿ, ಅಮಿತಾಬ್​ ಬಚ್ಚನ್​ನಂತೆ ಓರ್ವ ನಟ: ಪ್ರಿಯಾಂಕಾ ಗಾಂಧಿ ವ್ಯಂಗ್ಯ

author img

By

Published : May 17, 2019, 9:31 PM IST

ಮಿರ್ಜಾಪುರದಲ್ಲಿ ಚುನಾವಣೆ ಸಮಾವೇಶದಲ್ಲಿ, ಪ್ರಧಾನಿ ಮೋದಿ ಅವರು ಬಾಲಿವುಡ್​ನ 'ಶೋಲೆ' ಸಿನಿಮಾದ ಅಸ್ರಾನಿ (ಅಮಿತಾಬ್​ ಬಚ್ಚನ್​) ಅವರಂತೆ ನಟಿಸುತ್ತಾರೆ ಎಂದು ಅಣುಕಿಸಿದ್ದಾರೆ.

ಸಂಗ್ರಹ ಚಿತ್ರ

ಮಿರ್ಜಾಪುರ: ಪ್ರಧಾನಿ ನರೇಂದ್ರ ಮೋದಿ ಓರ್ವ ನಟ. ಅಮಿತಾಬ್ ಬಚ್ಚನ್​ ಅವರು ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆಯಾಗಬಹುದು ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮಿರ್ಜಾಪುರದಲ್ಲಿ ಚುನಾವಣೆ ಸಮಾವೇಶದಲ್ಲಿ, ಪ್ರಧಾನಿ ಮೋದಿ ಅವರು ಬಾಲಿವುಡ್​ನ 'ಶೋಲೆ' ಸಿನಿಮಾದ ಅಸ್ರಾನಿ (ಅಮಿತಾಬ್​ ಬಚ್ಚನ್​) ಅವರಂತೆ ನಟಿಸುತ್ತಾರೆ ಎಂದು ಅಣುಕಿಸಿದ್ದಾರೆ.

'ಪ್ರಧಾನಿ ಮೋದಿ ರಾಜಕೀಯ ನಾಯಕನಲ್ಲ. ಅವರು ಓರ್ವ ನಟ. ಅಮಿತಾಬ್​ ಬಚ್ಚನ್ ಅವರನ್ನು ಪ್ರಧಾನಿಯಾಗಿ ಮಾಡಿದ್ದರೆ ಉತ್ತಮವಾಗಿ ಇರುತ್ತಿತ್ತು ಎಂದು ಮಿರ್ಜಾಪುರ ರೋಡ್​ ಶೋನಲ್ಲಿ ಹೇಳಿದ್ದಾರೆ.

ಬಳಿಕ ಗೋರಖ್ಪುರ ಸಮಾವೇಶದಲ್ಲಿ ನೆರೆದವರನ್ನು ಉದ್ದೇಶಿಸಿ, ''ನೀವು ಶೋಲೆ ಚಿತ್ರದಲ್ಲಿನ ಅಸ್ರಾನಿ ಪಾತ್ರದ ನಟನೆ ನೋಡಿದ್ದಿರಾ? ಅದರಲ್ಲಿ ಅವರು 'ಆಂಗ್ರೆಜೋನ್​ ಕೆ ಝಮಾನೆ ಮೇ' (ಬ್ರಿಟಿಷರ ಆಡಳಿತ ಕಾಲದಲ್ಲಿ) ಎಂದು ಪದೇ- ಪದೇ ಹೇಳುತ್ತಿರುತ್ತಾರೆ. ಅದೇ ರೀತಿ ಮೋದಿ ಕೂಡ ಜವಹಾರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಕಾರ್ಯವೈಖರಿಗಳ ಕುರಿತು ಮಾತನಾಡುತ್ತಾರೆ. ಕಳೆದ ಐದು ವರ್ಷಗಳ ತಮ್ಮ ಕೆಲಸದ ಕುರಿತು ಯಾಕೆ ಮಾತನಾಡುತ್ತಿಲ್ಲ' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.