ETV Bharat / bharat

ಕಳ್ಳನಿಂದ ಹೆತ್ತ ಕರುಳನ್ನು ರಕ್ಷಿಸಿಕೊಂಡ ತಾಯಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

author img

By

Published : Sep 18, 2019, 5:04 PM IST

Updated : Sep 18, 2019, 7:08 PM IST

ತಮ್ಮ ಮನೆಯವರೊಂದಿಗೆ ಮನೆ ಮುಂದೆ ಮಲಗಿದ್ದ 4 ವರ್ಷದ ಮಗುವನ್ನು ಕಳ್ಳನೊಬ್ಬ ಕದಿಯಲು ಯತ್ನಿಸಿದ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ. ಈ ವೇಳೆ ಮಗುವಿನ ಮನೆ ಸದಸ್ಯರು ಕಳ್ಳನನ್ನು ಗಮನಿಸಿ ಘಟನೆಯನ್ನು ತಪ್ಪಿಸಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಲೂಧಿಯಾನ (ಪಂಜಾಬ್​) : ಮನೆ ಮುಂದೆ ತಮ್ಮ ಮನೆಯವರೊಂದಿಗೆ ಮಲಗಿದ್ದ 4 ವರ್ಷದ ಪುಟ್ಟ ಮಗುವನ್ನು ಕದಿಯಲು ಯತ್ನಿಸಿದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಲೂಧಿಯಾನದ ರಿಷಿ ನಗರದಲ್ಲಿ ತಮ್ಮ ಮನೆ ಮುಂದೆ ಈ ಮಗು ಸೇರಿದಂತೆ ಮನೆಯವರು ಕೂಡಾ ಮಲಗಿದ್ದರು. ಈ ವೇಳೆ ಸೈಕಲ್​ನಲ್ಲಿ ಬಂದ ಕಳ್ಳ ಮಲಗಿದ್ದ ಮಗುವನ್ನು ಎತ್ತಿಕೊಂಡು ತನ್ನ ಸೈಕಲ್​ನಲ್ಲಿ ಕೂರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಮಗುವಿನ ಪಕ್ಕದಲ್ಲೇ ಮಲಗಿದ್ದ ಮನೆಯ ಸದಸ್ಯರೊಬ್ಬರು ಮಗುವನ್ನು ಕಳ್ಳನಿಂದ ರಕ್ಷಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಈ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

Intro:Body:

ludhiyana


Conclusion:
Last Updated : Sep 18, 2019, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.