ETV Bharat / bharat

ಪ್ರೇಮಿಯ ಪತ್ನಿಯ ಕೂದಲು ಕತ್ತರಿಸಿ, ಕಣ್ಣಿಗೆ ಫೆವಿಕಾಲ್​ ಹಾಕಿದ ಪಾಗಲ್​ ಪ್ರೇಯಸಿ

author img

By

Published : Dec 2, 2020, 9:10 PM IST

ತನ್ನ ಪ್ರಿಯತಮ ಬೇರೆ ಮದುವೆ ಆದ ಎಂದು ಕೋಪಗೊಂಡ ಪ್ರೇಯಸಿಯೊಬ್ಬಳು ಆತನ ಪತ್ನಿಯ ಕೂದಲು ಕತ್ತರಿಸಿ, ಕಣ್ಣಿಗೆ ಫೆವಿಕಾಲ್ ಹಾಕಿ ಕುಕೃತ್ಯ ಮಾಡಿರುವ ಘಟನೆ ಬಿಹಾರದ ನಲಂದದಲ್ಲಿ ನಡೆದಿದೆ.

bride
bride

ನಳಂದ(ಬಿಹಾರ): ಪ್ರೇಮಿಯೊಬ್ಬ ಬೇರೆ ಮದುವೆ ಆದ ಎಂದು ಕೋಪಗೊಂಡ ಯುವತಿಯೊಬ್ಬಳು ಪ್ರೇಮಿಯ ಪತ್ನಿ ಮೇಲೆ ಹಲ್ಲೆ ಮಾಡಿ, ಆಕೆಯ ಕಣ್ಣುಗಳಿಗೆ ಫೆವಿಕಾಲ್​ ಗಮ್​ ಹಾಕಿರುವ ಘಟನೆ ನಳಂದದ ಮೊರಾ ತಲಾಬ್ ಗ್ರಾಮದಲ್ಲಿ ನಡೆದಿದೆ.

ಏನಿದು ಕಹಾನಿ..?

ಗೋಪಾಲ್ ರಾಮ್ ಎಂಬಾತ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆದರೆ ಪ್ರೀತಿಗೆ ಮನೆಯವರಿಂದ ನಿರಾಕರಣೆ ಬಂದ ಕಾರಣ ಮನೆಯವರು ನೋಡಿದ ಹುಡುಗಿಯನ್ನೇ ವಿವಾಹವಾಗಿದ್ದಾನೆ. ವಿವಾಹ ಸಮಾರಂಭದ ಬಳಿಕ ಗೋಪಾಲ್ ರಾಮ್ ತನ್ನ ಪತ್ನಿ ಮತ್ತು ಇತರ ಸಂಬಂಧಿಕರೊಂದಿಗೆ ತನ್ನ ಗ್ರಾಮಕ್ಕೆ ಮರಳಿದ್ದಾನೆ.

ಮದುವೆ ಕಾರಣದಿಂದ ಕೋಪಗೊಂಡ ಗೋಪಾಲ್ ಪ್ರೇಯಸಿ ರಾತ್ರಿ ಎಲ್ಲರೂ ಮಲಗಿರುವ ಸಂದರ್ಭದಲ್ಲಿ ವಧುವಿನ ಕೋಣೆಯೊಳಗೆ ಹೊಕ್ಕಿದ್ದಾಳೆ. ಅಷ್ಟೇ ಅಲ್ಲದೆ ಮಲಗಿದ್ದ ವಧುವಿನ ತಲೆಗೂದಲನ್ನು ಕತ್ತರಿಸಿದ್ದಾಳೆ. ಕೋಪ ಕಡಿಮೆಯಾಗದೇ ಆಕೆಯ ಕಣ್ಣುಗಳಿಗೆ ಫೆವಿಕಾಲ್​ ಗಮ್​ ಹಚ್ಚಿದ್ದಾಳೆ. ಈ ವೇಳೆಗೆ ವಧು ಭಯದಿಂದ ಕಿರುಚಾಡಿದ್ದಾಳೆ. ಮಲಗಿದ್ದ ಮನೆಯವರೆಲ್ಲ ಎದ್ದು ಬರುವಷ್ಟರಲ್ಲಿ ಪ್ರಮಾದ ನಡೆದು ಹೋಗಿತ್ತು.

ಕೃತ್ಯ ಎಸಗಿ ಪರಾರಿಯಾಗಲು ಪ್ರಯತ್ನಿಸಿದ ಪ್ರೇಯಸಿಯನ್ನು ಸಂಬಂದಿಕರು ತಕ್ಷಣ ಹಿಡಿದು ಥಳಿಸಿದ್ದಾರೆ. ಕೋಣೆಯೊಂದರಲ್ಲಿ ಕೂಡಿ ಹಾಕಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಯಿತು.

ಇನ್ನು ತೀವ್ರ ಗಾಯಗಳಾದ ಕಾರಣ ಸಂತ್ರಸ್ತೆಯನ್ನು ಬಿಹಾರದ ಷರೀಫ್‌ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಪರಿಸ್ಥಿತಿ ಸ್ಥಿರವಾಗಿದೆ. ಆದ್ರೆ ಘಟನೆಯಿಂದ ಆಕೆ ದೃಷ್ಟಿ ಕಳೆದುಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.