ETV Bharat / bharat

ಅಪಾಯದ ಮಟ್ಟ ತಲುಪಿದ ಕಾವೇರಿ: ಅತಿ ಹೆಚ್ಚು ಪ್ರವಾಹ ಉಂಟಾಗುವ ಎಚ್ಚರಿಕೆ ನೀಡಿದ ಕೇಂದ್ರ!

author img

By

Published : Aug 7, 2020, 4:53 PM IST

ಕಾವೇರಿ ನದಿ ತೀರದಲ್ಲಿ ಸಂಜೆ ವೇಳೆಗೆ ಅತಿ ಹೆಚ್ಚಿನ ಪ್ರಮಾಣದ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ.

River Cauvery
River Cauvery

ನವದೆಹಲಿ: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ವರುಣನ ಆರ್ಭಟ ಜೋರಾಗಿದ್ದು, ಈಗಾಗಲೇ ಕಾವೇರಿ ಅಪಾಯದ ಮಟ್ಟ ಮೀರಿದೆ. ಇದರ ಮಧ್ಯೆ ಕೇಂದ್ರ ಜಲ ಆಯೋಗ ಮತ್ತೊಂದು ಎಚ್ಚರಿಕೆ ನೀಡಿದೆ.

  • River Cauvery at Napoklu in Kodagu District, Karnataka is very likely to cross highest flood level by today evening. Hydrograph is appended: Central Water Commission pic.twitter.com/sk9h7LzuYh

    — ANI (@ANI) August 7, 2020 " class="align-text-top noRightClick twitterSection" data=" ">

ಒಂದೇ ಸಮನೆ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಭಾಗದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೀಗ ಕೊಡಗು ಜಿಲ್ಲೆಯ ನಾಪೋಕ್ಲು ಪ್ರದೇಶದಲ್ಲಿ ಸಂಜೆ ವೇಳೆಗೆ ಅತಿ ಹೆಚ್ಚು ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಮಡಿಕೇರಿ- ಮೈಸೂರು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕಪಿಲಾ ನದಿ ಸ್ನಾನಘಟ್ಟ ಮುಳುಗಡೆಯಾಗಿದೆ. ಜತೆಗೆ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಭೀಕರ ಭೂಕುಸಿತ ಉಂಟಾಗಿ ಐವರು ಕಣ್ಮರೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.