ETV Bharat / bharat

ಧಮ್​ ಇದ್ರೆ ಮುಟ್​ ನೋಡಿ... ಹೆಣ್ಣಿನ ರಕ್ಷಣೆಗೆ ಬಂತು ಕೀ ಬಂಚ್​​​, ಮುಟ್ಟಿದ್ರೆ ಹೊಡೆಯುತ್ತೆ ಶಾಕ್​​​

author img

By

Published : Oct 12, 2020, 6:42 PM IST

ಕಾನ್ಪುರದ ವಿದ್ಯಾರ್ಥಿನಿ ಪೂಜಾ ಪಟೇಲ್ ಅವರು ಮಹಿಳೆಯರ ಸುರಕ್ಷತೆಗಾಗಿ ಕೀ ಬಂಚ್​ವೊಂದನ್ನು ವಿನ್ಯಾಸಗೊಳಿಸಿದ್ದು,ಇದರೊಳಗೆ ವಿದ್ಯುತ್​ ಪ್ರವಹಿಸುವುದರಿಂದ ಇದನ್ನು ಮಹಿಳೆಯರು ದುಷ್ಕರ್ಮಿಗಳಿಗೆ ಇದ್ರಿಂದ ಶಾಕ್​​ ಹೊಡೆಯುವಂತೆ ಮಾಡಿ,ಬಚಾವ್​ ಆಗಬಹುದು.

perpetrator
ಮಹಿಳೆಯರ ರಕ್ಷಣಾ ಸಾಧನ

ಕಾನ್ಪುರ (ಉತ್ತರ ಪ್ರದೇಶ): ಭಾರತದಲ್ಲಿ ಮಹಿಳೆಯರ ಮೇಲಿನ ಅಪರಾಧದ ಘಟನೆಗಳಿಂದ ನೊಂದ ಉತ್ತರ ಪ್ರದೇಶದ ಕಾನ್ಪುರದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮಹಿಳೆಯರ ರಕ್ಷಣೆಗಾಗಿ ಕೀ ಬಂಚ್​ ಒಂದನ್ನು ತಯಾರಿಸಿದ್ದಾರೆ.

ಮಹಿಳೆಯರ ರಕ್ಷಣಾ ಸಾಧನ

ಕಾನ್ಪುರದ ವಿಕಾಸ್ ನಗರದ ನಿವಾಸಿ ಪೂಜಾ ಪಟೇಲ್ ಈ ಕೀ ಬಂಚ್ ವಿನ್ಯಾಸಗೊಳಿಸಿದ್ದು, ಇದರಲ್ಲಿ 440 ವೋಲ್ಟ್ ವರೆಗೆ ವಿದ್ಯುತ್ ಪ್ರವಹಿಸುತ್ತದೆ. ತನ್ನ ಸಾಧನಕ್ಕೆ 'Emergency shock key chain for women's safety. ಅಂತ ಹೆಸರಿಟ್ಟಿದ್ದಾರೆ.

ಮಹಿಳೆಯರ ಮೇಲಿನ ಅಪರಾಧದ ವರದಿಗಳನ್ನು ನೋಡುವಾಗ, ಅವರ ಸುರಕ್ಷತೆಗಾಗಿ ನಾನು ಏನಾದರೂ ಮಾಡಲು ನಿರ್ಧರಿಸಿದೆ. ಆದ್ದರಿಂದ ನಾನು ಈ ಸಾಧನವನ್ನು ತಯಾರಿಸಿದ್ದೇನೆ. ಒಮ್ಮೆ ನೀವು ಈ ಬಂಚ್​​ನಲ್ಲಿರುವ ಬಟನ್​ ಆನ್ ಮಾಡಿದರೆ ಅದರ ಮೂಲಕ 220-440 ವೋಲ್ಟ್‌ಗಳ ನಡುವೆ ವಿದ್ಯುತ್ ಪ್ರವಾಹ ಹಾದುಹೋಗುತ್ತದೆ" ಇದನ್ನು ತಯಾರಿಸಲು ಕೇವಲ 300 ರೂ ಖರ್ಚಾಗಿದೆ. ಇದು ರಿಚಾರ್ಜ್​ ಮಾಡಬಹುದಾದ ಬ್ಯಾಟರಿ ಮತ್ತು ಕೆಪಾಸಿಟರ್ ಅನ್ನು ಒಳಗೊಂಡಿರುತ್ತದೆ. ಜೊತೆಗೆ ಈ ಬಂಚ್​ನಲ್ಲಿ ಒಂದು ಬಟನ್​ ಇದ್ದು, ಅದನ್ನು ಒತ್ತಿದಾಗ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದು ಪೂಜಾ ತಿಳಿಸಿದ್ರು.

ಮಹಿಳೆಯರ ಮೇಲೆ ಅತ್ಯಾಚಾರ ಅಥವಾ ಇತರೆ ದೌರ್ಜನ್ಯ ಎಸೆಗಲು ಬಂದಾಗ ಅವರು ಆ ಬಟನ್​ ಒತ್ತಿದರೆ ಸಾಕು ಆತನಿಗೆ ಶಾಕ್​ ಹೊಡೆಯುತ್ತದೆ ,ಅವನು ಇದರಿಂದ ಪ್ರಜ್ಞಾಹೀನನಾಗುತ್ತಾನೆ. ಈ ವೇಳೆ ಮಹಿಳೆ ಎಸ್ಕೇಪ್​ ಆಗಲು ಅವಕಾಶ ಮತ್ತು ಸಮಯ ಸಿಗುತ್ತದೆ ಎಂದು ಪೂಜಾ ಹೇಳಿದ್ದಾರೆ. ಈ ಮಹಿಳಾ ಸುರಕ್ಷಾ ಸಾಧನ ತಯಾರಿಸಲು 12 ವರ್ಷದ ಆಕೆಯ ಸಹೋದರ ಶಿವ ಕೂಡ ತಾಂತ್ರಿಕ ಸಹಾಯ ಮಾಡಿದ್ದಾನೆ.

ಇನ್ನೂ ಟಿಂಕರ್ ಇಂಡಿಯಾ ಸಂಸ್ಥಾಪಕ ಕೌಸ್ತುಬ್ ಒಮರ್ ಅವರು ಪೂಜಾ ಹೆಸರಿನಲ್ಲಿ ಸಾಧನಕ್ಕೆ ಪೇಟೆಂಟ್ ಪಡೆಯಲು ಉದ್ದೇಶಿಸಿದ್ದಾರೆ ಮತ್ತು ಐಟಿ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಾಧನವನ್ನು ಮಾರುಕಟ್ಟೆಗೆ ತರಲು ಯೋಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.