ETV Bharat / bharat

ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಜುಲಿಮಾಗೆ ಯುನಿಸೆಫ್ ಪ್ರಶಸ್ತಿ

author img

By

Published : Dec 12, 2019, 2:20 PM IST

ಜುಲಿಮಾ ಪ್ರಸ್ತುತ ತನ್ನ ಬುಡಕಟ್ಟು ಜನರು ವಾಸಿಸುವ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಹಕ್ಕಿಗಾಗಿ ಮತ್ತು ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ಅವರ ಹೋರಾಟವು ಅವರಿಗೆ ಯುನಿಸೆಫ್ ಪ್ರಶಸ್ತಿಯನ್ನು ತಂದುಕೊಟ್ಟಿದೆ.

ಜುಲಿಮಾಗೆ ಯುನಿಸೆಫ್ ಪ್ರಶಸ್ತಿ, Jhulima- fights against child marriages
ಜುಲಿಮಾಗೆ ಯುನಿಸೆಫ್ ಪ್ರಶಸ್ತಿ

ಜುಲಿಮಾ ಅವರು ಕೊಂಡೋ ಬುಡಕಟ್ಟಿನ ಬಡ ಕುಟುಂಬವೊಂದಕ್ಕೆ ಸೇರಿದವರು. ಅವರು ಒಡಿಶಾದ ಬಂದೂಡಿ ಪ್ರದೇಶದಲ್ಲಿ ವಾಸಿಸುತ್ತಾರೆ. ಜುಲಿಮಾ ತನ್ನ ಓದನ್ನು ಪೂರ್ಣ ನಿಲ್ಲಿಸಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಪೋಷಿಸುವ ಸಲುವಾಗಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ, ಅವರು ಸ್ವಯಂಸೇವಕರಾಗಿ ಎನ್​ಜಿಓ ಒಂದಕ್ಕೆ ಸೇರಿದರು ಮತ್ತು ಅವರ ಸಮಾಜದಲ್ಲಿನ ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿದರು. ವಾಸ್ತವವಾಗಿ, ತನ್ನ ಬುಡಕಟ್ಟು ಗುಂಪಿನಲ್ಲಿ ನಡೆಯಬೇಕಿದ್ದ ಸುಮಾರು 12 ಬಾಲ್ಯ ವಿವಾಹಗಳನ್ನು ನಿಲ್ಲಿಸಲು ಅವರು ಒಬ್ಬರೇ ಕಾರಣವಾಗಿದ್ದರು.

ದೂರ ಶಿಕ್ಷಣ ವ್ಯವಸ್ಥೆಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಿದ ಅವರು ಅವರು ತನ್ನ ಸ್ನೇಹಿತರು ಮತ್ತು ಸಮ ವಯಸ್ಕರನ್ನು ಶಾಲೆಗೆ ಸೇರಲು ಮತ್ತು ಶಿಕ್ಷಣ ಪಡೆಯಲು ಪ್ರೋತ್ಸಾಹಿಸುತ್ತಾರೆ. ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಿದ ತನ್ನ ಶಾಲಾ ಸಹಪಾಠಿಗಳನ್ನು ಮಧ್ಯಮ ಶಾಲಾ ದಾಖಲಾತಿಯತ್ತ ತಿರುಗಿಸಲು ಮತ್ತು ಅವರಿಗೆ ಕೌಶಲ್ಯ ತರಬೇತಿಯತ್ತ ಗಮನ ಹರಿಸುವಂತೆ ಮಾಡುವಲ್ಲಿ ಅವರು ಮತ್ತಷ್ಟು ಪ್ರಮುಖ ಪಾತ್ರ ವಹಿಸುತ್ತಾರೆ.

ಜುಲಿಮಾ ಪ್ರಸ್ತುತ ತನ್ನ ಬುಡಕಟ್ಟು ಜನರು ವಾಸಿಸುವ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಹಕ್ಕಿಗಾಗಿ ಮತ್ತು ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ಅವರ ಹೋರಾಟವು ಅವರಿಗೆ ಯುನಿಸೆಫ್ ಪ್ರಶಸ್ತಿಯನ್ನು ತಂದುಕೊಟ್ಟಿದೆ. ರಾಷ್ಟ್ರವ್ಯಾಪಿ ಈ ಪ್ರಶಸ್ತಿಗಾಗಿ ಆಯ್ಕೆಯಾದ 10 ಜನರಲ್ಲಿ ಜುಲಿಮಾ ಕೂಡಾ ಒಬ್ಬರು. ಸಮಾಜದಲ್ಲಿ ತನ್ನ ಜೀವನವನ್ನು ಮತ್ತು ಸುತ್ತಮುತ್ತಲಿನವರ ಉನ್ನತಿಗಾಗಿ ಕೆಲಸ ಮಾಡುವವರಿಗೆ ಯುನಿಸೆಫ್ ಈ ಪ್ರಶಸ್ತಿಯನ್ನು ನೀಡುತ್ತದೆ.

Intro:Body:

Julima- fights against child marriages 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.