ETV Bharat / bharat

ಜೆಡಿಯುನಿಂದ ಪ್ರಶಾಂತ್​ ಕಿಶೋರ್‌ ಉಚ್ಚಾಟನೆ.. ಗಾಂಧಿ-ಗೋಡ್ಸೆ ಒಂದಾಗಲ್ಲ ಎಂದ ಚುನಾವಣಾ ಚಾಣಾಕ್ಷ!

author img

By

Published : Feb 18, 2020, 5:37 PM IST

ಚುನಾವಣಾ ಚಾಣಾಕ್ಷ ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ್​ ಕಿಶೋರ್​ ಅವರು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಯುನಿಂದ ಉಚ್ಚಾಟನೆಗೊಂಡಿದ್ದಾರೆ.

JD(U) hits back at Prashant Kishor over 'Godse' barb
ಪ್ರಶಾಂತ್​ ಕಿಶೋರ್​ ಮತ್ತು ನಿತೀಶ್​​ ಕುಮಾರ್​

ನವದೆಹಲಿ: ಚುನಾವಣಾ ಚಾಣಾಕ್ಷ ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ್​ ಕಿಶೋರ್​ ಅವರು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಯುನಿಂದ ಉಚ್ಚಾಟನೆಗೊಂಡಿದ್ದಾರೆ. ಜೊತೆಗೆ ಪಕ್ಷದ ಮತ್ತೊಬ್ಬ ನಾಯಕ ಪವನ್ ವರ್ಮಾ ಅವರನ್ನೂ ಪಕ್ಷದಿಂದ ಅಮಾನತು ಮಾಡಲಾಗಿದೆ.

ಅದಾದ ಕೆಲವೇ ಕ್ಷಣಗಳಲ್ಲಿ ಪಕ್ಷದ ಮುಖ್ಯಸ್ಥ ಹಾಗೂ ಬಿಹಾರ ಸಿಎಂ ನಿತೀಶ್​ ಕುಮಾರ್​ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಂಡಿರುವ ನಿಮಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ.

ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಪಕ್ಷ ಎಂದಿಗೂ ಬಿಡುವುದಿಲ್ಲ. ಅದು ಸಾಧ್ಯವಾಗುವುದೂ ಇಲ್ಲ ಎಂದು ನಿತೀಶ್​ ಕುಮಾರ್​ ಪ್ರತಿ ಸಲ ಹೇಳುತ್ತಿದ್ದರು. ಆದರೆ, ಗಾಂಧಿಯನ್ನೇ ಕೊಂದ ನಾಥೂರಾಮ್ ಗೂಡ್ಸೆ ನಿಲುವು ಹೊಂದಿರುವವರ ಜತೆ ಕೈಜೋಡಿಸುತ್ತಿದ್ದಾರೆ. ಈ ಮೂಲಕ ಗೋಡ್ಸೆ ಸಿದ್ಧಾಂತದತ್ತ ಜೆಡಿಯು ವಾಲುತ್ತಿದೆ. ಗಾಂಧೀಜಿ ಮತ್ತು ಗೋಡ್ಸೆ ಎಂದಿಗೂ ಕೈ ಜೋಡಿಸಲು ಸಾಧ್ಯವಿಲ್ಲ ಎಂದರು.

ಪಕ್ಷದ ಸಿದ್ಧಾಂತದ ಕುರಿತು ನನ್ನ ಮತ್ತು ನಿತೀಶ್ ಕುಮಾರ್ ಅವರ ನಡುವೆ ಅನೇಕ ಚರ್ಚೆಗಳು ನಡೆದಿವೆ ಎಂದು ಹೇಳಿದರು. ಕಿಶೋರ್​ ಮತ್ತು ಪವನ್​ ವರ್ಮಾ ಜೆಡಿಯು ನಿಲುವಿಗೆ ವ್ಯತಿರಿಕ್ತವಾಗಿ ಸಿಎಎ ಮತ್ತು ಎನ್​ಆರ್​ಸಿಯನ್ನು ವಿರೋಧಿಸಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.