ETV Bharat / bharat

ಕೋವಿಡ್​ ವಿರುದ್ಧ ಹೋರಾಡಲು ಭಾರತಕ್ಕೆ ಜಪಾನ್​ ಸಹಾಯ ಹಸ್ತ​

author img

By

Published : Jan 9, 2021, 10:28 AM IST

ಭಾರತಕ್ಕೆ ಜಪಾನ್ 30 ಬಿಲಿಯನ್​​​ ಯೆನ್ (ಅಂದಾಜು 2,113 ಕೋಟಿ ರೂ.) ಸಾಲವನ್ನು ನೀಡಲಿದೆ. ಈ ಸಾಲವು ಕೋವಿಡ್ -19 ಸಾಂಕ್ರಾಮಿಕ ರೋಗದ ತೀವ್ರ ಪರಿಣಾಮಗಳ ವಿರುದ್ಧ ಹೋರಾಡುವಲ್ಲಿ ಭಾರತದ ಪ್ರಯತ್ನಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

Japan extends 30 bn yen loan to India for Covid-19 support
ಕೋವಿಡ್​ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಹಸ್ತ ಚಾಚಿದ ಜಪಾನ್​​

ನವದೆಹಲಿ: ಕೋವಿಡ್ -19 ಪೀಡಿತ ಬಡ ಮತ್ತು ದುರ್ಬಲ ಕುಟುಂಬಗಳಿಗೆ ನೆರವು ನೀಡಲು ಭಾರತಕ್ಕೆ ಜಪಾನ್ 30 ಬಿಲಿಯನ್​​​ ಯೆನ್ (ಅಂದಾಜು 2,113 ಕೋಟಿ ರೂ.) ಸಾಲವನ್ನು ನೀಡಲಿದೆ.

ಈ ಸಾಲಕ್ಕೆ ಸಂಬಂಧಿಸಿದಂತೆ ಭಾರತದ ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಸಿ.ಎಸ್. ಮೊಹಾಪಾತ್ರ ಮತ್ತು ಜಪಾನ್ ರಾಯಭಾರಿ ಸುಝುಕಿ ಸಟೋಶಿ ನಡುವೆ ಶುಕ್ರವಾರ ಮಾತುಕತೆ ಆಗಿದೆ.

ಈ ಸುದ್ದಿಯನ್ನೂ ಓದಿ: ದೇಶದಲ್ಲಿ ಈವರೆಗೆ 18 ಕೋಟಿ ಜನರಿಗೆ ಕೊರೊನಾ ಟೆಸ್ಟ್​..

ಈ ಕುರಿತು ಮೊಹಾಪಾತ್ರಾ ಮತ್ತು ಜೆಐಸಿಎ ಮುಖ್ಯ ಪ್ರತಿನಿಧಿ ಕಟ್ಸುವೊ ಮಟ್ಸುಮೊಟೊ ಇಬ್ಬರೂ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಸಾಲವು ಕೋವಿಡ್ -19 ಸಾಂಕ್ರಾಮಿಕ ರೋಗದ ತೀವ್ರ ಪರಿಣಾಮಗಳ ವಿರುದ್ಧ ಹೋರಾಡುವಲ್ಲಿ ಭಾರತದ ಪ್ರಯತ್ನಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.