ETV Bharat / bharat

ಮಸೀದಿ, ಮದರಸಾಗಳಲ್ಲಿ ಕ್ವಾರಂಟೈನ್‌ಗೆ​ ಸ್ಥಳಾವಕಾಶ ನೀಡಲು ಇಮಾಮ್​ ಸಂಘ ಮನವಿ

author img

By

Published : May 12, 2020, 11:29 AM IST

ಪಶ್ಚಿಮ ಬಂಗಾಳದಲ್ಲೂ ಕೋವಿಡ್​ ಅಬ್ಬರ ಕಮ್ಮಿಯೇನಿಲ್ಲ. ಇದರ ಮಧ್ಯೆ ಅಲ್ಲಿನ ಇಮಾಮ್​ ಸಂಘಟನೆ ಮಾನವೀಯ ನಿಲುವು ತಾಳಿದೆ.

Imams' association
Imams' association

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿರುವ ಮಸೀದಿಗಳು ಮತ್ತು ಮದರಸಾಗಳಲ್ಲಿ ಕೋವಿಡ್​ ಸೋಂಕಿತರ ಕ್ವಾರಂಟೈನ್​ಗೆ ಅವಕಾಶ ನೀಡಬೇಕು ಎಂದು ಅಲ್ಲಿನ ಇಮಾಮ್​ ಸಂಘಟನೆ ಮಸೀದಿಗಳ ಮುಖ್ಯಸ್ಥರಲ್ಲಿ ಮನವಿ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿನ 2,600 ಮಸೀದಿ ಹಾಗೂ ಮದರಸಾಗಳನ್ನು ರಾಜ್ಯ ಸರ್ಕಾರದ ಅಧೀನಕ್ಕೆ ನೀಡಿ ಅಲ್ಲಿ ಕ್ವಾರಂಟೈನ್​ ಸೆಂಟರ್​ ಮಾಡಲು ಅವಕಾಶ ನೀಡಬೇಕು ಎಂದು ಸಂಘಟನೆ ಮುಖ್ಯಸ್ಥ ಯಾಹಿನ್​ ತಿಳಿಸಿದ್ದಾರೆ.

ರಾಜ್ಯದಲ್ಲಿ ಕ್ವಾರಂಟೈನ್​ ಸೆಂಟರ್‌ಗಳನ್ನು ತೆರೆಯಲು​ ಸ್ಥಳಾವಕಾಶದ ತೊಂದರೆಯುಂಟಾಗಿದೆ. ನಾವು ಇಂಥ ಸಂದರ್ಭದಲ್ಲಿ ಮಾನವೀಯ ನಿಲುವು ತಾಳಬೇಕಿದೆ. ಈ ಮೂಲಕ ಅನೇಕರಿಗೆ ಸಹಾಯ ಮಾಡಿದಂತಾಗುತ್ತದೆ. ಒಂದೊಂದು ಮಸೀದಿಯಲ್ಲಿ ಸುಮಾರು 50 ಜನರಿಗೆ ಉಳಿದುಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.