ETV Bharat / bharat

ನನ್ನ ಉಡುಗೆ-ತೊಡುಗೆ ಬಗ್ಗೆ ಯಾರೂ ಕಾಮೆಂಟ್​ ಮಾಡುವಂತಿಲ್ಲ: ಟ್ರೋಲ್​ ಮಾಡಿದವರಿಗೆ ನುಸ್ರತ್​ ಟಾಂಗ್

author img

By

Published : Jun 30, 2019, 1:41 AM IST

ನಾನು ಭಾರತದ ಅಂತಸತ್ವವನ್ನು ಗೌರವಿಸುತ್ತೇನೆ. ಅದು ಜಾತಿ, ಧರ್ಮಗಳಿಗೆ ಹೊರತಾಗಿದ್ದು. ಮುಸ್ಲಿಂ ಆಗಿದ್ದುಕೊಂಡು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಟ್ರೋಲ್​ಗಳಿಗೆ ತುತ್ತಾದ ನೂತನ ಟಿಎಂಸಿ ಸದಸ್ಯೆ ನುಸ್ರತ್ ಜಹಾನ್​, ಇದೀಗ ಸಖತ್ ಟಾಂಗ್ ನೀಡಿದ್ದಾರೆ.

ನುಸ್ರತ್ ಜಹಾನ್

ನವದೆಹಲಿ: ಸಿಂಧೂರವಿಟ್ಟು ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಟ್ರೋಲ್​ಗಳಿಗೆ ತುತ್ತಾಗಿದ್ದ ನೂತನ ಟಿಎಂಸಿ ಸಂಸದೆ ನುಸ್ರತ್ ಜಹಾನ್​, ಇದೀಗ ಸಖತ್ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ನಾನು ಭಾರತದ ಅಂತಸತ್ವವನ್ನು ಗೌರವಿಸುತ್ತೇನೆ. ಅದು ಜಾತಿ, ಧರ್ಮಗಳಿಗೆ ಹೊರತಾಗಿದ್ದು. ಮುಸ್ಲಿಂ ಆಗಿದ್ದುಕೊಂಡು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಟೀಕಾಕಾರನ್ನು ಕುಟುಕಿರುವ ಅವರು, ನಾನು ಧರಿಸಿರುವ ಡ್ರೆಸ್​​ ಬಗ್ಗೆ ಯಾರೂ ಕಾಮೆಂಟ್​ ಮಾಡುವಂತಿಲ್ಲ. ಉಡುಪು ಧರ್ಮಕ್ಕೆ ಹೊರತಾದುದು. ಎಲ್ಲಾ ಧಾರ್ಮಿಕ ಸಿದ್ದಾಂತಗಳನ್ನು ನಂಬುವುದು, ಆಚರಿಸುವುದು ಮುಖ್ಯ ಎಂದಿದ್ದಾರೆ.

ಇಂತಹ ಕಾಮೆಂಟ್​ಗಳನ್ನು ಮಾಡುವ ಯಾವುದೇ ಧರ್ಮದವರಾದರೂ ಅವರು ದ್ವೇಷದ ಹಾಗೂ ಹಿಂಸೆಯ ತಳಿಗಳು. ಇದಕ್ಕೆ ಇತಿಹಾಸದಲ್ಲೇ ಪುರಾವೆಯಿದೆ ಎಂದು ತಮ್ಮ ಪೋಸ್ಟ್​ ಕೆಳಗೆ ಬರೆದು, ಛೇಡಿಸಿದ್ದಾರೆ.ನಟಿಯಾಗಿ ಗುರ್ತಿಸಿಕೊಂಡ ನುಸ್ರತ್​, ಸಿಂಧೂರ ಧರಿಸಿದ್ದರ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದಿದ್ದವು.

Intro:Body:

Nusrat Jahan


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.