ETV Bharat / bharat

ಪೊಲೀಸ್‌ ಎನ್‌ಕೌಂಟರ್‌ಗಳಿಗೆ ನನ್ನ ವಿರೋಧವಿದೆ: ಹೈದರಾಬಾದ್‌ ಸಂಸದ ಅಸಾದುದ್ದೀನ್ ಒವೈಸಿ

author img

By

Published : Dec 6, 2019, 5:19 PM IST

ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್​ಕೌಂಟರ್​ ನಡೆಸಿ ಹತ್ಯೆಗೈದ ತೆಲಂಗಾಣ ಪೊಲೀಸರ ಕ್ರಮಕ್ಕೆ ಹೈದರಾಬಾದ್​ ಸಂಸದ ಅಸಾದುದ್ದೀನ್​ ಒವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ.

AIMIM Chief Asaduddin Owaisi
ಅಸಾದುದ್ದೀನ್​ ಓವೈಸಿ ವಿರೋಧ

ಹೈದರಾಬಾದ್​​: ಪಶುವೈದ್ಯೆ ಅತ್ಯಾಚಾರ ಮತ್ತು ಬರ್ಬರ ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಸೈಬರಾಬಾದ್​ ಪೊಲೀಸರು ಎನ್​​ಕೌಂಟರ್ ಮಾಡಿ ಮುಗಿಸಿರುವುದಕ್ಕೆ ಹೈದರಾಬಾದ್​ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ, ಪೊಲೀಸ್‌ ಎನ್‌ಕೌಂಟರ್‌ಗಳಿಗೆ ನನ್ನ ವಿರೋಧವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈಗಾಗಲೇ ಪೊಲೀಸರಿಗೆ ನೋಟಿಸ್​ ಕಳುಹಿಸಿದೆ ಎಂದು ತಿಳಿಸಿದ್ರು.

Intro:Body:

ಎನ್​ಕೌಂಟರ್​ಗೆ ವಿರೋಧ... ಮಾನವ ಹಕ್ಕುಗಳ ಆಯೋಗಕ್ಕೆ ಸಪೋರ್ಟ್​ ಎಂದ ಓವೈಸಿ!



ಹೈದರಾಬಾದ್​​: ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಸಂಬಂಧ ನಾಲ್ವರು ಆರೋಪಿಗಳನ್ನು ಸೈಬರಾಬಾದ್​ ಪೊಲೀಸರು ಎನ್​​ಕೌಂಟರ್ ಮಾಡಿದ​​ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆ ಹೈದರಾಬಾದ್​ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. 



ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ, ಪೊಲೀಸರು ನಡೆಸಿರುವ ಎನ್​​ಕೌಂಟರ್​ಗೆ ನನ್ನ ವಿರೋಧವಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್​ ಕಳುಹಿಸಿದೆ ಎಂದು ತಿಳಿಸಿದ್ದಾರೆ. 



ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿದ್ದ ನಾಲ್ವರು ಆರೋಪಿಗಳು ಇಂದು ಬೆಳಗ್ಗೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರು ಪೊಲೀಸರಿಂದ ಪಿಸ್ತೂಲ್​ ಕಸಿದುಕೊಂಡು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಾಣರಕ್ಷಣೆಗಾಗಿ ಪೊಲೀಸರು ಶೂಟೌಟ್​ ನಡೆಸಿದ್ದು, ಅದರಲ್ಲಿ ನಾಲ್ವರು ಆರೋಪಿಗಳು ಸಾವನ್ನಪ್ಪಿದ್ದಾರೆ. ಜತೆಗೆ ಇಬ್ಬರು ಪೊಲೀಸ್​ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.