ETV Bharat / bharat

ಜಿಹೆಚ್​ಎಂಸಿ ಚುನಾವಣೆಗೆ ಒಲವು ತೋರದ ಮತದಾರ: ಅತ್ಯಲ್ಪ ಪ್ರಮಾಣದ ಮತದಾನ

author img

By

Published : Dec 2, 2020, 8:25 PM IST

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​ ಮತದಾನಕ್ಕೆ ಜನರು ನೀರಸ ಪ್ರತಿಕ್ರಿಯೆ ತೋರಿದ್ದಾರೆ. ಅಬ್ಬರದ ಪ್ರಚಾರ ನಡೆಸಿದ ಪಕ್ಷಗಳಿಗೆ ಪ್ರತಿಫಲವಾಗಿ ಮತದಾರ ಒಲವು ತೋರಿಲ್ಲ.

Hyderabad
ಜಿಹೆಚ್​ಎಂಸಿ

ಹೈದರಾಬಾದ್(ತೆಲಂಗಾಣ): ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಗೆ ಮತದಾರ ನೀರಸ ಪ್ರತಿಕ್ರಿಯೆ ನೀಡಿದ್ದು, ಯಾವ ಪಕ್ಷದ ಚುನಾವಣಾ ಪ್ರಚಾರಗಳೂ ಕೂಡಾ ಮತಪ್ರಭುವಿನ ಮನ ಗೆಲ್ಲಲಿಲ್ಲ. ಹಾಗಾಗಿ ಕೇವಲ ಶೇ.46.55 ರಷ್ಟು ಮಾತ್ರ ಮತದಾನವಾಗಿದೆ.

ತೆಲಂಗಾಣ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಹಲವಾರು ಚುನಾವಣಾ ಪ್ರಚಾರದ ಹೊರತಾಗಿಯೂ 74.44 ಲಕ್ಷ ಮತದಾರರಲ್ಲಿ ಶೇ. 46.55ರಷ್ಟು ಮಾತ್ರ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಜಿಎಚ್‌ಎಂಸಿಯ 150 ವಾರ್ಡ್‌ಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆದಿದ್ದು, ಡಿಸೆಂಬರ್​ 4ಕ್ಕೆ ಮತ ಎಣಿಕೆ ನಡೆಯಲಿದೆ. ತೆಲಂಗಾಣ ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ವಾರ್ಡ್ ಸಂಖ್ಯೆ 26 ರ ಎಲ್ಲಾ 69 ಮತಗಟ್ಟೆಗಳಲ್ಲಿ ನಾಳೆ ಮರು ಚುನಾವಣೆ ನಡೆಸಲು ಆದೇಶಿಸಿದೆ. ಈ ವಾರ್ಡ್​ನಲ್ಲಿ ನಡೆದ ಮತದಾನದಲ್ಲಿ ಸಿಪಿಐ ಬದಲಿಗೆ ಸಿಪಿಐ (ಎಂ) ಚಿಹ್ನೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿ ಮುದ್ರಿಸಲಾಗಿದೆ ಎಂದು ಕಂಡುಬಂದಿದೆ.

ವರದಿಗಳ ಪ್ರಕಾರ ಆರ್‌ಸಿ ಪುರಂನಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ.67.71 ಮತ್ತು ಯೂಸುಫ್‌ಗುಡಾದಲ್ಲಿ ಶೇ.32.99ರಷ್ಟು ಅತಿ ಕಡಿಮೆ ಮತದಾನವಾಗಿದೆ.

ಇನ್ನು ಆಡಳಿತಾರೂಢ ಟಿಆರ್‌ಎಸ್, ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಯುದ್ಧಕ್ಕೆ 1,122 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

ಆಡಳಿತ ಪಕ್ಷ ಟಿಆರ್‌ಎಸ್ ಅನ್ನು ತೀವ್ರವಾಗಿ ಟೀಕಿಸಿದ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಜಿ ಕಿಶನ್ ರೆಡ್ಡಿ, ಇಷ್ಟು ಕಡಿಮೆ ಶೇಕಡಾವಾರು ಮತದಾನ ಆಗಿರುವುದಕ್ಕೆ ಸರ್ಕಾರ ತಲೆ ತಗ್ಗಿಸಬೇಕು ಎಂದು ಟೀಕಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.