ETV Bharat / bharat

ರೆಸ್ಟೋರೆಂಟ್‌ನಲ್ಲಿ ಪತ್ನಿಗೆ ಲೈಂಗಿಕ ಕಿರುಕುಳ: ಪ್ರಶ್ನೆ ಮಾಡಿದ್ದಕ್ಕಾಗಿ ಪತಿ ತಲೆಗೆ ಬಾಟಲಿಯಿಂದ ಹೊಡೆದ್ರು!

author img

By

Published : Nov 13, 2019, 2:43 PM IST

Updated : Nov 13, 2019, 3:37 PM IST

ಹೆಂಡತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳೊಂದಿಗೆ ಗಂಡ ಜಗಳಕ್ಕಿಳಿದ ವೇಳೆ ಆತನಿಗೆ ಬಾಟಲಿಯಿಂದ ಹೊಡೆದಿರುವ ಘಟನೆ ಗುರುಗ್ರಾಮ್​ದಲ್ಲಿ ನಡೆದಿದೆ.

ಕೈಗೆ ಸಿಕ್ಕ ಬಾಟಲಿಯಿಂದ ಹೊಡೆದ ಗಂಡ

ಗುರುಗ್ರಾಮ್​​: ಹೆಂಡತಿಯನ್ನು ಕರೆದುಕೊಂಡು ರೆಸ್ಟೋರೆಂಟ್​ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಆತನ ಪತ್ನಿಗೆ ಕಿರುಕುಳ ನೀಡಿದ್ದರಿಂದ ಆಕ್ರೋಶಗೊಂಡ ಗಂಡ ಅವರೊಂದಿಗೆ ವಾದಕ್ಕಿಳಿದಾಗ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Husband Hit On Head With Bottle
ಕೈಗೆ ಸಿಕ್ಕ ಬಾಟಲಿಯಿಂದ ಹೊಡೆದ ಗಂಡ

ರವಿವಾರ ರಾತ್ರಿ ಈ ಘಟನೆ ನಡೆದಿದೆ. ಊಟ ಮಾಡುವ ಉದ್ದೇಶದಿಂದ ಹೆಂಡತಿಯನ್ನ ಕರೆದುಕೊಂಡು ಗಂಡ ರೆಸ್ಟೋರೆಂಟ್​ಗೆ ತೆರಳಿದ್ದಾನೆ. ಈ ವೇಳೆ ಕಂಠಪೂರ್ತಿ ಕುಡಿದು ಅಲ್ಲಿಗೆ ಬಂದಿರುವ ಆರು ಮಂದಿ ದುಷ್ಕರ್ಮಿಗಳು ವ್ಯಕ್ತಿಯ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಈ ವೇಳೆ ಅವರೊಂದಿಗೆ ವಾದಕ್ಕಿಳಿದಿರುವ ಗಂಡನ ಮೇಲೆ ದುಷ್ಕರ್ಮಿ ಗುಂಪಿನ ವ್ಯಕ್ತಿಯೋರ್ವ ಕೈಯಲ್ಲಿ ಬಾಟಲಿ ಹಿಡಿದುಕೊಂಡು ತಲೆಗೆ ಬಾರಿಸಿದ್ದಾನೆ.

ಘಟನೆ ನಡೆಯುತ್ತಿದ್ದಂತೆ ಅವರೆಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ರೆಸ್ಟೋರೆಂಟ್​​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Intro:Body:

ಕಟ್ಟಿಕೊಂಡ ಹೆಂಡ್ತಿಗೆ ದುಷ್ಕರ್ಮಿಗಳಿಂದ ಕಿರುಕುಳ.. ಕೈಗೆ ಸಿಕ್ಕ ಬಾಟಲಿಯಿಂದ ಹೊಡೆದ ಗಂಡ! 



ಗುರುಗ್ರಾಮ್​​: ಹೆಂಡತಿ ಕರೆದುಕೊಂಡು ಊಟ ಮಾಡುವ ಉದ್ದೇಶದಿಂದ ರೆಸ್ಟೋರೆಂಟ್​ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಆತನ ಪತ್ನಿಗೆ ಕಿರುಕುಳ ನೀಡಿದ್ದರಿಂದ ಆಕ್ರೋಶಗೊಂಡ ಗಂಡ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. 



ರವಿವಾರ ರಾತ್ರಿ ಈ ಘಟನೆ ನಡೆದಿದೆ. ಹೆಂಡತಿಯನ್ನ ಕರೆದುಕೊಂಡು ಊಟ ಮಾಡುವ ಉದ್ದೇಶದಿಂದ ಗಂಡ ರೆಸ್ಟೋರೆಂಟ್​ಗೆ ತೆರಳಿದ್ದಾನೆ. ಈ ವೇಳೆ ಕಂಠಪೂರ್ತಿ ಕುಡಿದು ಅಲ್ಲಿಗೆ ಬಂದಿರುವ ಆರು ಮಂದಿ ದುಷ್ಕರ್ಮಿಗಳು ವ್ಯಕ್ತಿಯ ಹೆಂಡತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಈ ವೇಳೆ ಅವರೊಂದಿಗೆ ವಾದಕ್ಕಿಳಿದಿರುವ ವ್ಯಕ್ತಿ ಕೈಯಲ್ಲಿ ಬಾಟಲಿ ಹಿಡಿದುಕೊಂಡು ವ್ಯಕ್ತಿಯೋರ್ವನ ತಲೆಗೆ ಬಾರಿಸಿದ್ದಾನೆ. 



ಘಟನೆ ನಡೆಯುತ್ತಿದ್ದಂತೆ ಅವರೆಲ್ಲರೂ ಸ್ಥಳದಿಂದ ಕಾಲುಕಿತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ರೆಸ್ಟೋರೆಂಟ್​​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. 


Conclusion:
Last Updated : Nov 13, 2019, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.