ETV Bharat / bharat

ಮಹಾಭಿಯೋಗದ ಮತದಾನಕ್ಕೆ ಸೆನೆಟ್​​ನಲ್ಲಿ ಸಿದ್ಧತೆ: ಪೆಲೋಸಿಯಿಂದ ''ಮ್ಯಾನೇಜರ್​''ಗಳ ನೇಮಕ..!

author img

By

Published : Jan 16, 2020, 12:28 PM IST

ಹೌಸ್​ ಆಫ್​ ರೆಪ್ರೆಸೆಂಟೇಟಿವ್ಸ್​​ನಲ್ಲಿ ಮಹಾಭಿಯೋಗದ ಮಸೂದೆ ಪಾಸಾಗಿ ಡೊನಾಲ್ಡ್​ ಟ್ರಂಪ್​ಗೆ ತೀವ್ರ ಹಿನ್ನಡೆಯಾಗಿತ್ತು. ಈಗ ಮಹಾಭಿಯೋಗದ ಆರ್ಟಿಕಲ್​ಗಳನ್ನು ಸೆನೆಟ್​ಗೆ ಕಳುಹಿಸಲಾಗಿದ್ದು, ಮಹಾಭಿಯೋಗದ ಮತದಾನಕ್ಕೆ ರಿಪಬ್ಲಿಕನ್ ಸದಸ್ಯರೇ ಹೆಚ್ಚಾಗಿರುವ​ ಸೆನೆಟ್​ ಸಜ್ಜಾಗುತ್ತಿದೆ.

House sends Trump impeachment articles to Senate
ಮಹಾಭಿಯೋಗದ ಮತದಾನಕ್ಕೆ ಸೆನೆಟ್​​ನಲ್ಲಿ ಸಿದ್ಧತೆ

ವಾಷಿಂಗ್ಟಂನ್​​​: ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್​ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗದ ಎರಡನೇ ಹಂತಕ್ಕೆ ಅಲ್ಲಿನ ಸಂಸತ್ತು ಸಜ್ಜಾಗಿದೆ. ಮಹಾಭಿಯೋಗದ ಆರ್ಟಿಕಲ್​​ಗಳನ್ನು ಸೆನೆಟ್​ಗೆ ಕಳುಹಿಸಲಾಗಿದೆ. ಸೆನೆಟ್​​ನಲ್ಲಿ ಡೊನಾಲ್ಡ್​ ಟ್ರಂಪ್​​ನ ಪಕ್ಷವಾದ ರಿಪಬ್ಲಿಕ್​ನ ಸದಸ್ಯರೇ ಹೆಚ್ಚಾಗಿದ್ದಾರೆ. ಡೆಮಾಕ್ರಟಿಕ್​ ಪಕ್ಷದ ಸದಸ್ಯರು ಹೆಚ್ಚಾಗಿದ್ದ ಹೌಸ್​ ಆಫ್​ ರೆಪ್ರೆಸೆಂಟೇಟೀವ್ಸ್​ನಲ್ಲಿ ಅಂದ್ರೆ ಮೇಲ್ಮನೆಯಲ್ಲಿ ಡೊನಾಲ್ಡ್​ ಟ್ರಂಪ್​ಗೆ ಹಿನ್ನಡೆಯಾಗಿತ್ತು. ಈಗ ಸೆನೆಟ್​​ನಲ್ಲಿ ಮತದಾನ ನಡೆಯಲಿದೆ.

ಮೇಲ್ಮನೆಯಲ್ಲಿ ಡೊನಾಲ್ಡ್​ ಟ್ರಂಪ್​ ವಿರುದ್ಧ ಪಾಸಾದ ಆರ್ಟಿಕಲ್​ ಗಳನ್ನು ಅಲ್ಲಿನ ಸ್ಪೀಕರ್​ ನ್ಯಾನ್ಸಿ ಪೆಲೋಸಿ ಸಹಿ ಮಾಡಿ ಸೆನೆಟ್​ಗೆ ಕಳಿಸಿದ್ದಾರೆ. ಈ ಕುರಿತು ಡೆಮಾಕ್ರಟಿಕ್​​ ಪಕ್ಷದ ಸದಸ್ಯರಾದ ಆ್ಯಡಂ ಸ್ಕಿಫ್​, ಜೆರ್ರಿ ನಾಡ್ಲರ್​, ಹಕೀಂ ಜೆಫ್ರೀಸ್​​, ಝೋಯ್​ ಲೋಫ್​ಗ್ರೆನ್​​, ವಾಲ್​ ಡೆಮ್ಮಿಂಗ್ಸ್​​, ಜಾಸನ್​ ಕ್ರೋ, ಸಿಲ್ವಿಯಾ ಗಾರ್ಸಿಯಾ, ನೇತೃತ್ವದ ಏಳು ಮಂದಿಯ ಮಹಾಭಿಯೋಗ ವ್ಯವಸ್ಥಾಪಕ ತಂಡವನ್ನು ನ್ಯಾನ್ಸಿ ಪೆಲೋಸಿ ರಚಿಸಿದ್ದಾರೆ.

ಕೆಂಟುಕಿಯ ರಿಪಬ್ಲಿಕನ್​ ಸದಸ್ಯ ಹಾಗೂ ಸೆನೆಟ್​ನ ನಾಯಕ ಮಿಚ್​​ ಮ್ಯಾಕ್​ ಮೆಕ್​​​ ವ್ಯವಸ್ಥಾಪಕರ ತಂಡವನ್ನು ಆಹ್ವಾನಿಸಿದ್ದು, ಸೆನೆಟ್​​ಗೆ ಆಹ್ವಾನಿಸಿದ್ದಾರೆ. ಮತ್ತು ಮೇಲ್ಮನೆಯಿಂದ ಬಂದ ಮಹಾಭಿಯೋಗದ ವರದಿಯನ್ನು ಓದಿ ಮತಯಾಚನೆಗೆ ಅವಕಾಶ ಮಾಡಿಕೊಡಲಿದ್ದಾರೆ. ಈ ವೇಳೆ ಅಲ್ಲಿನ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಜಾನ್​ ರಾಬರ್ಟ್​​​ ಸೆನೆಟ್​ನ ಅಧ್ಯಕ್ಷರಾಗಿ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಹಾಭಿಯೋಗದ ಮತದಾನದ ಪ್ರಕ್ರಿಯೆ ಮುಗಿಯುವವರೆಗೂ ಅಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಅಮೆರಿಕಾದ ಮಾನವ ಹಕ್ಕುಗಳ ಹರಿಕಾರ ಮಾರ್ಟಿನ್​ ಲೂಥರ್ ಕಿಂಗ್​ ಅವರ ಜನ್ಮ ದಿನಾಚರಣೆ ಅಂಗವಾಗಿ ಜನವರಿ 15ರಿಂದ 20ರವರೆಗೆ ರಜೆ ಘೋಷಣೆ ಮಾಡಲಾಗಿದ್ದು, ನಂತರವಷ್ಟೇ 21ರ ಮಂಗಳವಾರದಿಂದ ಸೆನೆಟ್​ ಆರಂಭವಾಗಲಿದೆ. ಒಟ್ಟು 100 ಸದಸ್ಯರಿರುವ ಸೆನೆಟ್​ನಲ್ಲಿ ಮತದಾನದ ಪ್ರಕ್ರಿಯೆ ಆರಂಭವಾಗಲಿದೆ.

ಸೆನೆಟ್​​ನಲ್ಲಿ ರಿಪಬ್ಲಿಕನ್​ ಪಕ್ಷದ ನಾಯಕ ಮಿಚ್​​​​​​ ಮೆಕ್​​ ಕನ್ನೆಲ್​​​ ''ಇದು ನಮ್ಮ ದೇಶಕ್ಕೆ ಕಷ್ಟದ ದಿನ, ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ದೇಶದ ದೀರ್ಘಕಾಲದ ಹಿತಾಸಕ್ತಿಯನ್ನು ಪೂರೈಸುತ್ತವೆ.'' ಎಂದಿದ್ದಾರೆ.

ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಪೆಲೋಸಿ '' ಇದು ಸಾಂವಿಧಾನಿಕ ಕರ್ತವ್ಯ. ನಾವು ಇತಿಹಾಸವನ್ನು ಸೃಷ್ಟಿಸಿದ್ದೇವೆ. ಸೆನೆಟ್​ ಹಾಲ್​ ಅನ್ನು ಪ್ರವೇಶಿಸಿ ನಮ್ಮ ಪಕ್ಷದ ಸದಸ್ಯರು ಹಾಗೂ ಮಹಾಭಿಯೋಗದ ವ್ಯವಸ್ಥಾಪಕರು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಮಹಾಭಿಯೋಗದ ವರದಿಗಳನ್ನು ಓದುತ್ತಾರೆ..'' ಎಂದು ಸಂಸತ ವ್ಯಕ್ತಪಡಿಸಿದ್ದಾರೆ. ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್​ ಸದಸ್ಯರೊಬ್ಬರು ಮಾತನಾಡಿ '' ಅಧ್ಯಕ್ಷರು ಎಲ್ಲಕ್ಕೂ ಜವಾಬ್ದಾರಿಯುತರಾಗಿರಬೇಕು'' ಎಂದಿದ್ದಾರೆ.


ಇನ್ನು ಟ್ರಂಪ್​​ 1868ರಲ್ಲಿ ಌಂಡ್ರೂ ಜಾನ್ಸನ್​ ಹಾಗೂ 1998-99ರ ಬಿಲ್​ ಕ್ಲಿಂಟನ್​ ಬಳಿಕ ಮಹಾಭಿಯೋಗಕ್ಕೆ ಒಳಗಾಗುತ್ತಿರುವ ಮೂರನೇ ಅಮೆರಿಕಾ ಅಧ್ಯಕ್ಷರಾಗಿದ್ದಾರೆ. ಈಗಲೂ ನಾನಾವುದೇ ತಪ್ಪು ಮಾಡಿಲ್ಲ ಎಂದೇ ಟ್ರಂಪ್​ ವಾದಿಸುತ್ತಿದ್ದು ಸಾಕ್ಷ್ಯಾಧಾರಗಳಿಲ್ಲದೇ ಮಹಾಭಿಯೋಗಕ್ಕೆ ಗುರಿಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.