ETV Bharat / bharat

ಪಂಜಾಬ್​ ಮಾತ್ರವಲ್ಲ, ಎಲ್ಲಾ ರಾಜ್ಯಗಳ ರೈತರೂ ಪ್ರತಿಭಟಿಸುತ್ತಿದ್ದಾರೆ: ಹರ್ಸಿಮ್ರತ್​ ಕೌರ್​

author img

By

Published : Feb 6, 2021, 12:09 PM IST

ಇಡೀ ದೇಶವೇ ಧರಣಿ ನಡೆಸುತ್ತಿರುವುದು ತಿಳಿದಿದ್ದರೂ ಪಂಜಾಬ್​ ಮೇಲೆ ಮಾತ್ರ ಗೂಬೆ ಕೂರಿಸಿದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಹರ್ಸಿಮ್ರತ್​ ಕೌರ್​ ಬಾದಲ್ ಹೇಳಿದ್ದಾರೆ.

Harsimrat Kaur Badal
ಹರ್ಸಿಮ್ರತ್​ ಕೌರ್​ ಬಾದಲ್

ಚಂಡೀಗಢ (ಪಂಜಾಬ್​): ಕೃಷಿ ಕಾನೂನುಗಳ ವಿರುದ್ಧ ದೇಶದ ಎಲ್ಲ ರಾಜ್ಯಗಳ ರೈತರೂ ಧರಣಿ ನಡೆಸುತ್ತಿದ್ದಾರೆ. ಆದರೆ, ಪಂಜಾಬ್​​​ ರಾಜ್ಯ ಮಾತ್ರ ಪ್ರತಿಭಟಿಸುತ್ತಿದೆ ಎಂದು ಭಾರತ ಸರ್ಕಾರ ತಪ್ಪಾಗಿ ಗ್ರಹಿಸಿದೆ ಎಂದು ಕೇಂದ್ರದ ಮಾಜಿ ಸಚಿವೆ ಮತ್ತು ಶಿರೋಮಣಿ ಅಕಾಲಿ ದಳದ ನಾಯಕಿ ಹರ್ಸಿಮ್ರತ್​ ಕೌರ್​ ಬಾದಲ್ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಪಂಜಾಬ್​ ಸೇರಿದಂತೆ ಕೆಲ ರಾಜ್ಯಗಳ ರೈತರನ್ನು ದಾರಿ ತಪ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅನೇಕ ಸಚಿವರು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರ್ಸಿಮ್ರತ್​ ಕೌರ್​, ಇಡೀ ದೇಶವೇ ಧರಣಿ ನಡೆಸುತ್ತಿರುವುದು ತಿಳಿದಿದ್ದರೂ ಪಂಜಾಬ್​ ಮೇಲೆ ಮಾತ್ರ ಗೂಬೆ ಕೂರಿಸಿದರೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರೈತ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಯುಎನ್ ಮಾನವ ಹಕ್ಕುಗಳ ಕಚೇರಿ

ದೆಹಲಿಗೆ ತೆರಳಿ ರಾಜ್ಯದ ಅಮಾಯಕ ಯುವಕರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಮಾಡುವುದು, ಅವರಿಗೆ ಸಹಾಯ ಮಾಡುವುದು ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ರ ಜವಾಬ್ದಾರಿಯಾಗಿದೆ. ಯಾವುದೇ ಎಫ್​ಐಆರ್​ ದಾಖಲಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಕರನ್ನು ಜೈಲಿಗಟ್ಟಲಾಗಿದೆ ಎಂದು ಹರ್ಸಿಮ್ರತ್ ಆರೋಪಿಸಿದ್ದಾರೆ.

ಕೇಂದ್ರ ಆಹಾರ ಸಂಸ್ಕರಣಾ ಖಾತೆ ಸಚಿವೆಯಾಗಿದ್ದ ಹರ್ಸಿಮ್ರತ್​ ಕೌರ್​ ಕೃಷಿ ಕಾಯ್ದೆಗಳು ಅಂಗೀಕಾರವಾಗುವ ಮುನ್ನವೇ ಮಸೂದೆಗಳನ್ನು ವಿರೋಧಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.