ETV Bharat / bharat

ಸಾಗರೋತ್ತರ ನಾಗರಿಕ ಕಾರ್ಡುದಾರರಿಗೆ ದೇಶಕ್ಕೆ ಮರಳಲು ಕೇಂದ್ರ ಅನುಮತಿ

author img

By

Published : May 22, 2020, 6:45 PM IST

ಗೃಹ ಸಚಿವಾಲಯದ ಆದೇಶದ ಪ್ರಕಾರ, ಭಾರತಕ್ಕೆ ಪ್ರಯಾಣಿಸಲು ಅನುಮತಿ ಪಡೆದವರಲ್ಲಿ, ಕುಟುಂಬದಲ್ಲಿನ ತುರ್ತು ಪರಿಸ್ಥಿತಿಗಳ ಕಾರಣದಿಂದ ದೇಶಕ್ಕೆ ಬರಲು ಬಯಸುವ ಒಸಿಐ ಕಾರ್ಡುದಾರರು ಸಹ ಸೇರಿದ್ದಾರೆ.

ಒಸಿಐ ಕಾರ್ಡುದಾರರಿಗೆ ದೇಶಕ್ಕೆ ಬರಲು ಕೇಂದ್ರ ಸರ್ಕಾರ ಅನುಮತಿ
ಒಸಿಐ ಕಾರ್ಡುದಾರರಿಗೆ ದೇಶಕ್ಕೆ ಬರಲು ಕೇಂದ್ರ ಸರ್ಕಾರ ಅನುಮತಿ

ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಕೆಲವು ವರ್ಗದ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡುದಾರರಿಗೆ ದೇಶಕ್ಕೆ ಬರಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಗೃಹ ಸಚಿವಾಲಯದ ಆದೇಶದ ಪ್ರಕಾರ, ಭಾರತಕ್ಕೆ ಪ್ರಯಾಣಿಸಲು ಅನುಮತಿ ಪಡೆದವರಲ್ಲಿ, ಕುಟುಂಬದಲ್ಲಿನ ತುರ್ತು ಪರಿಸ್ಥಿತಿಗಳ ಕಾರಣದಿಂದ ದೇಶಕ್ಕೆ ಬರಲು ಬಯಸುವ ಒಸಿಐ ಕಾರ್ಡುದಾರರು ಸಹ ಸೇರಿದ್ದಾರೆ.

ಭಾರತೀಯರನ್ನು ವಿದೇಶದಿಂದ ಮರಳಿ ಕರೆತರಲು ಸರ್ಕಾರ ಪ್ರಸ್ತುತ 'ವಂದೇ ಭಾರತ್ ಮಿಷನ್' ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್ 24ರಂದು 21 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಲಾಕ್​ಡೌನ್ ಘೋಷಿಸಿದ್ದರು. ಇದನ್ನು ಮೊದಲು ಮೇ 3ರವರೆಗೆ ಮುಂದುವರಿದು ಮೇ 17ರವರೆಗೆ ವಿಸ್ತರಿಸಲಾಯಿತು. ಲಾಕ್‌ಡೌನ್ ಅನ್ನು ಈಗ ಮೇ 31ರ ವರೆಗೆ ವಿಸ್ತರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.