ETV Bharat / bharat

ಜಲದಾಹದ ಬೀಭತ್ಸ: ಚೆನ್ನೈನಲ್ಲಿ 1 ಗ್ರಾಂ. ಚಿನ್ನಕ್ಕಿಂತ ನೀರಿನ ಬೆಲೆಯೇ ಅಧಿಕ..!

author img

By

Published : Jun 27, 2019, 4:58 PM IST

ಚೆನ್ನೈನ ಬಹುತೇಕ ನಾಗರಿಕರು ಕುಡಿವ ನೀರಿಗಾಗಿ ವಾಟರ್ ಟ್ಯಾಂಕರ್​, ಪಾಲಿಕೆ ಹಾಗೂ ಖಾಸಗಿ ಪೂರೈಕೆದಾರರನ್ನು ಅವಲಂಬಿಸಿದ್ದಾರೆ. ಒಂದು ಟ್ಯಾಂಕರ್​ ಕುಡಿವ ನೀರಿನ ಬೆಲೆ ಒಂದು ಗ್ರಾಂ. ಚಿನ್ನದ ದರಕ್ಕಿಂತ ಅಧಿಕವಾಗಿದೆ. ಇದು ನೀರಿನ ಅಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ತಮಿಳುನಾಡಿನಲ್ಲಿ ಕುಡಿವ ನೀರಿನ ಅಭಾವ ಯಥೇಚ್ಛವಾಗಿದ್ದು, ಅಲ್ಲಿನ ಜನರ ಬಾಯಲ್ಲಿ 'ಚಿನ್ನಕ್ಕಿಂತ ನೀರಿನ ದರವೇ ಅಧಿಕ' ಎಂಬ ಉಕ್ತಿ ಹರಿದಾಡುತ್ತಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು.

ಮೇಲ್ಮನೆಯ ಸಂಸತ್ ಅಧಿವೇಶನದ ಶೂನ್ಯ ವೇಳೆ ಸಂದರ್ಭದಲ್ಲಿ ಸಿಪಿಐ-(ಎಂ)ನ ಟಿ.ಕೆ. ರಂಗರಾಜನ್ ಮಾತನಾಡಿ, 'ದೇಶದಲ್ಲೇ ಚೆನ್ನೈ ಪ್ರಥಮ ತೇವಾಂಶರಹಿತ ನಗರ'ವಾಗಿದೆ. ಕೇಂದ್ರ ಜಲ ಆಯೋಗದ ವರದಿ ಪ್ರಕಾರ ಜೂನ್ 13ರವರೆಗೆ ಚೆನ್ನೈನಲ್ಲಿ ಶೇ 41ರಷ್ಟು ಮಳೆಯ ಅಭಾವ ಇರುವುದಾಗಿ ತಿಳಿಸಿದೆ ಎಂದರು.

ಚೆನ್ನೈನ ಬಹುತೇಕ ನಾಗರಿಕರು ಕುಡಿವ ನೀರಿಗಾಗಿ ವಾಟರ್ ಟ್ಯಾಂಕರ್​, ಪಾಲಿಕೆ ಹಾಗೂ ಖಾಸಗಿ ಪೂರೈಕೆದಾರರನ್ನು ಅವಲಂಬಿಸಿದ್ದಾರೆ. ಒಂದು ಟ್ಯಾಂಕರ್​ ಕುಡಿವ ನೀರಿನ ಬೆಲೆ ಒಂದು ಗ್ರಾಂ. ಚಿನ್ನದ ದರಕ್ಕಿಂತ ಅಧಿಕವಾಗಿದೆ. ಇದು ಸತ್ಯವಾದದ್ದು ಎಂದು ಹೇಳಿದರು.

ಐಟಿ ವಲಯದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿವೆ. ನೀರಿನ ಅಭಾವದಿಂದ ಬಹುತೇಕ ರೆಸ್ಟೊರೆಂಟ್​ಗಳು ತಾತ್ಕಾಲಿಕ ಸ್ಥಗಿತಗೊಂಡಿವೆ. ಚೈನ್ನ ನಗರವನ್ನು ಉಳಿಸುವುದು ನೆರೆಯ ರಾಜ್ಯಗಳ ಜವಾಬ್ದಾರಿ ಎಂದು ರಂಗರಾಜ್​ನ ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.