ETV Bharat / bharat

ತಾಯಿ, ಪತ್ನಿಯನ್ನು ಭೀಕರವಾಗಿ ಕೊಂದ ಮಾಜಿ ಕ್ರೀಡಾಪಟು... ಮಕ್ಕಳಿಂದಲೇ ತಂದೆಯ ಬಂಧನ!

author img

By

Published : Aug 26, 2020, 3:45 PM IST

ಹೆತ್ತ ತಾಯಿ ಮತ್ತು ಕಟ್ಟಿಕೊಂಡ ಹೆಂಡ್ತಿಯನ್ನು ಭಾರತದ ಮಾಜಿ ಕ್ರೀಡಾಪಟುವೋರ್ವ ಭೀಕರವಾಗಿ ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

Former Indian shot put medalist arrested in US, Former Indian shot put medalist arrested in US news, Former Indian shot put medalist killed his wife and mother, Iqbal Singh, Iqbal Singh news, Iqbal Singh latest news, ಅಮೆರಿಕಾದಲ್ಲಿ ಮಾಜಿ ಕ್ರೀಡಾಪಟು ಬಂಧನ, ಅಮೆರಿಕಾದಲ್ಲಿ ಮಾಜಿ ಕ್ರೀಡಾಪಟು ಬಂಧನ ಸುದ್ದಿ, ಇಕ್ಬಾಲ್​ ಸಿಂಗ್​, ಇಕ್ಬಾಲ್​ ಸಿಂಗ್​ ಸುದ್ದಿ, ತಾಯಿ ಮತ್ತು ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಮಾಜಿ ಕ್ರೀಡಾಪಟು,
ತಾಯಿ, ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಮಾಜಿ ಕ್ರೀಡಾಪಟು

ವಾಷಿಂಗ್ಟನ್​: ಹೆತ್ತ ತಾಯಿ ಮತ್ತು ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಭಾರತದ ಮಾಜಿ ಏಷ್ಯನ್ ಚಾಂಪಿಯನ್‌ಶಿಪ್​ನ ಕಂಚಿನ ಪದಕ ವಿಜೇತ ಇಕ್ಬಾಲ್ ಸಿಂಗ್​ರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

ಪೆನ್ಸಿಲ್ವೇನಿಯಾದ ಡೆಲವೇರ್ ಕೌಂಟಿ ನಿವಾಸಿ ಸಿಂಗ್ (62) ಭಾನುವಾರ ಪೊಲೀಸರ ಮುಂದೆ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಫಿಲಡೆಲ್ಫಿಯಾ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನ್ಯೂಟೌನ್​ ಟೌನ್​ಶಿಪ್​ನಲ್ಲಿ ವಾಸವಿರುವ ಮನೆಯಲ್ಲಿ ಸಿಂಗ್​ ತನ್ನ ತಾಯಿ ಮತ್ತು ಹೆಂಡ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಮಗನಿಗೆ ಮತ್ತು ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಮಕ್ಕಳು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಇಕ್ಬಾಲ್​ ಸಿಂಗ್ ಅವರ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಸಿಂಗ್ ಚಾಕು ಇರಿತದ ಗಾಯಗಳಿಂದ ಬಳಲುತ್ತಿದ್ದರು. ಮನೆಯಲ್ಲಿ ಇಬ್ಬರು ಮಹಿಳೆಯರ ಶವಗಳಿದ್ದವು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕುವೈತ್‌ನಲ್ಲಿ ನಡೆದ 1983ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಶಾಟ್-ಪುಟ್ ಆಟದಲ್ಲಿ ಸಿಂಗ್ ಕಂಚಿನ ಪದಕ ಗೆದ್ದಿದ್ದರು.

ಟ್ಯಾಕ್ಸಿಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸಿಂಗ್​ ತಮ್ಮ ತಾಯಿ ನಾಸಿಬ್‌ ಕೌರ್ ಮತ್ತು ಪತ್ನಿ ಜಸ್ಪಾಲ್ ಕೌರ್ ಜತೆ ವಾಸವಿದ್ದರು. ತನ್ನ ತಾಯಿ ಮತ್ತು ಹೆಂಡ್ತಿ ಕೊಲೆ ಮಾಡಿರುವುದಕ್ಕೆ ಬಗ್ಗೆ ನಿಖರ ಕಾರಣ ವಿಚಾರಣೆ ಬಳಿಕವೇ ತಿಳಿದು ಬರಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.