ETV Bharat / bharat

ಇಂದೋರ್​ನಲ್ಲಿ ಐವರಿಗೆ  ಕೊರೊನಾ ಸೋಂಕು.. ವಿದೇಶ ಪ್ರವಾಸ ಮಾಡದಿದ್ರೂ ಬಂದ ವೈರಸ್​

author img

By

Published : Mar 25, 2020, 12:47 PM IST

ಮಧ್ಯ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗತೊಡಗಿದೆ. ಇಂದು ಮತ್ತೆ ಐವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿದೆ.

Five in Indore test +ve
Representational pic

ಭೋಪಾಲ್: ಇಂದೋರ್​ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದ ಐವರಿಗೆ ಕೋವಿಡ್​-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಮಧ್ಯಪ್ರದೇಶದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ 14 ಕ್ಕೇರಿದಂತಾಗಿದೆ. ಸೋಂಕಿತರ ಪೈಕಿ​ ಯಾರೂ ವಿದೇಶ ಪ್ರವಾಸ ಮಾಡಿಲ್ಲ.

ಈ ಐವರಲ್ಲಿ ಓರ್ವ ಮಹಿಳೆ ನೆರೆಯ ಉಜ್ಜಯಿನಿಯವರಾಗಿದ್ದು, ಉಳಿದ ನಾಲ್ವರು ಇಂದೋರ್ ನಿವಾಸಿಗಳಾಗಿದ್ದಾರೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಅನುಸೂಯಾ ಗವಳಿ ತಿಳಿಸಿದ್ದಾರೆ.

ಈ ಮುನ್ನ ಜಬಲ್ಪುರ್​ನಲ್ಲಿ 6 ಜನರಿಗೆ ಹಾಗೂ ಭೋಪಾಲ್, ಗ್ವಾಲಿಯರ್, ಶಿವಪುರಿಯ ತಲಾ ಓರ್ವರಿಗೆ ಕೋವಿಡ್​ ಸೋಂಕು ದೃಢಪಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.