ETV Bharat / bharat

ಮುಂಬೈನ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ

author img

By

Published : Feb 2, 2021, 6:24 PM IST

ಮಹಾರಾಷ್ಟ್ರ ಗೋರೆಗಾಂವ್ ವೆಸ್ಟ್​ನ​ ಸ್ಟುಡಿಯೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಂಟು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Fire breaks out at a studio in Goregaon
ಮುಂಬೈನ ಸ್ಟುಡಿಯೋದಲ್ಲಿ ಭಾರೀ ಪ್ರಮಾಣದ ಬೆಂಕಿ

ಮುಂಬೈ: ಮಹಾರಾಷ್ಟ್ರದ ಗೋರೆಗಾಂವ್ ವೆಸ್ಟ್​ನ​ ಸ್ಟುಡಿಯೋದಲ್ಲಿ ಇದ್ದಕ್ಕಿದ್ದ ಹಾಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ಹೊಗೆ ಆವರಿಸಿದೆ. ಈ ಸ್ಟುಡಿಯೋ ನಗರದ ಇನೋರ್ಬಿಟ್ ಮಾಲ್ ಬಳಿ ಇದೆ.

ಮುಂಬೈನ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ

ಎಂಟು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿವೆ. ವರದಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಸ್ಟುಡಿಯೋ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ಓದಿ: ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ನಡುವೆ ಮುಂದುವರೆದ ಸಮರ.. ಓರ್ವನ ಶಿರಚ್ಛೇದ?

ಗೋರೆಗಾಂವ್ ಫಿಲ್ಮ್ ಸ್ಟುಡಿಯೋಗಳ ಕೇಂದ್ರವಾಗಿದೆ ಮತ್ತು ಪ್ರಸಿದ್ಧ ಫಿಲ್ಮ್​​ ಸಿಟಿ ಗೋರೆಗಾಂವ್​ನ ಪೂರ್ವದಲ್ಲಿದೆ. ಕಳೆದ ವಾರ ಮಹಾರಾಷ್ಟ್ರದ ಭಿವಾಂಡಿಯ ಎಂಐಡಿಸಿ ಪ್ರದೇಶದ ಗೋಡೌನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.