ETV Bharat / bharat

ನನ್ನ ಮಗಳಿಗೆ ಸಂದ ಜಯವಲ್ಲ, ಇದು ದೇಶದ ಹೆಣ್ಣುಮಕ್ಕಳ ಗೆಲುವು: ನಿರ್ಭಯಾ ಪೋಷಕರು

author img

By

Published : Jan 7, 2020, 8:14 PM IST

ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಬೆಳಿಗ್ಗೆ 7ಗಂಟೆಗೆ ಗಲ್ಲಿಗೇರಿಸುವ ಕುರಿತು ದೆಹಲಿ ನ್ಯಾಯಾಲಯ ಹೊರಡಿಸಿದ ಡೆತ್​ ವಾರೆಂಟನ್ನು ನಿರ್ಭಯಾ ಪೋಷಕರೂ ಸೇರಿದಂತೆ ದೇಶಾದ್ಯಂತ ಜನತೆ ಸ್ವಾಗತಿಸಿದ್ದಾರೆ.

Delhi court issues death warrant to 4 convicts in Nirbhaya case
ನಿರ್ಭಯಾ ಪೋಷಕರು

ನವದೆಹಲಿ: ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಬೆಳಿಗ್ಗೆ 7ಗಂಟೆಗೆ ಗಲ್ಲಿಗೇರಿಸುವ ಕುರಿತು ದೆಹಲಿ ನ್ಯಾಯಾಲಯ ನೀಡಿದ ಡೆತ್​ ವಾರೆಂಟ್​ ಅನ್ನು ನಿರ್ಭಯಾ ಪೋಷಕರೂ ಸೇರಿದಂತೆ ದೇಶದ ಜನತೆ ಸ್ವಾಗತಿಸಿದ್ದಾರೆ.

ನನ್ನ ಮಗಳಿಗೆ ಜಯ ಸಿಕ್ಕಿದೆ. ಇದು ನನ್ನ ಮಗಳಿಗಲ್ಲ, ದೇಶದ ಎಲ್ಲಾ ಹೆಣ್ಣು ಮಕ್ಕಳಿಗೆ ಸಂದ ಜಯ. ಅಪರಾಧಿಗಳಿಗೆ ಗಲ್ಲು ವಿಧಿಸುವ ಮೂಲಕ ದೇಶದ ಮಹಿಳೆಯರಿಗೆ ಶಕ್ತಿ ತುಂಬಿದಂತಾಗಿದೆ ಎಂದು ಹೇಳಿದರು.

ನಿರ್ಭಯಾ ಪೋಷಕರ ಹೇಳಿಕೆ

ಈ ದಿನಕ್ಕಾಗಿ ತುಂಬಾ ದಿನಗಳು ಕಾಯಬೇಕಾಯಿತು. ಕಾದದ್ದಕ್ಕೂ ಉತ್ತಮವಾದ ತೀರ್ಪು ಬಂದಿದೆ. ಜನತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆಯೂ ನಂಬಿಕೆ ಹೆಚ್ಚಾಗಿದೆ ಎಂದರು.

ಈ ತೀರ್ಪು ದೇಶದಲ್ಲಿ ಭಾರೀ ಮಟ್ಟದಲ್ಲಿ ಬದಲಾವಣೆ ತರಲಿದೆ. ಮುಂದೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮಯಾಗಲಿವೆ. ಜನ ಭಯಪಡುತ್ತಾರೆ ಎಂದು ನಿರ್ಭಯಾ ತಂದೆ ಬದ್ರಿನಾಥ್​ ಸಿಂಗ್ ಹೇಳಿದ್ದಾರೆ.

ವಿಳಂಬವಾದ್ರೂ ಸೂಕ್ತ ತೀರ್ಪು ಬಂತು. ಈ ತೀರ್ಪು ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಗೆ ಮತ್ತಷ್ಟು ಅಡಿಗಲ್ಲು ಹಾಕಿಕೊಟ್ಟಂತಾಗಿದೆ ಎಂದರು.

ಕೊನೆಗೂ ದೇಶದ ಮಗಳಿಗೆ ನ್ಯಾಯ ದಕ್ಕಿದೆ.

-ಗೌತಮ್​ ಗಂಭೀರ್​, ಮಾಜಿ ಕ್ರಿಕೆಟಿಗ ಹಾಗು ಸಂಸದ

ಈ ತೀರ್ಪು ಮಹಿಳಾ ಸಬಲೀಕರಣಕ್ಕೆ ಮತ್ತು ಅವರ ಬಲ ಹೆಚ್ಚಿಸುತ್ತದೆ.

-ಪ್ರಕಾಶ್​ ಜಾವಡೇಕರ್​, ಕೇಂದ್ರ ಸಚಿವ

Intro:Body:

translate 6


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.