ETV Bharat / bharat

ರಾಮಾಯಣ ಸೀರಿಯಲ್ ಮೂಲಕ ಮತ್ತೆ ಭಾರತೀಯರ ಮನದಲ್ಲಿ ನೆಲೆ ನಿಂತ ಡಿಡಿ

author img

By

Published : Apr 3, 2020, 12:11 AM IST

ಹಳೆಯ ಕ್ಲಾಸಿಕ್‌ ಧಾರವಾಹಿಗಳ ಮರು ಪ್ರಸಾರ ಮಾಡುವ ಮೂಲಕ ಜನರನ್ನು ತಮ್ಮ ಮನೆಯಲ್ಲಿ ಇರಿಸುವ ಉದ್ದೇಶವನ್ನು ದೂರದರ್ಶನ ಸಾಧಿಸಿದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ (ಬಾರ್ಕ್), ಇತ್ತೀಚಿನ ವರದಿಯ ಪ್ರಕಾರ ರಾಮಾಯಣದ ಮರು - ಪ್ರಸಾರವು 2015ರಿಂದೀಚೆಗೆ ಹಿಂದಿ ಜಿಇಸಿ ಪ್ರದರ್ಶನಕ್ಕೆ ಅತ್ಯಧಿಕ ರೇಟಿಂಗ್ ಗಳಿಸಿದೆ. ಇದರಿಂದಾಗಿ ಡಿಡಿ ಜನ ಮೆಚ್ಚಿಗೆಯ ಚಾನಲ್​ ಎಂಬುದು ಲಾಕ್​ಡೌನ್ ವೇಳೆಯಲ್ಲಿ ಸಾಬೀತಾಗಿದೆ.

Doordarshan
ದೂರದರ್ಶನ

ನವದೆಹಲಿ: ಭಾರತ ಟೆಲಿವಿಷನ್(ದೂರದರ್ಶನ) ಯುಗಕ್ಕೆ ಪದಾರ್ಪಣ ಮಾಡಿ 61 ವರ್ಷಗಳು ಕಳೆದಿವೆ. ದೂರದರ್ಶನ (ಡಿಡಿ), ರಾಮಾಯಣ ಮತ್ತು ಮಹಾಭಾರತ ದಂತಹ ಐತಿಹಾಸಿಕ ಧಾರವಾಹಿ ಪ್ರಸಾರದ ಮೂಲಕ ಭಾರತೀಯರ ಮನದಲ್ಲಿ ನೆಲೆ ನಿಂತಿತ್ತು. ಖಾಸಗಿ ಚಾನೆಲ್​​ಗಳ ಭರಾಟೆ ಆಗುತ್ತಿದ್ದಂತೆ ಡಿಡಿ ತನ್ನ ಲಯ ಕಳೆದುಕೊಂಡು ನೋಡುಗರಿಂದ ಬಹುದೂರ ಸಾಗಿತ್ತು. ಈಗ ಮತ್ತೆ ತನ್ನ ಹಳೆಯ ಲಯಕ್ಕೆ ಮರಳಿದೆ.

ದೇಶದ ಪ್ರಸ್ತುತ ದಿನಗಳಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳನ್ನು ಕಾಣುತ್ತಿದ್ದೇವೆ. ಒಂದ ಕಡೆ ಇಡೀ ಭಾರತವೇ ಕೊರೊನಾ ವಿರುದ್ಧ ಟೊಂಕಕಟ್ಟಿ ಯುದ್ಧೋಪಾಧಿಯಲ್ಲಿ ನಿರತವಾಗಿದ್ದರೇ ಮತ್ತೊಂದು ಭಾರತ ಮನೆಯಲ್ಲಿ ಕುಳಿತು ಐತಿಹಾಸಿಕ ಧಾರವಾಹಿಗಳನ್ನು ನೋಡುತ್ತಿದೆ. ಲಾಕ್​ಡೌನ್ ಸಮಯದಲ್ಲಿ ಡಿಡಿ ನ್ಯಾಷನಲ್​ನಲ್ಲಿ ಹಳೆಯ ಐಕಾನಿಕ್ ಧಾರಾವಾಹಿಗಳನ್ನು ಮರು ಪ್ರಸಾರ ಆಗುತ್ತಿರುವುದರಿಂದ ದೂರದರ್ಶನವು ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಆಗಿ ಮತ್ತೆ ಭಾರತೀಯರ ಹೃದಯದಲ್ಲಿ ತನ್ನ ಸ್ಥಾನ ಬಲಪಡಿಸಿಕೊಂಡಿದೆ.

ಹಳೆಯ ಕ್ಲಾಸಿಕ್‌ ಧಾರವಾಹಿಗಳ ಮರು ಪ್ರಸಾರ ಮಾಡುವ ಮೂಲಕ ಜನರನ್ನು ತಮ್ಮ ಮನೆಯಲ್ಲಿ ಇರಿಸುವ ಉದ್ದೇಶವನ್ನು ದೂರದರ್ಶನ ಸಾಧಿಸಿದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ (ಬಾರ್ಕ್), ಇತ್ತೀಚಿನ ವರದಿಯ ಪ್ರಕಾರ ರಾಮಾಯಣದ ಮರು - ಪ್ರಸಾರವು 2015ರಿಂದೀಚೆಗೆ ಹಿಂದಿ ಜಿಇಸಿ ಪ್ರದರ್ಶನಕ್ಕೆ ಅತ್ಯಧಿಕ ರೇಟಿಂಗ್ ಗಳಿಸಿದೆ. ಇದರಿಂದಾಗಿ ಡಿಡಿ ಜನ ಮೆಚ್ಚಿಗೆಯ ಚಾನಲ್​ ಎಂಬುತು ಲಾಕ್​ಡೌನ್ ವೇಳೆಯಲ್ಲಿ ಸಾಬೀತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.