ETV Bharat / bharat

ಪೊಲೀಸ್​ ಠಾಣೆಯಲ್ಲಿ ಮೃತಪಟ್ಟ ದಲಿತ ಯುವಕ: ಲಾಕ್​ ಅಪ್​ ಡೆತ್​ ಆರೋಪ

author img

By

Published : Aug 31, 2020, 5:05 PM IST

ದಲಿತ ಯುವಕನೊಬ್ಬ ಪೊಲೀಸ್​ ಠಾಣೆಯಲ್ಲಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ನಡೆದಿದೆ. ಘಟನೆ ಖಂಡಿಸಿ ಮೃತನ ಕುಟುಂಬ ಸದಸ್ಯರು ಹಾಗೂ ಸ್ಥಳೀಯ ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.

Dalit boy dies in police custody in Rae Bareli
ಸಾಂದರ್ಭಿಕ ಚಿತ್ರ

ರಾಯಬರೇಲಿ: ಕಳ್ಳತನ ಆರೋಪದಡಿ ಬಂಧಿಸಲಾಗಿದ್ದ 19 ವರ್ಷದ ದಲಿತ ಯುವಕನೊಬ್ಬ ಪೊಲೀಸ್​ ಠಾಣೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಲಾಲ್​ಗಂಜ್​ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು ಮೃತನ ಸಂಬಂಧಿಕರು ಇದು ಲಾಕ್​ ಅಪ್​ ಡೆತ್​ ಎಂದು ಆರೋಪಿಸಿದ್ದಾರೆ.

ಪೊಲೀಸರು ಬಂಧಿಸಿ ಠಾಣೆಯಲ್ಲಿ ಯುವಕನಿಗೆ ಚಿತ್ರಹಿಂಸೆ ನೀಡಿದ್ದಾರೆ. ನೋವು ತಾಳಲಾರದೇ ಯುವಕರ ಮೃತಪಟ್ಟಿರುವುದಾಗಿ ಆರೋಪಿಸಿ ಪೊಲೀಸರ ವಿರುದ್ಧ ಮೃತನ ಕುಟುಂಬ ಸದಸ್ಯರು ಹಾಗೂ ಸ್ಥಳೀಯ ದಲಿತ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತವು ಘಟನೆಯ ಗಂಭೀರತೆ ಅರಿತು ಮ್ಯಾಜಿಸ್ಟ್ರೇಲ್​ ತನಿಖೆಗೆ ಆದೇಶಿಸಿದೆ. ಠಾಣೆಯ ಎಸ್​ಹೆಚ್​ಒ ಅವರನ್ನು ಇದೀಗ ಅಮಾನತುಗೊಳಿಸಲಾಗಿದೆ.

ಬೆಹ್ತಾ ಕಲಾನ್ ಗ್ರಾಮದ ನಿವಾಸಿಗರಾದ ಮೋಹಿತ್ ಮತ್ತು ಆತನ ಸಹೋದರ ಸೋನು ಅವರನ್ನು ಶುಕ್ರವಾರ ವಾಹನ ಕಳ್ಳತನದ ಆರೋಪದಡಿ ಲಾಲ್​ಗಂಜ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು. ಕೆಲವು ಗಂಟೆಗಳ ನಂತರ ಸೋನುನನ್ನು ಬಿಡುಗಡೆ ಮಾಡಿದ ಕಳಿಸಿದ ಪೊಲೀಸರು ಮೋಹಿತ್​ನನ್ನು​​​ ಮಾತ್ರ ಠಾಣೆಯಲ್ಲಿಯೇ ಇಟ್ಟುಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಇದರಿಂದ ಆತನ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಮೋಹಿತ್​ನನ್ನು​​​ ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಮೃತ ಯುವಕನ ಪೋಷಕರು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಇಬ್ಬರು ಸಬ್​ಇನ್ಸ್​ಪೆಕ್ಟರ್​ಗಳ ಮೇಲೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್​ಪಿ ಸ್ವಾಪ್ನಿಲ್​ ಮಂಗೈನ್​ ಹೇಳಿದ್ದಾರೆ. ಅಲ್ಲದೆ ಆರೋಪಿಗಳನ್ನು ಪೊಲೀಸ್ ಠಾಣೆಯಲ್ಲಿ 24 ಗಂಟೆಗಳ ಮೀರಿ ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದಕ್ಕೆ ಅಮಾನತು ಮಾಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.