ETV Bharat / bharat

ಅಕ್ರಮ ಚಿನ್ನ ಸಾಗಾಟ : 94 ಲಕ್ಷ ರೂ. ಮೌಲ್ಯದ ಚಿನ್ನ ವಶ

author img

By

Published : Dec 27, 2020, 6:36 AM IST

ಕಳ್ಳಸಾಗಣೆ ಮಾಡಿದ ಸರಕುಗಳನ್ನು ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ..

Customs seizes gold worth lakhs of Rupees from woman
ಅಕ್ರಮ ಚಿನ್ನ ಸಾಗಾಟ

ಹೈದರಾಬಾದ್ : ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಶನಿವಾರ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯಿಂದ ಸುಮಾರು 94 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಎರಡು ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ತನ್ನ ಬ್ಯಾಗೇಜ್​ನಲ್ಲಿ ಅಕ್ರಮವಾಗಿ ಮಹಿಳೆ ಆಭರಣಗಳು ಮತ್ತು ಚಿನ್ನದ ಗಟ್ಟಿಗಳನ್ನ ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ : ಕದ್ದ ಬೈಕ್‌ನಲ್ಲಿ ಮಹಿಳೆಯರ ಸರ ಎಗರಿಸಿ ಮೂಲ ಜಾಗದಲ್ಲೇ ನಿಲ್ಲಿಸುತ್ತಿದ್ದ ಚೋರ ಸಿಕ್ಕಿಬಿದ್ದ!

ಕಳ್ಳಸಾಗಣೆ ಮಾಡಿದ ಸರಕುಗಳನ್ನು ಕಸ್ಟಮ್ಸ್ ಕಾಯ್ದೆಯಡಿ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.