ETV Bharat / bharat

10 ರೂ.ಗೆ ಊಟ, 'ಒಂದು ರೂಪಾಯಿ ಕ್ಲಿನಿಕ್​​'... 'ಮಹಾ' ಸರ್ಕಾರದ ಸಿಎಂಪಿ ಯೋಜನೆಗಳಿವು!

author img

By

Published : Nov 28, 2019, 8:57 PM IST

ಅತ್ತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ‘ಮಹಾ ವಿಕಾಸ ಅಘಾಡಿ’ ನಾಯಕರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ್ದಾರೆ.

Common Minimum Programme
'ಮಹಾ' ಸರ್ಕಾರದ ಸಿಎಂಪಿ ಯೋಜನೆಗಳಿವು

ಮುಂಬೈ: 'ಸಾಮಾನ್ಯ ಕನಿಷ್ಠ ಕಾರ್ಯಕ್ರಮ' (CMP-Common Minimum Programme), ಇದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಪಕ್ಷಗಳ ಮೈತ್ರಿಕೂಟವಾದ ‘ಮಹಾ ವಿಕಾಸ ಅಘಾಡಿ’ ಸರ್ಕಾರ ಬಿಡುಗಡೆ ಮಾಡಿರುವ ಮಹತ್ತರ ಕಾರ್ಯಕ್ರಮ.

ಅತ್ತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ‘ಮಹಾ ವಿಕಾಸ ಅಘಾಡಿ’ ನಾಯಕರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ್ದಾರೆ. ಶಿವಸೇನೆ ನಾಯಕ ಶಿಂಧೆ, ಎನ್‌ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಜಯಂತ್ ಪಾಟೀಲ್ ಮುಂದಿನ ಐದು ವರ್ಷಗಳ ಸರ್ಕಾರದ ಯೋಜನೆಗಳನ್ನು ವಿವರಿಸಿದರು.

Common Minimum Programme
‘ಮಹಾ ವಿಕಾಸ ಅಘಾಡಿ’ ನಾಯಕರ ಪತ್ರಿಕಾಗೋಷ್ಠಿ

ಮುಖ್ಯವಾಗಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಜಾತ್ಯಾತೀತತೆ ಹಾಗೂ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ ಮೈತ್ರಿ ನಾಯಕರು, ವಿಶೇಷವಾಗಿ ಮಹಾರಾಷ್ಟ್ರ ರಾಜ್ಯದ ಸಾಮಾನ್ಯ ಜನರಿಗೆ 10 ರೂ.ಗೆ ಆಹಾರವನ್ನು ಒದಗಿಸುವುದಾಗಿ ಮತ್ತು ಎಲ್ಲಾ ರೋಗಿಗಳಿಗೆ ಅನುಕೂಲವಾಗುವಂತೆ 'ತಾಲೂಕು' ಮಟ್ಟದಲ್ಲಿ 'ಒಂದು ರೂಪಾಯಿ ಕ್ಲಿನಿಕ್' ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ. ನಿರುದ್ಯೋಗ, ಆರೋಗ್ಯ, ಸಾಮಾಜಿಕ ನ್ಯಾಯ, ಶಿಕ್ಷಣ, ನಗರಾಭಿವೃದ್ಧಿ, ಪ್ರವಾಸೋದ್ಯಮ ಸಂಬಂಧಿಸಿದ ಸಮಸ್ಯೆಗಳಿಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ.

‘ಮಹಾ ವಿಕಾಸ ಅಘಾಡಿ’ಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಈ ಕೆಳಕಂಡಂತಿವೆ:

ಆರೋಗ್ಯ:

  • ಸಾಮಾನ್ಯ ಜನರಿಗೆ 10 ರೂ.ಗೆ ಆಹಾರ
  • ತಾಲೂಕು ಮಟ್ಟದಲ್ಲಿ 'ಒಂದು ರೂಪಾಯಿ ಕ್ಲಿನಿಕ್' ಆರಂಭ
  • ಆಹಾರ ಮತ್ತು ಔಷಧ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ
  • ಹಂತಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪನೆ
  • ರಾಜ್ಯದ ಪ್ರತಿ ನಾಗರಿಕನಿಗೂ ಆರೋಗ್ಯ ವಿಮಾ ಸೌಲಭ್ಯ

ರೈತರಿಗೆ ತುರ್ತು ಪರಿಹಾರ:

  • ಅಕಾಲಿಕ ಮಳೆ ಮತ್ತು ಪ್ರವಾಹದಿಂದ ಬಳಲುತ್ತಿರುವ ರೈತರಿಗೆ ತಕ್ಷಣದ ನೆರವು, ತುರ್ತು ಸಾಲ ಮನ್ನಾ
  • ಬೆಳೆಗಳನ್ನು ಕಳೆದುಕೊಂಡ ರೈತರಿಗೆ ತುರ್ತು ಪರಿಹಾರ ನೀಡಲು 'ಬೆಳೆ ವಿಮಾ ಯೋಜನೆ'ಯ ಪರಿಷ್ಕರಣೆ
  • ಬರಪೀಡಿತ ಪ್ರದೇಶಗಳಿಗೆ ಸುಸ್ಥಿರ ನೀರು ಸರಬರಾಜು ವ್ಯವಸ್ಥೆಗೆ ಕ್ರಮ

ಉದ್ಯೋಗ:

  • ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಾರಂಭ
  • ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಫೆಲೋಶಿಪ್
  • ಸ್ಥಳೀಯ ಯುವಕರಿಗೆ ಉದ್ಯೋಗಗಳಲ್ಲಿ ಶೇ. 80ರಷ್ಟು ಮೀಸಲಾತಿ ಖಾತ್ರಿಪಡಿಸಿಕೊಳ್ಳಲು ಕಾನೂನು ರಚನೆ

ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ:

  • ಆರ್ಥಿಕವಾಗಿ ದುರ್ಬಲ ವರ್ಗದ ಬಾಲಕಿಯರಿಗೆ ಉಚಿತ ಶಿಕ್ಷಣ
  • ನಗರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ವಸತಿ ನಿಲಯಗಳ ನಿರ್ಮಾಣ
  • ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ

ಶಿಕ್ಷಣ:

  • ಕೃಷಿ ಕಾರ್ಮಿಕರ ಮಕ್ಕಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೂನ್ಯ ಶೇಕಡಾ ಬಡ್ಡಿ ದರದಲ್ಲಿ (0%) ಶಿಕ್ಷಣ ಸಾಲ

ನಗರಾಭಿವೃದ್ಧಿ:

  • ನಗರ ಪ್ರದೇಶಗಳಲ್ಲಿ ರಸ್ತೆಗಳನ್ನು ಸುಧಾರಿಸಲು ಮುಖ್ಯಮಂತ್ರಿ ಗ್ರಾಮ ಸಡಕ್​​ ಯೋಜನೆಯ ಮಾದರಿಯ ಯೋಜನೆ ಜಾರಿ
  • ರಸ್ತೆ ಗುಣಮಟ್ಟವನ್ನು ಸುಧಾರಿಸಲು ನಗರ ಪಂಚಾಯಿತಿಗಳು, ಪುರಸಭೆ ಮತ್ತು ನಗರಸಭೆಗಳಿಗೆ ಪ್ರತ್ಯೇಕ ಹಣಕಾಸು ನಿಬಂಧನೆ
Intro:Body:

national


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.