ETV Bharat / bharat

'ಮೋದಿ ಪ್ಲಾನಿಂಗ್​ ಫಾರ್ಮರ್​ ಜಿನೊಸೈಡ್' ಹ್ಯಾಷ್​ಟ್ಯಾಗ್​ ಟ್ರೆಂಡಿಂಗ್​: ಟ್ವಿಟರ್​ಗೆ ನೋಟಿಸ್ ನೀಡಿದ ಕೇಂದ್ರ !

author img

By

Published : Feb 3, 2021, 4:14 PM IST

ರೈತರ ನರಮೇಧಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಖಾತೆಗಳನ್ನು ಕೂಡಲೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ನೋಟಿಸ್ ನೀಡಿ ಆದೇಶಿದೆ.

Twitter may face penal action over 'Modi Planning Farmer Genocide' tweets
'ಮೋದಿ ಪ್ಲಾನಿಂಗ್​ ಫಾರ್ಮರ್​ ಜಿನೊಸೈಡ್' ಹ್ಯಾಷ್​ಟ್ಯಾಗ್​ ಟ್ರೆಂಡಿಂಗ್

ನವದೆಹಲಿ: 'ರೈತ ನರಮೇಧ'ಕ್ಕೆ ಸಂಬಂಧಿಸಿದ ವಿಷಯ ಮತ್ತು ಖಾತೆಗಳನ್ನು ರದ್ದುಪಡಿಸುವಂತೆ ಟ್ವಿಟರ್‌ಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

(ಮೋದಿ ಪ್ಲಾನಿಂಗ್​ ಫಾರ್ಮರ್​ ಜಿನೊಸೈಡ್) ಹ್ಯಾಶ್‌ಟ್ಯಾಗ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಭಾವೋದ್ರೇಕ ಮತ್ತು ದ್ವೇಷವನ್ನು ಉಂಟುಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಹ್ಯಾಶ್‌ಟ್ಯಾಗ್ ಸಹ ತಪ್ಪಾಗಿದೆ ಎಂದು ನೋಟಿಸ್​ ನೀಡಿ ಆದೇಶಿಸಿದೆ.

ಟ್ವೀಟರ್​ ಮಧ್ಯವರ್ತಿಯಾಗಿದ್ದು, ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ.

ಸಾರ್ವಜನಿಕ ಸುವ್ಯವಸ್ಥೆಯನ್ನು ಹಳಿ ತಪ್ಪಿಸುವ ಮೂಲಕ ಅಧಿಕಾರಿಗಳ ತೃಪ್ತಿಯ ಬಗ್ಗೆ ಟ್ವಿಟರ್ ಮೇಲ್ಮನವಿ ಪ್ರಾಧಿಕಾರವಾಗಿ ಕೆಲಸಮಾಡಲು ಸಾಧ್ಯವಿಲ್ಲ. ಇದು ಮಧ್ಯವರ್ತಿ ಮಾತ್ರ. ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ ಟ್ವಿಟರ್ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಆದೇಶಿಸಿದ್ದಾಗಿ ಮತ್ತೊಂದು ಮೂಲ ತಿಳಿಸಿದೆ.

ಓದಿ: ಹರಿಯಾಣದಲ್ಲಿ ರೈತರ ಮಹಾಪಂಚಾಯತ್.. ಐದು ಪ್ರಸ್ತಾಪಗಳಿಗೆ ಅಂಗೀಕಾರ..

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಾಜಿಪುರದಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ಹೋರಾಟಗಾರರು ಹಾಗೂ ಪೊಲೀಸರ ನಡುವೆ ನಡೆದ ಗಲಭೆಯ ನಂತರ, ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ('ಮೋದಿ ಪ್ಲಾನಿಂಗ್​ ಫಾರ್ಮರ್​ ಜಿನೊಸೈಡ್' ) ಮೋದಿ ಯೋಜನಾ ರೈತ ಹತ್ಯಾಕಾಂಡ ಎಂಬ ಹ್ಯಾಷ್​ ಟ್ಯಾಗ್​ ಅಡಿ ಬರೆದ ಟ್ವೀಟ್​ ಟ್ರೆಂಡಿಂಗ್ ಆಗಿತ್ತು. ಇದಾದ ನಂತರ ದೇಶಾದ್ಯಂತ ಸಾಕಷ್ಟು ಪರ-ವಿರೋದ ಚರ್ಚೆಗಳು ನಡೆದಿದ್ದವು. ಇದೀಗ ಕೇಂದ್ರ ಸರ್ಕಾರ ಟ್ವಿಟರ್‌ಗೆ ನೋಟಿಸ್ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.