ETV Bharat / bharat

ಮನೆಯೊಡತಿಯ 1.5 ಲಕ್ಷ ರೂ ಬೆಲೆಯ ಮಂಗಳಸೂತ್ರವನ್ನೇ ನುಂಗಿದ ಗೂಳಿ...! ಮುಂದೇನಾಯ್ತು...?

author img

By

Published : Sep 16, 2019, 10:39 AM IST

Updated : Sep 16, 2019, 12:41 PM IST

ಮನೆಯೊಡತಿಯ ಮಂಗಳಸೂತ್ರವನ್ನೇ ಗೂಳಿ ನುಂಗಿರುವ ಅಚ್ಚರಿಯ ಘಟನೆ ಮಹಾರಾಷ್ಟ್ರದ ಅಹ್ಮದ್​ನಗರದ ರೈಟೆ ವಾಗ್ಪುರ್​ ಗ್ರಾಮದಲ್ಲಿ ನಡೆದಿದೆ.

ಮನೆಯೊಡತಿಯ 1.5 ಲಕ್ಷರೂ ಬೆಲೆಯ ಮಂಗಳಸೂತ್ರವನ್ನೇ ನುಂಗಿದ ಗೂಳಿ...!

ಅಹ್ಮದ್​ನಗರ/ರೈಟೆ ವಾಗ್ಪುರ್​ : ಸುಮಾರು 1.5 ಲಕ್ಷರೂ ಬೆಲೆಯ ಮಂಗಳಸೂತ್ರವನ್ನು ಗೂಳಿಯೊಂದು ನುಂಗಿರುವ ಘಟನೆ ಮಹಾರಾಷ್ಟ್ರದ ಅಹ್ಮದ್​ನಗರದ ರೈಟೆ ವಾಗ್ಪುರ್​ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದಲ್ಲಿ ಆಗಸ್ಟ್​ 30 ರಂದು ಬೈಲ್​ ಪೊಲ ಅಂದರೆ ಗೂಳಿ ಹಬ್ಬವನ್ನು ಆಚರಿಸಲಾಯ್ತು .ಇದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಗಳ ಪ್ರತೀಕವಾಗಿ ಆಚರಿಸುವ ಹಬ್ಬ. ಗೂಳಿಗಳನ್ನು ದೇವರಿಗೆ ಸಮಾನ ಎಂದು ಭಾವಿಸಿ ಪೂಜಿಸಲಾಗುತ್ತದೆ. ಈ ಹಬ್ಬದಂದು ಮನೆಯಲ್ಲಿ ಸಾಕಿರುವ ಗೂಳಿಗಳಿಗೆ ಪೂಜಿಸಿ, ಅದರ ಹಣೆಯಿಂದ ಆಶೀರ್ವಾದ ಪಡೆಯುವುದು ಸಂಪ್ರದಾಯ. ಹೀಗಾಗಿ ಮನೆಯೊಡತಿ ಗೂಳಿಗೆ ಪೂಜಿಸಿ ಮಾಂಗಲ್ಯವನ್ನು ಅದರ ಹಣೆಗೆ ಮುಟ್ಟಿಸಿ ಆಶೀರ್ವಾದ ಪಡೆದು, ಈ ಸರವನ್ನು ಗೂಳಿಗೆ ನೀಡುವ ಆಹಾರದ ತಟ್ಟೆಯಲ್ಲಿಯೇ ಇಟ್ಟಿದ್ದಾರೆ. ಈ ವೇಳೆ ಕರೆಂಟ್​ ಹೋಗಿದ್ದು, ದೀಪ ತರಲು ಮನೆಯೊಡತಿ ಒಳಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಆಹಾರವನ್ನೆಲ್ಲಾ ಗೂಳಿ ತಿಂದಿದೆ. ಇದೇ ತಟ್ಟೆಯಲ್ಲಿ ಆಕೆಯ ಮಾಂಗಲ್ಯ ಸೂತ್ರವಿದ್ದು, ಅದು ಕೂಡ ಗೂಳಿ ಹೊಟ್ಟೆ ಸೇರಿದೆ. ಇದರಿಂದ ಕಂಗಾಲದ ಮನೆಯೊಡತಿ ತಕ್ಷಣಕ್ಕೆ ಪತಿಗೆ ವಿಷಯ ಮುಟ್ಟಿಸಿದ್ದಾರೆ.

ಮನೆಯೊಡತಿಯ 1.5 ಲಕ್ಷರೂ ಬೆಲೆಯ ಮಂಗಳಸೂತ್ರವನ್ನೇ ನುಂಗಿದ ಗೂಳಿ...!

ಗೂಳಿ ಬೆಳಗ್ಗೆ ಸಗಣಿ ಹಾಕುವ ವೇಳೆ ಮಂಗಳಸೂತ್ರ ಕೂಡ ಹೊರಬರಬಹುದು ಎಂದು ದಂಪತಿಗಳಿಬ್ಬರು ಕಾದಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಕಡೆಗೆ ಪಶು ವೈದ್ಯರ ಬಳಿ ಹೋದಾಗ ಗೂಳಿ ಹೊಟ್ಟೆಯಲ್ಲಿ ಚಿನ್ನದ ತಾಳಿ ಸರವಿರುವುದು ಪತ್ತೆಯಾಗಿದೆ. ಬಳಿಕ ವೈದ್ಯರು ಆಪರೇಷನ್​ ಮಾಡಿ ಅದನ್ನು ಹೊರ ತೆಗೆದಿದ್ದಾರೆ.

Intro:mh_ahm_shirdi_bull on Gold_16_visuals_mh10010Body:mh_ahm_shirdi_bull on Gold_16_visuals_mh10010Conclusion:mh_ahm_shirdi_bull on Gold_16_visuals_mh10010
Last Updated : Sep 16, 2019, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.