ETV Bharat / bharat

ಮಧ್ಯಪ್ರದೇಶದಲ್ಲಿ ಮುಂದುವರಿದ ರಾಜಕೀಯ ಹೈಡ್ರಾಮಾ : ಗುರುಗ್ರಾಮದ ಹೋಟೆಲ್​ನಲ್ಲಿರುವ ಬಿಜೆಪಿ ಶಾಸಕರು

author img

By

Published : Mar 11, 2020, 9:48 AM IST

ಮಧ್ಯಪ್ರದೇಶದ ಬಿಜೆಪಿ ಶಾಸಕರು ಗುರುಗ್ರಾಮದಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್​ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

BJP MLA has stayed at ITC Grand Bharat Hotel in Gurugram ಗುರುಗ್ರಾಮದ ಹೋಟೆಲ್​ನಲ್ಲಿರುವ ಬಿಜೆಪಿ ಶಾಸಕರು
ಗುರುಗ್ರಾಮದ ಹೋಟೆಲ್​ನಲ್ಲಿರುವ ಬಿಜೆಪಿ ಶಾಸಕರು

ಭೋಪಾಲ : ಮಧ್ಯಪ್ರದೇಶದ ಬಿಜೆಪಿ ಶಾಸಕರು ಗುರುಗ್ರಾಮದಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್​ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮುಂದುವರೆದಿದ್ದು, ಸಿಂಧಿಯಾ ಕುಟುಂಬದ ಉತ್ತರಾಧಿಕಾರಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ 22 ಕಾಂಗ್ರೆಸ್​ ಶಾಸಕರು ತಮ್ಮ ಸ್ಥಾನ ತೊರೆದಿದ್ದಾರೆ. ಇದರಿಂದಾಗಿ ಮಧ್ಯಪ್ರದೇಶದ ಕಮಲ್ ನಾಥ್ ಸರ್ಕಾರವು ಸದಸ್ಯರ ಬಲವಿಲ್ಲದೇ ಉರುಳುವ ಸ್ಥಿತಿಗೆ ತಲುಪಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ಮಧ್ಯಾಹ್ನ ಜ್ಯೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

​ಓದಿ :ಸಿಂಧಿಯಾ ರಾಜೀನಾಮೆಯಿಂದಾಗಿ ಕಾಂಗ್ರೆಸ್​ನ ಜ್ಯೋತಿ ಆರಿಹೋಯಿತೇ?

ಗುರುಗ್ರಾಮ್ ಹೋಟೆಲ್‌ನಲ್ಲಿ ತಂಗಿದ್ದ ಬಿಜೆಪಿ ಮುಖಂಡರು :

ಮಧ್ಯಪ್ರದೇಶದ ಬಿಜೆಪಿ ಶಾಸಕರು ಗುರುಗ್ರಾಮ್​ನ ಐಟಿಸಿ ಗ್ರ್ಯಾಂಡ್ ಭಾರತ್ ಹೋಟೆಲ್​ನಲ್ಲಿ ತಂಗಿದ್ದಾರೆ. ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಅವರಿಗೆ ಆತಿಥ್ಯ ವಹಿಸಲು ಮಧ್ಯಪ್ರದೇಶದ ಬಿಜೆಪಿ ಶಾಸಕರು ಗುರುಗ್ರಾಮ್ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಿಂದ ಭೋಪಾಲ್​ವರೆಗೆ ಸರಣಿ ಸಭೆಗಳು : ದೆಹಲಿಯಿಂದ ಭೋಪಾಲ್ ವರೆಗೆ ಸರಣಿ ಸಭೆಗಳು ನಡೆಯುತ್ತಿದ್ದು, ಈಗ ಸಿಎಂ ಕಮಲ್ ನಾಥ್ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಹಲವಾರು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇಬ್ಬರು ಶಾಸಕರ ರಾಜೀನಾಮೆ ಕಮಲ್ ನಾಥ್ ಸರ್ಕಾರದ ಮೇಲೆ ಪರಿಣಾಮ ಬೀರಿದೆ. ಆದರೂ ಸಿಎಂ ಕಮಲ್ ನಾಥ್ ಸರ್ಕಾರ ಮಾತ್ರ ತನಗೆ ಬಹುಮತ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಉಳಿದ ಕಾಂಗ್ರೆಸ್​ ಶಾಸಕರನ್ನು ಕೈ ನಾಯಕರು ಈಗ ಜೈಪುರಕ್ಕೆ ಕರೆ ತರಲಾಗುತ್ತಿದೆ.

ಓದಿ : ಪತನದ ಹಾದಿಯಲ್ಲಿ ಮಧ್ಯಪ್ರದೇಶ ಸರ್ಕಾರ; ಮಾರ್ಚ್​ 12ಕ್ಕೆ ಜ್ಯೋತಿರಾದಿತ್ಯ ಸಿಂದಿಯಾ ಬಿಜೆಪಿ ಸೇರ್ಪಡೆ?

ಕಮಲ್​ ನಾಥ್​ ಸರ್ಕಾರದ ಬಲಾಬಲ :

22 ಶಾಸಕರ ರಾಜೀನಾಮೆ ಬಳಿಕ ಕಾಂಗ್ರೆಸ್ ಸದಸ್ಯ ಬಲದ ಸಂಖ್ಯೆ 114 ರಿಂದ 92 ಕ್ಕೆ ಇಳಿದಿತ್ತು. ಆದರೆ, ಮಂಗಳವಾರ ಸಂಜೆ ಕಮಲ್ ನಾಥ್ ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 92 ರ ಬದಲು 88ಕ್ಕೆ ತಲುಪಿತ್ತು. ಇದುವರೆಗೂ ಎಸ್‌ಪಿ-ಬಿಎಸ್‌ಪಿ ಮತ್ತು ಸ್ವತಂತ್ರರ ಸಹಾಯದಿಂದ ಕಾಂಗ್ರೆಸ್ 99 ಶಾಸಕರ ಬೆಂಬಲವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಯ ಬಲ 107 ಇದೆ.

  • ಒಟ್ಟು : 206
  • ಬಹುಮತಕ್ಕೆ ಬೇಕಾದ ಸಂಖ್ಯೆ: 104
  • ಕಾಂಗ್ರೆಸ್ (ಮೈತ್ರಿ) : 99
  • ಬಿಜೆಪಿ : 107
  • ರಾಜೀನಾಮೆ: 22
ETV Bharat Logo

Copyright © 2024 Ushodaya Enterprises Pvt. Ltd., All Rights Reserved.