ETV Bharat / bharat

ತಿರುಮಲ ದೇವಸ್ಥಾನದಲ್ಲಿ ವಿದ್ಯುತ್, ನೀರಿನ ಅಭಾವ: ತಂತ್ರಜ್ಞಾನದ ಮೊರೆ ಹೋದ ಆಡಳಿತ ಮಂಡಳಿ

author img

By

Published : Feb 16, 2020, 5:46 PM IST

Updated : Feb 16, 2020, 6:24 PM IST

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ದ್ವಾರಕ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯು, ನೀರು ಮತ್ತು ವಿದ್ಯುತ್​​​ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ತಂತ್ರಜ್ಞಾನದ ಮೊರೆ ಹೋಗಿದೆ.

manage power, water supply
ತಿರುಮಲ ದೇವಸ್ಥಾನದಲ್ಲಿ ವಿದ್ಯುತ್ ಮತ್ತು ನೀರಿನ ಅಭಾವ

ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ): ಪ್ರಸಿದ್ಧ ದೇವಾಲಯಗಳಲ್ಲಿ ವಿದ್ಯುತ್ ಮತ್ತು ನೀರಿನ ಸರಬರಾಜಿನಲ್ಲಿ ಅಡೆತಡೆಗಳು ಉಂಟಾಗುತ್ತಿರುವುದರಿಂದ, ಪಶ್ಚಿಮ ಗೋದಾವರಿ ಜಿಲ್ಲೆಯ ದ್ವಾರಕ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯು ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ತಂತ್ರಜ್ಞಾನದ ಮೊರೆ ಹೋಗಿದೆ.

ಈ ದೇವಸ್ಥಾನಕ್ಕೆ ಲಕ್ಷಗಟ್ಟಲೇ ಭಕ್ತರು ಬರುವ ಹಿನ್ನೆಲೆ ವಿದ್ಯುತ್​ ಮತ್ತು ನೀರಿನ ಸಮಸ್ಯೆ ಹೆಚ್ಚಾಗಿತ್ತು. ಹಾಗಾಗಿ ದೇವಸ್ಥಾನದ ಅಧಿಕಾರಿಗಳು 3.5 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ಸೂಪರ್​ವೈಜರಿ ಕಂಟ್ರೋಲ್​ ಮತ್ತು ಡೇಟಾ ಅಕ್ವೈಜೇಶನ್​ (Supervisory Control and Data Acquisition) ವ್ಯವಸ್ಥೆಯನ್ನು ಸ್ಥಾಪಿಸಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶದ ಮೊದಲ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದ್ದು, ವಿದ್ಯುತ್ ಮತ್ತು ನೀರು ಸರಬರಾಜು ಬಳಕೆಯನ್ನು ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಬಳಸಿ ನಿರ್ವಹಿಸಬಹುದಾಗಿದೆ.

ತಿರುಮಲ ದೇವಸ್ಥಾನದಲ್ಲಿ ವಿದ್ಯುತ್ ಮತ್ತು ನೀರಿನ ಅಭಾವ

ಎಷ್ಟು ಪ್ರಮಾಣದ ನೀರು ಮತ್ತು ವಿದ್ಯುತ್​ ಸರಬರಾಜು ಆಗಿದೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೆಲಸದ ವೇಳೆ ಹೊರಗಡೆ ಇದ್ದರೇ ಅದನ್ನು ಸಹ ಮೊಬೈಲ್​ನಲ್ಲಿ ತಿಳಿಯಬಹುದಾಗಿದೆ. ಬಳಿಕ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಸುಲಭವಾಗಿ ಎಚ್ಚರಿಸಬಹುದಾಗಿದೆ. ಅಪ್ಲಿಕೇಶನ್‌ನ ಅವಶ್ಯಕತೆಗಳಿಗೆ ಅನುಗುಣವಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌, ಜನರೇಟರ್‌, ಫೀಡರ್‌ ಮತ್ತು ನಿಯಂತ್ರಕಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.

ದೇವಾಲಯದೊಳಗಿನ ಓವರ್‌ಹೆಡ್ ಟ್ಯಾಂಕ್ ಮತ್ತು ಇತರ ಟ್ಯಾಂಕರ್‌ಗಳನ್ನು ಕಾಲಕಾಲಕ್ಕೆ ಡಿಜಿಟಲ್ ಪರದೆಯಲ್ಲಿ ಗೋಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆ್ಯಪ್ ಮೂಲಕ ನೀರು ಸರಬರಾಜಿನ ಮೇಲ್ವಿಚಾರಣೆ ಮಾಡಲಾಗುತ್ತದೆ, ಇದು ಟ್ಯಾಂಕ್‌ಗಳಲ್ಲಿ ಲಭ್ಯವಿರುವ ನೀರಿನ ಮಟ್ಟ ಮತ್ತು ದಿನಕ್ಕೆ ಬೇಕಾದ ನೀರಿನ ಪ್ರಮಾಣವನ್ನು ಒದಗಿಸುತ್ತದೆ.

ಟ್ಯಾಂಕ್​ಗಳಿಗೆ ನೀರನ್ನು ತುಂಬಿಸುವಾಗ ಶೇ. 90 ರಷ್ಟು ನೀರು ತುಂಬಿದ್ರೆ, ಸ್ವಯಂಚಾಲಿತವಾಗಿ ನೀರಿನ ಸರಬರಾಜು ಕಡಿತಗೊಳ್ಳುತ್ತದೆ. ಈ ಹೊಸ ಮಾದರಿಯ ತಂತ್ರಜ್ಞಾನದಿಂದ ಎರಡರಿಂದ ಮೂರು ಲಕ್ಷ ಕರೆಂಟ್​ ಬಿಲ್​ ಕಡಿಮೆ ಬರುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Last Updated : Feb 16, 2020, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.