ETV Bharat / bharat

ಮಾಜಿ ಸಿಎಂ ತರುಣ್​ ಗೊಗೊಯ್ ವಿಧಿವಶ: ರಾಷ್ಟ್ರಪತಿ, ಪ್ರಧಾನಿ ಸಂತಾಪ

author img

By

Published : Nov 23, 2020, 7:10 PM IST

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತರುಣ್ ಗೊಗೊಯ್​ ಅವರನ್ನು ನವೆಂಬರ್​ 21ರಂದು ಜಿಎಂಸಿಹೆಚ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಆರು ಗಂಟೆಗಳ ಕಾಲ ಡಯಾಲಿಸಿಸ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ತೀವ್ರ ಚಿಕಿತ್ಸೆ ನೀಡಿದರೂ ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಇಂದು ಸಂಜೆ ಮೃತಪಟ್ಟಿದ್ದಾರೆ.

PM Modi - Tarun Gogoi
ಮೋದಿ- ಗೊಗೊಯ್​

ನವದೆಹಲಿ: ಅಸ್ಸೋಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ (84) ಅವರ ನಿಧನಕ್ಕೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಸ್ಸೋಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಶ್ರೀಮಂತ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅನುಭವಿ ನಾಯಕನನ್ನು ದೇಶ ಕಳೆದುಕೊಂಡಿದೆ. ಅವರ ದೀರ್ಘಾವಧಿಯ ಅಧಿಕಾರಾವಧಿಯು ಅಸ್ಸೋಂನಲ್ಲಿ ಬದಲಾವಣೆಯ ಪರ್ವವಾಗಿತ್ತು ಎಂದು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

  • He will always be remembered for the development of Assam and especially towards his efforts to improve law and order and fighting insurgency in the state. His passing away marks the end of an era. In this hour of grief, condolences to his family, friends and supporters.

    — President of India (@rashtrapatibhvn) November 23, 2020 " class="align-text-top noRightClick twitterSection" data=" ">

ಅಸ್ಸೋಂನ ಅಭಿವೃದ್ಧಿಗೆ ವಿಶೇಷವಾಗಿ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದಲ್ಲಿನ ಬಂಡಾಯದ ವಿರುದ್ಧ ಹೋರಾಡುವ ಅವರ ಪ್ರಯತ್ನಗಳ ಬಗ್ಗೆ ಅವರನ್ನು ಯಾವಾಗಲೂ ಸ್ಮರಿಸಲಾಗುತ್ತದೆ. ಅವರ ನಿಧನವು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ದುಃಖದ ಈ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.

ಸುದೀರ್ಘಕಾಲ ಅಸ್ಸೋಂ ಆಳಿದ್ದ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನ

ತರುಣ್ ಗೊಗೊಯ್ ಅವರು ಜನಪ್ರಿಯ ನಾಯಕ ಮತ್ತು ಅನುಭವಿ ಆಡಳಿತಗಾರರಾಗಿದ್ದರು. ಅಸ್ಸೋಂ ಮತ್ತು ಕೇಂದ್ರದಲ್ಲಿ ಹಲವು ವರ್ಷಗಳ ಕಾಲ ಇದ್ದು ರಾಜಕೀಯ ಅನುಭವ ಗಳಿಸಿದ್ದರು. ದುಃಖದ ಈ ಸಮಯದಲ್ಲಿ ಅವರ ಕುಟುಂಬಸ್ಥರು ಮತ್ತು ಬೆಂಬಲಿಗರೊಂದಿಗೆ ನಾವು ಇದ್ದೇವೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

  • Shri Tarun Gogoi Ji was a popular leader and a veteran administrator, who had years of political experience in Assam as well as the Centre. Anguished by his passing away. My thoughts are with his family and supporters in this hour of sadness. Om Shanti. pic.twitter.com/H6F6RGYyT4

    — Narendra Modi (@narendramodi) November 23, 2020 " class="align-text-top noRightClick twitterSection" data=" ">

ತರುಣ್ ಗೊಗೊಯ್ ನಿಜವಾದ ಕಾಂಗ್ರೆಸ್ ನಾಯಕರಾಗಿದ್ದರು. ಅಸ್ಸೋಂನ ಎಲ್ಲಾ ಜನರು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ನನ್ನ ಮಟ್ಟಿಗೆ ಅವರು ಶ್ರೇಷ್ಠ ಮತ್ತು ಬುದ್ಧಿವಂತ ಶಿಕ್ಷಕರಾಗಿದ್ದರು. ನಾನು ಅವರನ್ನು ಬಹಳವಾಗಿ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಾವು ಅವರನ್ನು ಕಳೆದುಕೊಳೆದುಕೊಂಡಿದ್ದೇವೆ ಎಂದು ರಾಹುಲ್​ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • Shri Tarun Gogoi was a true Congress leader. He devoted his life to bringing all the people and communities of Assam together.

    For me, he was a great and wise teacher. I loved and respected him deeply.

    I will miss him. My love and condolences to Gaurav & the family. pic.twitter.com/jTMfSyAJ6J

    — Rahul Gandhi (@RahulGandhi) November 23, 2020 " class="align-text-top noRightClick twitterSection" data=" ">

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತರುಣ್ ಗೊಗೊಯ್​ ಅವರನ್ನು ನವೆಂಬರ್​ 21ರಂದು ಜಿಎಂಸಿಹೆಚ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಆರು ಗಂಟೆಗಳ ಕಾಲ ಡಯಾಲಿಸಿಸ್ ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ತೀವ್ರ ಚಿಕಿತ್ಸೆ ನೀಡಿದರೂ ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಇಂದು ಸಂಜೆ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.