ETV Bharat / bharat

ಇದು ಅಪರೂಪ: ಅಲಹಾಬಾದ್ ಹೈಕೋರ್ಟ್​​ನಲ್ಲಿ ಪತ್ರವೇ ಪಿಐಎಲ್​ ಆಯ್ತು!

author img

By

Published : May 8, 2020, 11:46 AM IST

ಅಪರೂಪದ ಸನ್ನಿವೇಶವೊಂದರಲ್ಲಿ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರ ಹೆಸರಿಗೆ ಬಂದಿದ್ದ ಪತ್ರವನ್ನು ಅಲಹಾಬಾದ್​ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿದೆ.

Allahabad HC
ಅಲಹಾಬಾದ್ ಹೈಕೋರ್ಟ್​

ಪ್ರಯಾಗ್​ರಾಜ್ (ಉತ್ತರ ಪ್ರದೇಶ)​: ಮುಖ್ಯ ನಾಯಾಧೀಶರ ಹೆಸರಿಗೆ ಬಂದಿದ್ದ ಪತ್ರವೊಂದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ​(ಪಿಐಎಲ್)​ ಆಗಿ ಪರಿವರ್ತಿಸಿದ ಘಟನೆ ನಡೆದ ಅಲಹಾಬಾದ್ ಹೈಕೋರ್ಟ್​ನಲ್ಲಿ ನಡೆದಿದೆ. ಇದನ್ನು ಪತ್ರವನ್ನು ಆಧಾರವಾಗಿಸಿಕೊಂಡು ಹೈಕೋರ್ಟ್​ ಉತ್ತರಪ್ರದೇಶ ಸರ್ಕಾರಕ್ಕೆ ಪ್ರತಿಕ್ರಿಯಿಸುವಂತೆ ನಿರ್ದೇಶನ ನೀಡಿದೆ.

ಪತ್ರವನ್ನು ಪಿಐಎಲ್​ ಆಗಿ ಪರಿವರ್ತನೆ ಮಾಡಿದ ಅಪರೂಪದ ಪ್ರಕರಣ ಇದಾಗಿದ್ದು, ಹೈಕೋರ್ಟ್​ ವಕೀಲ ಗೌರವ್​ ಕುಮಾರ್ ಎಂಬುವವರು ಇದನ್ನು ಹೈಕೋರ್ಟ್​ಗೆ ಸಲ್ಲಿಸಿದ್ದರು. ಪತ್ರದಲ್ಲಿ ಪ್ರಯಾಗರಾಜ್​ ನಿವಾಸಿ ವೀರೇಂದ್ರ ಸಿಂಗ್ ಎಂಬ ಕೊರೊನಾ ಸೋಂಕಿತ ವ್ಯಕ್ತಿಯ ಸಾವಿನ ಬಗ್ಗೆ ಉಲ್ಲೇಖಿಸಿದ್ದರು.

ಹೈಕೋರ್ಟ್​ ರಿಜಿಸ್ಟರ್ ಹೆಸರಿಗೆ ನೋಂದಾಯಿಸಲಾಗಿದ್ದ ಈ ಪತ್ರದಲ್ಲಿ ''ಕ್ವಾರಂಟೈನ್​ ಕೇಂದ್ರಗಳಲ್ಲಿನ ಅಮಾನವೀಯ ವಾತಾವರಣ ಮತ್ತು ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ'' ಎಂಬ ಒಕ್ಕಣೆಯಿದ್ದು, ಕೊರೊನಾ ಸೋಂಕಿತ ವ್ಯಕ್ತಿಯು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆಯಿಲ್ಲದೇ ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟಪಡಿಸಲಾಗಿತ್ತು.

ಅಲಹಾಬಾದ್​ ಮುಖ್ಯ ನ್ಯಾಯಾಧೀಶ ಗೋವಿಂದ್​ ಮಾಥೂರ್​ ಹಾಗೂ ನ್ಯಾಯಮೂರ್ತಿ ಸಿದ್ಧಾರ್ಥ್​ ವರ್ಮ ಈ ಪತ್ರವನ್ನು ಪಿಐಎಲ್​ ಆಗಿ ಪರಿವರ್ತಿಸಿದ್ದು, ಇದರ ಜೊತೆಗೆ ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿಗಳ ಬಗ್ಗೆ ಹರಿದಾಡುತ್ತಿದ್ದ ವಿಡಿಯೋವೊಂದನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಈಗ ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಅಲಹಾಬಾದ್​ ಹೈಕೋರ್ಟ್​ ಕ್ವಾರಂಟೈನ್​ ಕೇಂದ್ರಗಳಲ್ಲಿನ ಚಿಕಿತ್ಸೆ, ವಾತಾವರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.