ETV Bharat / bharat

ಏರ್‌ ಇಂಡಿಯಾ ಪೈಲಟ್‌ಗೆ ಕೊರೊನಾ ಪಾಸಿಟಿವ್‌: ಮಾಸ್ಕೋಗೆ ಹೊರಟಿದ್ದ ವಿಮಾನ ದೆಹಲಿಗೆ ವಾಪಸ್‌

author img

By

Published : May 30, 2020, 3:50 PM IST

ಮಾಸ್ಕೋದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತರಲು ಹೊರಟಿದ್ದ ಏರ್‌ ಇಂಡಿಯಾ ವಿಮಾನದ ಸಿಬ್ಬಂದಿಯೊಬ್ಬರಿಗೆ ಕೋವಿಡ್‌-19 ದೃಢಪಟ್ಟ ಹಿನ್ನೆಲೆಯಲ್ಲಿ ವಿಮಾನ ದೆಹಲಿಗೆ ವಾಪಸ್‌ ಆಗಿದೆ.

air-india-flight-to-moscow-returns-mid-way-due-to-health-issue-of-crew-member
ಏರ್‌ ಇಂಡಿಯಾ ಪೈಲಟ್‌ಗೆ ಕೊರೊನಾ ಪಾಸಿಟಿವ್‌; ಮಾಸ್ಕೋಗೆ ತೆರಳಿದ್ದ ವಿಮಾನ ದೆಹಲಿಗೆ ವಾಪಸ್‌

ನವದೆಹಲಿ: ಏರ್‌ ಇಂಡಿಯಾ ಪೈಲಟ್‌ಗೆ ಕೊರೊನಾ ವೈರಸ್‌ ದೃಢಪಟ್ಟ ಹಿನ್ನೆಲೆಯಲ್ಲಿ ಮಾಸ್ಕೋಗೆ ಹೋಗುತ್ತಿದ್ದ ವಿಮಾನ ದೆಹಲಿಗೆ ವಾಪಸ್‌ ಆಗಿದೆ.

ವಂದೇ ಮಾತರಂ ಅಭಿಯಾನದಡಿ ಮಾಸ್ಕೋದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು A320 ಏರ್‌ ಇಂಡಿಯಾ ಹೊರಟಿತ್ತು. ಆದ್ರೆ ವಿಮಾನದಲ್ಲಿನ ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್‌ ಪತ್ತೆಯಾದ ಪರಿಣಾಮ ಪ್ರಯಾಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಗೆ ವಾಪಸ್‌ ಆಗಿದೆ. ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ಏರ್‌ ಇಂಡಿಯಾದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಸಿಬ್ಬಂದಿಗೆ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ವಿಮಾನವನ್ನು ಉಜ್ಬೇಕಿಸ್ತಾನ್‌ ವಾಯು ನೆಲೆಯಲ್ಲಿ ವಿಮಾನವನ್ನು ಇಳಿಸಲಾಗಿದೆ. ಬಳಿಕ ವಾಪಸ್‌ ಬರುವಂತೆ ಸೂಚಿಸಲಾಗಿತ್ತು. ಇಂದು ಮಧ್ಯಾಹ್ನ 12.30ರ ಸುಮಾರಿಗೆ ವಿಮಾನ ದೆಹಲಿಗೆ ವಾಪಸ್‌ ಆಗಿದೆ. ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರಲು ಬೇರೊಂದು ವಿಮಾನವನ್ನು ಮಾಸ್ಕೋಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.