ETV Bharat / bharat

ರೊಮ್ಯಾಂಟಿಕ್​ ಕ್ರೈಂ​ ಸ್ಟೋರಿ... ತಾಯಿಯ ಫೇಸ್​ಬುಕ್​ ಸ್ನೇಹಕ್ಕೆ 5 ವರ್ಷದ ಮಗು ಬಲಿ..!

author img

By

Published : Jul 2, 2020, 6:57 PM IST

ತಾಯಿಯ ಫೇಸ್​ಬುಕ್​ ಗೆಳೆಯನಿಂದ ಐದು ವರ್ಷದ ಮಗಳು ಬಲಿಯಾಗಿರುವ ಘಟನೆ ತೆಲಂಗಾಣದ ಮೆಡ್ಚಲ್​ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ಜಿಲ್ಲೆಯಾದ್ಯಂತ ಆತಂಕ ಉಂಟು ಮಾಡಿದೆ.

5 years girl killed, 5 years girl killed by mothers fb friend, medchal crime news, 5 ವರ್ಷದ ಮಗು ಕೊಲೆ, ತಾಯಿಯ ಫೇಸ್​ಬುಕ್​ ಗೆಳೆಯನಿಂದ 5 ವರ್ಷದ ಮಗು ಕೊಲೆ, ಮೆಡ್ಚಲ್​ ಅಪರಾಧ ಸುದ್ದಿ,
ತಾಯಿಯ ಫೇಸ್​ಬುಕ್​ ಸ್ನೇಹಕ್ಕೆ 5 ವರ್ಷದ ಮಗು ಬಲಿ

ಮೆಡ್ಚಲ್(ತೆಲಂಗಾಣ)​: ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದ ಗೆಳೆಯನಿಂದ ತಾಯಿಯೊಬ್ಬಳು ಐದು ವರ್ಷದ ಮಗಳನ್ನು ಶಾಶ್ವತವಾಗಿ ಕಳೆದುಕೊಂಡಿರುವ ಘಟನೆ ಪೋಚಾರಂ ಗ್ರಾಮದಲ್ಲಿ ನಡೆದಿದೆ.

ಮಗುವಿನ ತಾಯಿ ಅನುಷಾಳಿಗೆ ಮೂರು ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ಕರುಣಾಕರ್​ ಎಂಬ ವ್ಯಕ್ತಿ ಪರಿಚಯವಾಗಿದ್ದ. ಇವರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಹೀಗೆ ಇವರ ಸ್ನೇಹ ಸಾಗುತ್ತಿದ್ದಾಗ ಕರುಣಾಕರ್​ ತನ್ನ ಸ್ನೇಹಿತ ರಮೇಶ್​ನನ್ನು ಅನುಷಾಗೆ ಪರಿಚಯಿಸಿದ್ದ.

ಕೆಲ ದಿನಗಳ ಬಳಿಕ ರಮೇಶ್​ ಮತ್ತು ಅನುಷಾ ಸ್ನೇಹವೂ ಕರುಣಾಕರ್​ನನ್ನು ದೂರ ಮಾಡಿತು. ಇದರಿಂದ ಕೋಪಗೊಂಡ ಕರುಣಾಕರ್​ ಗುರುವಾರ ಮಧ್ಯಾಹ್ನ 12.30ಕ್ಕೆ ನೇರವಾಗಿ ಅನುಷಾ ಮನೆಗೆ ತೆರಳಿದ್ದಾನೆ. ಈ ವೇಳೆ ಅನುಷಾ ಮನೆಯಲ್ಲಿ ರಮೇಶ್​ ಇದ್ದನು. ಕರುಣಾಕರ್​ ಬರುವುದನ್ನು ಗಮನಿಸಿದ ಅನುಷಾ ಮನೆಯ ಕೋಣೆಯೊಂದರಲ್ಲಿ ರಮೇಶ್​ನನ್ನು ಮುಚ್ಚಿಟ್ಟಿದ್ದಳು.

ಕರುಣಾಕರ್​ಗೆ ರಮೇಶ್​ ಮನೆಯಲ್ಲಿರುವುದು ಗೊತ್ತಾಗಿದ್ದು, ಮತ್ತಷ್ಟು ಕುಪಿತಗೊಂಡಿದ್ದಾನೆ. ಕೋಣೆಯಿಂದ ಹೊರಬರುವಂತೆ ರಮೇಶ್​ಗೆ ಕರುಣಾಕರ್​ ಹೇಳಿದ್ದಾನೆ. ಇಲ್ಲವಾದಲ್ಲಿ ಮಗುವಿನ ಪ್ರಾಣವನ್ನು ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಆದ್ರೂ ಸಹ ರಮೇಶ್​ ಕೋಣೆಯಿಂದ ಹೊರ ಬಾರದ ಹಿನ್ನೆಲೆ ಮಗುವಿನ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಅನುಷಾಳ ಆಕ್ರಂದನ ಕೇಳೆ ರಮೇಶ್​ ಕೋಣೆಯಿಂದ ಹೊರ ಬಂದಿದ್ದಾನೆ. ಈ ವೇಳೆ ಅನುಷಾ ಮತ್ತು ರಮೇಶ್​ ಮೇಲೆ ಕರುಣಾಕರ್​ ಚಾಕುವಿನಿಂದ ದಾಳಿ ಮಾಡಿದ್ದು, ಆಗ ರಮೇಶ್​ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ದಾಳಿಯ ಬಳಿಕ ಕರುಣಾಕರ್ ಸಹ ಕತ್ತು ಕುಯ್ದುಕೊಂಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕರುಣಾಕರ್​ ಸೇರಿದಂತೆ ಮಗುವಿನ ತಾಯಿ ಅನುಷಾಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಮಗುವಿನ ತಂದೆ ಕಲ್ಯಾಣ್​ ಯಾದಾದ್ರಿ ಜಿಲ್ಲೆಯ ಆತ್ಮಕೂರು ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಘಟನೆಯ ಬಗ್ಗೆ ಘಟ್ಕೇಸರ್​ ಪೊಲೀಸರು ಕಲ್ಯಾಣ್​ಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.