ETV Bharat / bharat

ಒಬಿಸಿಗೆ ಶೇ. 27 ಮೀಸಲಾತಿ, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮಸೂದೆ ಪಾಸ್​

author img

By

Published : Jul 23, 2019, 5:19 PM IST

ಸರ್ಕಾರಿ ಕೆಲಸ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇ. 27 ರಷ್ಟು ಮೀಸಲು ಒದಗಿಸುವ ಮಸೂದೆಯು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಈ ಹಿಂದೆ ಇತರ ಹಿಂದುಲಿದ ವರ್ಗಗಳಿಗೆ ಈ ಮೀಸಲಾತಿಯು ಶೇ. 14 ರಷ್ಟಿತ್ತು.

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮಸೂದೆ ಪಾಸ್​

ಭೋಪಾಲ್​ : ಇತರ ಹಿಂದುಳಿದ ವರ್ಗ(ಓಬಿಸಿ)ಗಳಿಗೆ ಸರ್ಕಾರಿ ಕೆಲಸ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 27 ರಷ್ಟು ಮೀಸಲು ಒದಗಿಸುವ ಮಸೂದೆಯು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ.

ಈ ಹಿಂದೆ ರಾಜ್ಯದಲ್ಲಿ ಒಬಿಸಿಗಳಿಗೆ ಈ ಮೀಸಲಾತಿಯು ಶೇ. 14 ರಷ್ಟಿತ್ತು. 2019 ರ ಲೋಕಸಭಾ ಚುನಾವಣೆಗೆ ಮೊದಲು, ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು, ರಾಜ್ಯದಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ಶೇಕಡ 14 ರಿಂದ 27 ಕ್ಕೆ ಹೆಚ್ಚಿಸುವ ನಿರ್ದೇಶನವನ್ನು ಜಾರಿಗೆ ತಂದಿತ್ತು. ಇಂದು ಮಸೂದೆಯು ವಿಧಾನಸಭೆಯಲ್ಲಿ ಅನುಮೋದನೆಗೊಂಡಿದೆ.

ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ ಶೇ. 52ರಷ್ಟು ಇತರ ಹಿಂದುಳಿದ ವರ್ಗದ ಜನರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮೀಸಲಾತಿ ಹೆಚ್ಚಳದಿಂದ ಈ ವರ್ಗದ ಜನರಿಗೆ ಅನುಕೂಲವಾಗಲಿದೆ.

ಇದೇ ವರ್ಷದ ಮಾರ್ಚ್​ನಲ್ಲಿ ಕಮಲ್​ ನಾಥ್​ ನೇತೃತ್ವದ ಸರ್ಕಾರವು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿ ಒದಗಿಸುವುದಾಗಿ ಘೋಷಿಸಿದ್ದರು. ಅಲ್ಲದೆ ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಅವಕಾಶಗಳನ್ನು ನೀಡುವುದಾಗಿ ಹೇಳಿದ್ದರು.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.