ETV Bharat / bharat

ಈ ಬಾರಿ ಲೋಕ ಅಖಾಡದಲ್ಲಿ 213 ಕ್ರಿಮಿನಲ್ ಹಿನ್ನೆಲೆಯುಳ್ಳವರು : ಇದರಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳೇ ಹೆಚ್ಚಂತೆ!

author img

By

Published : Apr 6, 2019, 2:08 PM IST

ಮೊದಲ ಹಂತದ ಲೋಕಸಭೆ ಚುನಾವಣೆಗೆ 213 ಮಂದಿ ಕ್ರಿಮಿನಲ್​ ಹಿನ್ನೆಲೆ ಉಳ್ಳವರು ಸ್ಪರ್ಧಿಸಿದ್ದಾರೆಂದು ADR ವರದಿ ನೀಡಿದೆ

213 ಮಂದಿ ವಿರುದ್ಧ ಕ್ರಿಮಿನಲ್​ ಕೇಸ್​

ನವದೆಹಲಿ: ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಮೊದಲ ಹಂತದ ಲೋಕಸಭೆ ಚುನಾವಣೆಗೆ ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 213 ಮಂದಿ ಕ್ರಿಮಿನಲ್​ ಹಿನ್ನೆಲೆ ಉಳ್ಳವರು ಇದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ನ್ಯಾಷನಲ್​ ಎಲೆಕ್ಷನ್​ ವಾಚ್​ ಅಂಡ್​ ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​ (ADR) ಈ ಬಗ್ಗೆ ವರದಿ ನೀಡಿದ್ದು, ಇದರಲ್ಲಿ ಕೆಲವರ ಮೇಲೆ ಕೊಲೆ, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅಪಹರಣದಂತಹ ಗಂಭೀರ ಪ್ರಕರಣಗಳನ್ನ ಎದುರಿಸುತ್ತಿದ್ದಾರೆ.

ಸದ್ಯ ಸಲ್ಲಿಕೆಯಾಗಿರುವ 1279 ಅಭ್ಯರ್ಥಿಗಳ ಅಫಿಡವಿಟ್​ಗಳಲ್ಲಿ 1266 ಅಫಿಡವಿಟ್​ಗಳನ್ನು ಪರಿಶೀಲಿಸಿ ಸಂಸ್ಥೆ ಈ ವರದಿ ನೀಡಿದೆ. ಉಳಿದ 13 ಅಫಿಡವಿಟ್​ಗಳಲ್ಲಿ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದೆ. ಇಷ್ಟು ಮಂದಿಯಲ್ಲಿ ಶೇ.12ರಷ್ಟು ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಶೇ12ರಷ್ಟು ಅಭ್ಯರ್ಥಿಗಳು ಅಪರಾಧಿಗಳು ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ, 10 ಅಭ್ಯರ್ಥಿಗಳ ಕೊಲೆ ಆರೋಪ ಹೊತ್ತಿದ್ದಾರೆ.

25 ಅಭ್ಯರ್ಥಿಗಳ ಮೇಲೆ ಕೊಲೆ ಯತ್ನ, ನಾಲ್ವರ ಮೇಲೆ ಅಪಹರಣ ಹಾಗೂ 16 ಮಂದಿ ಮೇಲೆ ಮಹಿಳೆಯೆ ಮೇಲೆ ದೌರ್ಜನ್ಯ ಕೇಸ್​ಗಳಿವೆ.

ಏಪ್ರಿಲ್​ 11 ರಂದು 91 ಕ್ಷೇತ್ರಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಮೂವರಿಗಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಹೊತ್ತ ಕಾರಣ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದೆ.

ಇನ್ನು, 83 ಬಿಜೆಪಿ ಅಭ್ಯರ್ಥಿಗಳಲ್ಲಿ 30 ಮಂದಿ, ಕಾಂಗ್ರೆಸ್​ನಲ್ಲಿ 35 ಮಂದಿ, 32 ಬಿಸ್​ಪಿ ಅಭ್ಯರ್ಥಿಗಳ ಪೈಕಿ 8 ಮಂದಿ, 25 ವೈಎಸ್​ಆರ್​ಸಿಪಿ ಅಭ್ಯರ್ಥಿಗಳಲ್ಲಿ 13 ಮಂದಿ, ಟಿಡಿಪಿಯ 25 ಮಂದಿಯಲ್ಲಿ 4 ಅಭ್ಯರ್ಥಿಗಳು ಹಾಗೂ ಟಿಆರ್​ಎಸ್​ನ 17 ಅಭ್ಯರ್ಥಿಗಳ ಪೈಕಿ ಐವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ.

Intro:Body:

ಚುನಾವಣೆ ಕಣದಲ್ಲಿ 213 ಕ್ರಿಮಿನಲ್ ಹಿನ್ನೆಲೆಯವರು: ಕಾಂಗ್ರೆಸ್​ ಅಭ್ಯರ್ಥಿಗಳೇ ಹೆಚ್ಚು!  

213 candidates in first phase of Lok Sabha poll have criminal cases against them: ADR report



ನವದೆಹಲಿ: ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಎಲ್ಲ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಮೊದಲ ಹಂತದ ಲೋಕಸಭೆ ಚುನಾವಣೆಗೆ ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 213 ಮಂದಿ ಕ್ರಿಮಿನಲ್​ ಹಿನ್ನೆಲೆ  ಉಳ್ಳವರು ಎಂದು ವರದಿಯೊಂದು ಬಹಿರಂಗಪಡಿಸಿದೆ. 



ನ್ಯಾಷನಲ್​ ಎಲೆಕ್ಷನ್​ ವಾಚ್​ ಅಂಡ್​ ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​ (ADR)  ಈ ಬಗ್ಗೆ ವರದಿ ನೀಡಿದ್ದು, ಇದರಲ್ಲಿ ಕೆಲವರ ಮೇಲೆ ಕೊಲೆ, ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅಪಹರಣದಂತಹ ಗಂಭೀರ ಪ್ರಕರಣಗಳೂ ದಾಖಲಾಗಿವೆ. 



ಸದ್ಯ  ಸಲ್ಲಿಕೆಯಾಗಿರುವ 1279 ಅಭ್ಯರ್ಥಿಗಳ ಅಫಿಡವಿಟ್​ಗಳಲ್ಲಿ 1266 ಅಫಿಡವಿಟ್​ಗಳನ್ನು ಪರಿಶೀಲಿಸಿ ಸಂಸ್ಥೆ ಈ ವರದಿ ನೀಡಿದೆ. ಉಳಿದ 13 ಅಫಿಡವಿಟ್​ಗಳಲ್ಲಿ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದೆ. ಇಷ್ಟು ಮಂದಿಯಲ್ಲಿ ಶೇ.12ರಷ್ಟು ಅಭ್ಯರ್ಥಿಗಳು  ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಶೇ12ರಷ್ಟು ಅಭ್ಯರ್ಥಿಗಳು ಅಪರಾಧಿಗಳು ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ, 10 ಅಭ್ಯರ್ಥಿಗಳ ಕೊಲೆ ಆರೋಪ ಹೊತ್ತಿದ್ದಾರೆ. 



25 ಅಭ್ಯರ್ಥಿಗಳ ಮೇಲೆ ಕೊಲೆ  ಯತ್ನ, ನಾಲ್ವರ ಮೇಲೆ ಅಪಹರಣ ಹಾಗೂ 16 ಮಂದಿ ಮೇಲೆ ಮಹಿಳೆಯೆ ಮೇಲೆ ದೌರ್ಜನ್ಯ ಕೇಸ್​ಗಳಿವೆ. 



ಏಪ್ರಿಲ್​ 11 ರಂದು  91 ಕ್ಷೇತ್ರಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ  37 ಕ್ಷೇತ್ರಗಳಲ್ಲಿ ರೆಡ್​ ಅಲರ್ಟ್​ ಘೋಸಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಮೂವರಿಗಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಹೊತ್ತ ಕಾರಣ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದೆ. 



ಇನ್ನು, 83 ಬಿಜೆಪಿ ಅಭ್ಯರ್ಥಿಗಳಲ್ಲಿ 30 ಮಂದಿ, ಕಾಂಗ್ರೆಸ್​ನಲ್ಲಿ 35 ಮಂದಿ, 32 ಬಿಸ್​ಪಿ ಅಭ್ಯರ್ಥಿಗಳ ಪೈಕಿ 8 ಮಂದಿ, 25 ವೈಎಸ್​ಆರ್​ಸಿಪಿ ಅಭ್ಯರ್ಥಿಗಳಲ್ಲಿ 13 ಮಂದಿ, ಟಿಡಿಪಿಯ 25 ಮಂದಿಯಲ್ಲಿ 4 ಅಭ್ಯರ್ಥಿಗಳು ಹಾಗೂ ಟಿಆರ್​ಎಸ್​ನ 17 ಅಭ್ಯರ್ಥಿಗಳ ಪೈಕಿ ಐವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. 





213 candidates in first phase of Lok Sabha poll have criminal cases against them: ADR report



New Delhi: Two hundred and thirteen candidates contesting in the first phase of Lok Sabha election have declared criminal cases against them including those relating to murder, crime against women and kidnapping among other serious offences. The data is based on a report by the National  Election Watch and Association for Democratic Reforms (ADR) in which the affidavits of 1266 out of 1279 candidates, who are contesting in the first phase were analysed. The affidavits of 13 candidates have not been analysed due to unavailability of their properly scanned and complete affidavits.



According to the report, 12 per cent out of 1266 have declared serious criminal cases against themselves, 12 per cent are convicted criminals, 10 candidates have declared cases related to murder (IPC Section 302) against themselves.



Twenty five candidates have declared cases related to attempt to murder (IPC Section 307) against themselves, four have declared cases related to kidnapping, 16  have declared cases related to crime against women and 12 have declared cases related to hate speech against themselves.



Of the 91 constituencies going to polls on April 11, 37 are red alert constituencies, which means three or more candidates contesting the polls have declared criminal cases against themselves.



Among the major parties, 30 out of 83 candidates with criminal cases are from BJP, 35 out of 83 candidates are from Congress, 8 out of 32 candidates are from BSP, 13 out of 25 candidates from YSRCP, 4 out of 25 candidates are from TDP and 5 out of 17 candidates are from TRS.



91 constituencies will vote in the first phase of national election, which will be held on April 11.   



The seven-phase nation election begins on April 11 and will end on May 19. The counting of votes will take place on May 23. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.