ETV Bharat / bharat

ಮತದಾನದ ದಿನವೇ ಬಿಹಾರದಲ್ಲಿ ಸುಧಾರಿತ ಸ್ಫೋಟಕ ಪತ್ತೆ!

author img

By

Published : Oct 28, 2020, 9:22 AM IST

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಔರಂಗಾಬಾದ್‌ನ ಧಿಬ್ರಾ ಪ್ರದೇಶದಲ್ಲಿ ಎರಡು ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿದೆ.

2 improvised explosive devices defused in Aurangabad's Dhibra area
ಬಿಹಾರದಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆ

ಔರಂಗಾಬಾದ್ (ಬಿಹಾರ): ಔರಂಗಾಬಾದ್‌ನ ಧಿಬ್ರಾ ಪ್ರದೇಶದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಪೊಲೀಸರು ಎರಡು ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿದ್ದಾರೆ.

ಬಿಹಾರದಲ್ಲಿ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ 16 ಜಿಲ್ಲೆಗಳ 71 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ರಾಷ್ಟ್ರೀಯ ಜನತಾದಳ (ಆರ್‌ಜೆಡಿ) 42, ಜನತಾದಳ (ಯುನೈಟೆಡ್) 35, ಬಿಜೆಪಿಯಿಂದ 29, ಕಾಂಗ್ರೆಸ್​​ನಿಂದ 21 ಮತ್ತು ಎಡ ಪಕ್ಷಗಳಿಂದ 8 ಸೇರಿದಂತೆ 1,066 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚುನಾವಣೆ ಸಮಯದಲ್ಲಿ ಬಾಂಬ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸುಧಾರಿತ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿ ಅನಾಹುತ ತಪ್ಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.