ETV Bharat / bharat

ಪಂಜಾಬ್‌ಗೆ ಇನ್ಮೇಲೆ ಶಕ್ತಿ'ಮಾನ್‌' ಆಡಳಿತ.. ಪದಗ್ರಹಣ ಬಳಿಕ ಸಿಎಂ ಮೊದಲ ಆದೇಶ ಬಲು ಖಡಕ್‌..

author img

By

Published : Mar 16, 2022, 5:07 PM IST

ಪಂಜಾಬ್​ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಭಗವಂತ್ ಮಾನ್​​ ಮಾಜಿ ಸಚಿವರು, ಶಾಸಕರಿಗೆ ನೋಟಿಸ್​ ಹೊರಡಿಸಿದ್ದು, ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ..

Punjab government on bungalows to ministers and MLAs
Punjab government on bungalows to ministers and MLAs

ಚಂಡೀಗಢ(ಪಂಜಾಬ್​) : ಪಂಜಾಬ್​ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಮಾಜಿ ಸಚಿವರು, ಶಾಸಕರಿಗೆ ಭಗವಂತ್ ಮಾನ್​ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಮನೆ ಖಾಲಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

57 ಮಾಜಿ ಸಚಿವರು ಹಾಗೂ ಶಾಸಕರಿಗೆ ನೋಟಿಸ್​ ಹೊರಡಿಸಲಾಗಿದ್ದು, ಮಾರ್ಚ್​​ 26ರೊಳಗೆ ಸರ್ಕಾರಿ ಫ್ಲ್ಯಾಟ್​​ ಮತ್ತು ಬಂಗಲೆಗಳನ್ನ ಖಾಲಿ ಮಾಡುವಂತೆ ನೋಟಿಸ್​ ಹೊರಡಿಸಲಾಗಿದೆ.

ಈ ಹಿಂದಿನ ಚರಣ್​ ಸಿಂಗ್​​ ಚನ್ನಿ ಸರ್ಕಾರ 17 ಮಾಜಿ ಸಚಿವರು ಹಾಗೂ 40 ಶಾಸಕರಿಗೆ ಸರ್ಕಾರಿ ಬಂಗಲೆ ಹಾಗೂ ಫ್ಲ್ಯಾಟ್​ಗಳನ್ನ ವಾಸಮಾಡಲು ನೀಡಿತ್ತು. ಇದೀಗ ಅವುಗಳನ್ನೆಲ್ಲ ತೊರೆಯುವಂತೆ ಪಂಜಾಬ್ ನೂತನ ಸಿಎಂ ಮಾನ್​ ಆದೇಶ ಹೊರಡಿಸಿದ್ದಾರೆ. ಇವರಿಗೆ ನೀಡಿರುವ ನಿವಾಸಗಳನ್ನ ಖಾಲಿ ಮಾಡುತ್ತಿದ್ದಂತೆ ಹೊಸ ಸಚಿವರು ಹಾಗೂ ಶಾಸಕರಿಗೆ ಈ ಬಂಗಲೆ, ಫ್ಲ್ಯಾಟ್ ಹಂಚಿಕೆ ಮಾಡುವ ಸಾಧ್ಯತೆ ಇದೆ.

ಪಂಜಾಬ್​ನ 18ನೇ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್​ ಇಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಾರ್ಚ್​​ 19ರಂದು ರಾಜಭವನದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಮಾರ್ಚ್​​ 17ರಂದು ಪಂಜಾಬ್​​ನ ಎಲ್ಲ 117 ಶಾಸಕರಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಬರೋಬ್ಬರಿ 92 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಇದನ್ನೂ ಓದಿ: ಪಂಜಾಬ್​​​ಗೋಸ್ಕರ ಒಟ್ಟಾಗಿ ಕೆಲಸ ಮಾಡೋಣ.. ಭಗವಂತ್ ಮಾನ್​ಗೆ ನಮೋ ಅಭಿನಂದನೆ

VIP ಸಂಸ್ಕೃತಿಗೆ ಬ್ರೇಕ್​ ಹಾಕಿರುವ ಸಿಎಂ : ಪಂಜಾಬ್​​ನಲ್ಲಿ ಮಾಜಿ ಸಂಸದರು, ಮಾಜಿ ಸಚಿವರು, ಶಾಸಕರು ಸೇರಿದಂತೆ ವಿವಿಐಪಿಗಳಿಗೆ ನೀಡಿರುವ ಭದ್ರತೆಯನ್ನು ತಕ್ಷಣವೇ ಹಿಂಪಡೆದುಕೊಳ್ಳುವಂತೆ ಈಗಾಗಲೇ ಅವರು ಆದೇಶ ಹೊರಡಿಸಿದ್ದಾರೆ. ಬಾದಲ್​ ಕುಟುಂಬ ಹೊರತುಪಡಿಸಿ, ಉಳಿದವರಿಗೆ ನೀಡಿರುವ ಭದ್ರತೆ ಹಿಂಪಡೆದುಕೊಳ್ಳಲು ಸೂಚಿಸಿದ್ದಾರೆ.

ಆದರೆ, ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬಾದಲ್​ ಕುಟುಂಬ ಹೊರತುಪಡಿಸಿ, ಮಾಜಿ ಸಿಎಂಗಳಾದ ಕ್ಯಾಪ್ಟನ್​​ ಅಮರೀಂದರ್ ಸಿಂಗ್​, ಚರಣ್​ಜಿತ್ ಸಿಂಗ್​ ಚನ್ನಿ, ಮಾಜಿ ಸಚಿವರು, ಸಂಸದರು, ಶಾಸಕರು, ಕಾಂಗ್ರೆಸ್​ ಹಾಗೂ ಅಕಾಲಿದಳದ ನಾಯಕರ ಭದ್ರತೆಯನ್ನು ಹಿಂಪಡೆದುಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.