ETV Bharat / bharat

ರೈಲಿಗೆ ಸಿಲುಕಿ ಕಟ್ ಆದ ಮುಂಗೈ ಎತ್ತಿಕೊಂಡು ಬಂದ ವ್ಯಕ್ತಿ..ಆಸ್ಪತ್ರೆಗೆ ದಾಖಲು, ಭೀಕರ ವಿಡಿಯೋ ವೈರಲ್​

author img

By ETV Bharat Karnataka Team

Published : Sep 5, 2023, 3:59 PM IST

ವ್ಯಕ್ತಿಯೊಬ್ಬ ಕಟ್​ ಆಗಿದ್ದ ತನ್ನದೇ ಕೈಯನ್ನು ತಾನೇ ಹಿಡಿದುಕೊಂಡು ಆಸ್ಪತ್ರೆ ಕಡೆಗೆ ಬಂದ ವಿಡಿಯೋ ವೈರಲ್​ ಆಗಿದೆ. ಬಿಹಾರದಲ್ಲಿ ಈ ಘಟನೆ ನಡೆದಿದೆ.

ರೈಲಿಗೆ ಸಿಲುಕಿ ಕಟ್ ಆದ ಮುಂಗೈ ಎತ್ತಿಕೊಂಡು ಬಂದ ವ್ಯಕ್ತಿ
ರೈಲಿಗೆ ಸಿಲುಕಿ ಕಟ್ ಆದ ಮುಂಗೈ ಎತ್ತಿಕೊಂಡು ಬಂದ ವ್ಯಕ್ತಿ

ಪಾಟ್ನಾ (ಬಿಹಾರ) : ಇಲ್ಲಿನ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬ ಕಟ್​ ಆಗಿದ್ದ ಮುಂಗೈಯನ್ನು ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದ ಭೀಕರ ವಿಡಿಯೋವೊಂದು ವೈರಲ್​ ಆಗಿದೆ. ತಕ್ಷಣವೇ ಆತನ ನೆರವಿಗೆ ಧಾವಿಸಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾಗಲ್ಪುರ ಜಿಲ್ಲೆಯ ಸುಲ್ತಾನ್​ಗಂಜ್​ ರೈಲ್ವೆ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ವ್ಯಕ್ತಿಯೊಬ್ಬನ ಕೈ ತುಂಡಾಗಿ ರಕ್ತ ಬಸಿಯುತ್ತಿತ್ತು. ಕಟ್​ ಆದ ಕೈಯನ್ನು ಆತ ಮತ್ತೊಂದು ಕೈಯಲ್ಲಿ ಹಿಡಿದುಕೊಂಡು ವೇಗವಾಗಿ ಮಾರುಕಟ್ಟೆಯ ಕಡೆಗೆ ಹೋಗುತ್ತಿರುವುದನ್ನು ಜನರು ನೋಡಿ ಬೆಚ್ಚಿದ್ದಾರೆ. ಮೊದಮೊದಲು ಆತನನ್ನು ಜನರು ಹುಚ್ಚ ಎಂದು ಭಾವಿಸಿದ್ದರು.

ಇದಾದ ಬಳಿಕ ಆತನನ್ನು ವಿಚಾರಿಸಿದಾಗ ರೈಲಿಗೆ ಸಿಲುಕಿ ಮುಂಗೈ ಕಟ್​ ಆಗಿದೆ. ಸುರಿಯುತ್ತಿರುವ ರಕ್ತದ ನಡುವೆಯೇ ಅದನ್ನು ಹಿಡಿದುಕೊಂಡು ಬಂದಿದ್ದೇನೆ. ಆಸ್ಪತ್ರೆಗೆ ಸೇರಲು ನಾನೇ ಕಟ್​ ಆದ ಕೈಯನ್ನು ತಂದಿದ್ದೇನೆ ಎಂದು ತಿಳಿಸಿದ್ದಾನೆ. ತುಂಡರಿಸಿದ ಕೈ ತೆಗೆದುಕೊಂಡು ಬಂದಿದ್ದ ಬಗ್ಗೆ ಮಾಹಿತಿ ಪಡೆದ ಸುಲ್ತಾನ್​ಗಂಜ್​ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ, ಕಟ್​ ಆಗಿದ್ದ ಕೈಗೆ ಬಟ್ಟೆ ಕಟ್ಟಿ, ಪ್ರಥಮ ಚಿಕಿತ್ಸೆ ನೀಡಿ, ಆತನನ್ನು ಅಲ್ಲಿಂದ ರೆಫರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

ಕೈ ಕಟ್​ ಆದ ವ್ಯಕ್ತಿಗೆ ರೆಫರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಉತ್ತಮ ಚಿಕಿತ್ಸೆಗಾಗಿ ಭಾಗಲ್​ಪುರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ರೈಲಿಗೆ ಸಿಲುಕಿ ವ್ಯಕ್ತಿ ಕೈ ಕಳೆದುಕೊಂಡಿದ್ದಾನೆ. ಧೈರ್ಯ ಮಾಡಿ ಆತನೇ ಕಟ್​ ಆದ ಕೈಯನ್ನು ಹೊತ್ತು ತಂದಿದ್ದಾನೆ. ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುವನ್ನು ಸುಮನ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್​ ಆದ ಕೈ ಕೊಂಡೊಯ್ದ ನಾಯಿ : ಬೆಂಗಳೂರಿನಲ್ಲಿ ಈಚೆಗೆ ಕುಡಿದ‌ ನಶೆಯಲ್ಲಿ ಎರಡು ಗ್ಯಾಂಗ್​ಗಳ ನಡುವೆ‌ ಮಾರಾಮಾರಿ ನಡೆದು, ಜಗಳದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಯುವಕನೊಬ್ಬ ತನ್ನ ಎಡ‌ ಮುಂಗೈ ಕಳೆದುಕೊಂಡಿದ್ದ. ನೆಲಕ್ಕೆ ಬಿದ್ದಿದ್ದ ಕೈಯನ್ನು ಬೀದಿ ನಾಯಿಯೊಂದು ಕಚ್ಚಿಕೊಂಡು ಹೋದ ಘಟನೆ ಬೆಳಕಿಗೆ ಬಂದಿತ್ತು.

ಮದ್ಯದ ಅಂಗಡಿಯಲ್ಲಿ ಎರಡು ಗುಂಪುಗಳ ಮಧ್ಯೆ ಯಾವುದೋ ಕಾರಣಕ್ಕಾಗಿ ಭೀಕರ ಕಾಳಗ ನಡೆದಿತ್ತು. ಈ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆದಾಗ ಯುವಕನ ಕೈ ಕಟ್​ ಆಗಿತ್ತು. ಅದು ರಸ್ತೆಯ ಮೇಲೆ ಬಿದ್ದಿತ್ತು. ಅಲ್ಲಿಯೇ ಇದ್ದ ನಾಯಿಯೊಂದು ಅದನ್ನು ಕಚ್ಚಿಕೊಂಡು ಹೋಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಇದನ್ನೂ ಓದಿ: ಶಿವಮೊಗ್ಗ: ಭತ್ತದ ಕಟಾವು ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತನ ಕೈ ಕಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.