ETV Bharat / bharat

ಲಷ್ಕರ್ ಎ ತೊಯ್ಬಾ ಮುಖ್ಯಸ್ಥನ ಸಂಪರ್ಕದಲ್ಲಿದ್ದ ಸಹಚರರಿಬ್ಬರು ವಶಕ್ಕೆ

author img

By ETV Bharat Karnataka Team

Published : Sep 4, 2023, 9:33 AM IST

Updated : Sep 4, 2023, 10:03 AM IST

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಉತ್ತಮ ಯಶಸ್ಸನ್ನು ಸಾಧಿಸಿವೆ. ಕೇಂದ್ರಾಡಳಿತ ಪ್ರದೇಶದ ಬಾರಾಮುಲ್ಲಾದಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಶಂಕಿತ ಸಹಚರರನ್ನು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದೆ.

Baramulla Police arrested  Baramulla Police arrested two LeT OGWs  Baramulla Police  ಲಷ್ಕರ್ ಎ ತೊಯ್ಬಾ ಮುಖ್ಯಸ್ಥ  ಮುಖ್ಯಸ್ಥನ ಸಂಪರ್ಕದಲ್ಲಿದ್ದ ಸಹಚರರಿಬ್ಬರ ಬಂಧನ  ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಭದ್ರತಾ ಪಡೆಗಳು ಉತ್ತಮ ಯಶಸ್ಸ  ಕೇಂದ್ರಾಡಳಿತ ಪ್ರದೇಶದ ಬಾರಾಮುಲ್ಲಾ  ಕಣಿವೆ ರಾಜ್ಯಗಳಲ್ಲಿ ಉಗ್ರರ ಉಪಟಳ  ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ  ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುಪ್ತಚರ ಆಧಾರ
ಲಷ್ಕರ್ ಎ ತೊಯ್ಬಾ ಮುಖ್ಯಸ್ಥನ ಸಂಪರ್ಕದಲ್ಲಿದ್ದ ಸಹಚರರಿಬ್ಬರ ಬಂಧನ

ಬಾರಾಮುಲ್ಲಾ(ಜಮ್ಮು ಕಾಶ್ಮೀರ): ಕಣಿವೆ ರಾಜ್ಯಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಸೇನೆ ಸದಾ ಸಕ್ರಿಯವಾಗಿರುತ್ತದೆ. ಭಾನುವಾರದಂದು ಜಂಟಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿವೆ. ಲಷ್ಕರ್ ಜೊತೆ ನಂಟು ಹೊಂದಿರುವ ಇಬ್ಬರು ಶಂಕಿತರನ್ನು ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ಸಂಸ್ಥೆ ಇಬ್ಬರನ್ನೂ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದೆ. ಇವರ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖಾ ಪ್ರಯತ್ನಿಸುತ್ತಿದೆ.

ಮಾಹಿತಿಯ ಪ್ರಕಾರ, ಜಮ್ಮು ಕಾಶ್ಮೀರ ಪೊಲೀಸರು ಗುಪ್ತಚರ ಆಧಾರದ ಮೇಲೆ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಲಷ್ಕರ್‌ನ ಇಬ್ಬರು ಒಜಿಡಬ್ಲ್ಯೂಗಳನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಶಂಕಿತರು ವಾಗುರಾ ಸೇತುವೆಯತ್ತ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಭದ್ರತಾ ಪಡೆಗಳನ್ನು ನೋಡಿದ ಬಳಿಕ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅಲರ್ಟ್ ಆದ ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಇಬ್ಬರನ್ನೂ ಹಿಡಿದಿವೆ. ಬಂಧಿತರನ್ನು ತೌಸೀಫ್ ರಂಜಾನ್ ಭಟ್ ಮತ್ತು ಮೊಯಿನ್ ಅಮೀನ್ ಭಟ್ ಅಲಿಯಾಸ್ ಮೋಮಿನ್ ಎಂದು ಗುರುತಿಸಲಾಗಿದೆ.

ಇಬ್ಬರೂ ಬಾರಾಮುಲ್ಲಾದ ಶೀರಿ ನಿವಾಸಿಗಳು. ತನಿಖೆಯ ಸಮಯದಲ್ಲಿ ಮೋಮಿನ್‌ನಿಂದ ಮ್ಯಾಗಜೀನ್‌ನೊಂದಿಗೆ ಚೈನೀಸ್ ಪಿಸ್ತೂಲ್ ಮತ್ತು ದೊಡ್ಡ ಪ್ರಮಾಣದ ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತೌಸಿಫ್‌ನಿಂದ ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ವಿಚಾರಣೆ ವೇಳೆ ಶಂಕಿತ ಆರೋಪಿಗಳು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗ್ತಿದೆ. ಶಂಕಿತರಿಬ್ಬರು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನಿ ಭಯೋತ್ಪಾದಕರು ಇಲ್ಲಿನ ಎಲ್ಲ ಮಾಹಿತಿಯನ್ನು ತಮ್ಮ ಮೇಲಧಿಕಾರಿಗಳಿಗೆ ರವಾನಿಸುತ್ತಿದ್ದರು. ಭದ್ರತಾ ಪಡೆಗಳ ಮೇಲೆ ದಾಳಿ ಮತ್ತು ಉದ್ದೇಶಿತ ಹತ್ಯೆಗಳನ್ನು ನಡೆಸಿದ ನಂತರ ಅವರನ್ನು ಭಯೋತ್ಪಾದಕರಾಗಿ ಸಕ್ರಿಯಗೊಳಿಸಬೇಕಿತ್ತು. ವಿಚಾರಣೆ ವೇಳೆ ಮೊಯಿನ್ ಅವರು ವಿದೇಶಿ ಭಯೋತ್ಪಾದಕ ಉಸ್ಮಾನ್ ಜೊತೆ ಸಂಪರ್ಕ ಹೊಂದಿದ್ದು, ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದಾಗ ಆತನಿಗೆ ಚಿಕಿತ್ಸೆ ನೀಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಮೊಯಿನ್ ಉಸ್ಮಾನ್ ಮತ್ತು ಇನ್ನೊಬ್ಬ ಭಯೋತ್ಪಾದಕ ಹಿಲಾಲ್ ಅಹ್ಮದ್ ಶೇಖ್‌ಗೆ ಹಲವಾರು ಬಾರಿ ವ್ಯವಸ್ಥಾಪನಾ ಬೆಂಬಲವನ್ನು ನೀಡಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಓದಿ: ಪಾಕ್​ನಿಂದ ಪೂರೈಸಿದ ಫೈಟರ್ ಜೆಟ್‌ಗಳು ಕಾರ್ಯಾಚರಣೆಗೆ ಅನರ್ಹವಾಗಿವೆ ಎಂದು ಮ್ಯಾನ್ಮಾರ್​ ಆರೋಪ: ವರದಿ

Last Updated : Sep 4, 2023, 10:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.